ಸ್ವಾತಂತ್ರ್ಯ ದಿನಾಚರಣೆಗೆ ತೆರೆದಿರಲಿದೆ ಮೈಸೂರು ಮೃಗಾಲಯ, ಸಿಬ್ಬಂದಿಗೆ ವಾರದ ರಜೆ ರದ್ದು

| Updated By: ಆಯೇಷಾ ಬಾನು

Updated on: Aug 12, 2023 | 8:38 AM

ಆಗಸ್ಟ್ 15ರಂದು ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು ಎಂದು ಮೈಸೂರು ಮೃಗಾಲಯ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಸ್ವಾತಂತ್ರ್ಯ ದಿನಾಚರಣೆಗೆ ತೆರೆದಿರಲಿದೆ ಮೈಸೂರು ಮೃಗಾಲಯ, ಸಿಬ್ಬಂದಿಗೆ ವಾರದ ರಜೆ ರದ್ದು
ಮೈಸೂರು ಮೃಗಾಲಯ
Follow us on

ಮೈಸೂರು, ಆ.12: ಆಗಸ್ಟ್ 15ರ ಮಂಗಳವಾರ 77ನೇ ಸ್ವಾತಂತ್ರ್ಯ ದಿನಾಚರಣೆ(Independence Day) ಹಿನ್ನೆಲೆ ಮೈಸೂರು ಮೃಗಾಲಯದ(Sri Chamarajendra Zoological Gardens) ವಾರದ ರಜೆ ರದ್ದು ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಮಂಗಳವಾರದ ವಾರದ ರಜೆ ರದ್ದು ಮಾಡಲಾಗಿದೆ. ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು ಎಂದು ಮೈಸೂರು ಮೃಗಾಲಯ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಸಾಮಾನ್ಯವಾಗಿ ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರತಿ ಮಂಗಳವಾರ ವಾರದ ರಜೆ ಇರುತ್ತಿತ್ತು. ಆದರೆ, ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಮಂಗಳವಾರ ಬಂದಿದ್ದು ಅಂದು ಸರ್ಕಾರಿ ರಜೆ ಇದೆ. ಹೀಗಾಗಿ ಮೃಗಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆ ಇದ್ದು ವಾರದ ರಜೆಯನ್ನು ರದ್ದು ಮಾಡಲಾಗಿದೆ. ಹಾಗೂ ಮೃಗಾಲಯ ತೆರೆದಿರಲಿದೆ ಎಂದು ಮೈಸೂರು ಮೃಗಾಲಯ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: ಮೈಸೂರು ಮೃಗಾಲಯಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ: ಸಿಂಹದ ಮರಿಗಳಿಗೆ ನಾಮಕರಣ

ಮೈಸೂರು ಮೃಗಾಲಯವನ್ನು 1892ರಲ್ಲಿ ಮಹಾರಾಜ ಚಾಮರಾಜೇಂದ್ರ ಒಡೆಯರ್ ಅವರು  ಸ್ಥಾಪಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಮೃಗಾಲಯವನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಇದು ಸುಮಾರು 157 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಇದು ಭಾರತದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಮೃಗಾಲಯಗಳಲ್ಲಿ ಒಂದಾಗಿದೆ.

ಈ ಮೃಗಾಲಯವನ್ನು ಆರಂಭದಲ್ಲಿ ಅರಮನೆ ಮೃಗಾಲಯ ಎಂದು ಕರೆಯಲಾಗುತ್ತಿತ್ತು. ರಾಜಮನೆತನದವರು ಮಾತ್ರ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೆ, ಮಹಾರಾಜ ಚಾಮರಾಜೇಂದ್ರ ಒಡೆಯರ್ ನಂತರ ಜನಸಾಮಾನ್ಯರಿಗೂ ಪ್ರವೇಶಕ್ಕೆ ಅನುಮತಿ ನೀಡಿದರು.  1909 ರಲ್ಲಿ ಮೃಗಾಲಯವನ್ನು ಶ್ರೀ ಚಾಮರಾಜೇಂದ್ರ ಮೃಗಾಲಯ ಎಂದು ಮರುನಾಮಕರಣ ಮಾಡಲಾಯಿತು. ಚಾಮರಾಜೇಂದ್ರ ಮಹಾರಾಜರು ಯುರೋಪ್, ಆಫ್ರಿಕಾಕ್ಕೆ ಭೇಟಿ ನೀಡಿದಾಗ ತಮ್ಮನ್ನು ಆಕರ್ಷಿಸುವ ಪ್ರಾಣಿಗಳನ್ನು ತರುತ್ತಿದ್ದರು. ಇವುಗಳಲ್ಲಿ ಜಿರಾಫೆ, ಜಿಂಕೆ, ಕರಡಿಗಳು, ಚಿಂಪಾಂಜಿ ಮತ್ತು ಪ್ರೈಮೇಟ್‌ಗಳು ಸೇರಿವೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ