ಮೈಸೂರು: ನಾಗರಹೊಳೆಯಲ್ಲಿ ಹುಲಿಯ ಮೃತದೇಹ ಪತ್ತೆ, ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಅಗ್ನಿ ಅವಘಡ

| Updated By: ganapathi bhat

Updated on: Mar 11, 2022 | 9:57 AM

ಅರಣ್ಯ ರಕ್ಷಕರು ಸಿಬ್ಬಂದಿಗಳ ಗಸ್ತು ವೇಳೆ ಹುಲಿಯ ಶವ ಕಂಡುಬಂದಿದೆ. ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗುವುದು. ಹುಲಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ತಿಳಿಸಲಾಗಿದೆ.

ಮೈಸೂರು: ನಾಗರಹೊಳೆಯಲ್ಲಿ ಹುಲಿಯ ಮೃತದೇಹ ಪತ್ತೆ, ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಅಗ್ನಿ ಅವಘಡ
ನಾಗರಹೊಳೆಯಲ್ಲಿ ಹುಲಿಯ ಮೃತದೇಹ ಪತ್ತೆ
Follow us on

ಮೈಸೂರು: ಇಲ್ಲಿನ ಕಾಡಿನೊಳಗೆ ಹುಲಿಯ ಮೃತದೇಹ ಪತ್ತೆಯಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬೇಣಿ‌ ಹತ್ತು ಹಾಡಿ ಹಿಂಭಾಗ ಶವ ಪತ್ತೆ ಆಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ವ್ಯಾಪ್ತಿಯಲ್ಲಿ ಅರಣ್ಯ ರಕ್ಷಕರು ಸಿಬ್ಬಂದಿಗಳ ಗಸ್ತು ವೇಳೆ ಹುಲಿಯ ಶವ ಕಂಡುಬಂದಿದೆ. ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗುವುದು. ಹುಲಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ತಿಳಿಸಲಾಗಿದೆ.

ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬೆಂಕಿ ಅವಘಡ

ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ. ಒಣಗಿದ ಕುರುಚಲು ಗಿಡಗಳಿಗೆ ಬೆಂಕಿ ತಗುಲಿದ್ದು ಸುಮಾರು 1 ಎಕರೆಯಷ್ಟು ಪ್ರದೇಶ ಬೆಂಕಿಗಾಹುತಿ ಆಗಿದೆ. ಕುರುಚಲು ಗಿಡಗಳು ನಾಶವಾಗಿ, ಮರಗಳಿಗೆ ಕೊಂಚ ಹಾನಿ ಉಂಟಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಮೈಸೂರಿನಲ್ಲಿ 175.5 ಲೀಟರ್ ಅಕ್ರಮ ಮದ್ಯ ನಾಶ

ಮೈಸೂರಿನಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 175.5 ಲೀಟರ್ ಅಕ್ರಮ ಮದ್ಯ ನಾಶ ಮಾಡಲಾಗಿದೆ. ಹುಣಸೂರು ಅಬಕಾರಿ ಇನ್ಸಪೆಕ್ಟರ್ ಕಚೇರಿಯಲ್ಲಿ ನಾಶ ಮಾಡಲಾಗಿದ್ದು ಸುಮಾರು 70 ಸಾವಿರ ಬೆಲೆಬಾಳುವ ವಿವಿಧ ಬ್ರಾಂಡ್‌ನ ಮದ್ಯ ನಾಶ ಮಾಡಲಾಗಿದೆ. ಹುಣಸೂರು ಅಬಕಾರಿ ಇಲಾಖೆ ಹಾಗೂ ಹುಣಸೂರು ಪೊಲೀಸರು ವಶಪಡಿಸಿಕೊಂಡಿದ್ದ ಮದ್ಯ ಇದಾಗಿದೆ. ಸ್ಯಾಚೆಟ್‌ನಿಂದ ನೆಲಕ್ಕೆ ಸುರಿದು ನಾಶ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ನಿಯಂತ್ರಣ ತಪ್ಪಿ ಬೈಕ್ ಅಪಘಾತ; ಸವಾರ ಸಾವು

ನಿಯಂತ್ರಣ ತಪ್ಪಿ ಬೈಕ್ ಅಪಘಾತ ಉಂಟಾಗಿ ಸವಾರ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಜಡೆಯಪ್ಪ 38 ಮೃತ ದುರ್ದೈವಿ. ಮೈಸೂರಿನ ಲಿಂಗಾಂಬುದಿ ಪಾಳ್ಯದ ಜಂಕ್ಷನ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಜಡೆಯಪ್ಪ ತಲೆಗೆ ಪೆಟ್ಟು ಬಿದ್ದಿತ್ತು. ಸ್ಥಳೀಯರು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜಡೆಯಪ್ಪ ಸಾವನ್ನಪ್ಪಿದ್ದಾರೆ. ಕೆ ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೆಲಮಂಗಲ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸೆರೆಯಾದ ಚಿರತೆ

ಇತ್ತ ನೆಲಮಂಗಲದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಇಲ್ಲಿನ ಗೌಡಯ್ಯನಪಾಳ್ಯದ ಬಳಿ ಎರಡು ವರ್ಷದ ಹೆಣ್ಣು ಚಿರತೆ ಸೆರೆ ಸಿಕ್ಕಿದೆ. ಕಳೆದ ಒಂದು ತಿಂಗಳಿಂದ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಸಾಕು ಪ್ರಾಣಿಗಳನ್ನ ತಿಂದು ಉಪಟಳ ತೋರುತ್ತಿದ್ದ ಚಿರತೆ ಇದೀಗ ಎರಡು ದಿನದ ಬಳಿಕ ಚಿರತೆ ಬೋನಿಗೆ ಬಿದ್ದಿದೆ. ಗ್ರಾಮಸ್ಥರ ದೂರಿನ ಅಧಾರದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇಟ್ಟಿದ್ದರು. ರಕ್ಷಿಸಲ್ಪಟ್ಟ ಚಿರತೆಯನ್ನ ಮುತ್ತತ್ತಿ ಅರಣ್ಯ ವಲಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಚಿರತೆ ಸೆರೆಯಿಂದ ಗ್ರಾಮಸ್ಥರ ಆತಂಕ ದೂರಾಗಿದ್ದು, ನಿಟ್ಟುಸಿರು ಬಿಟ್ಟಂತಾಗಿದೆ.

ಇದನ್ನೂ ಓದಿ: ಮೈಸೂರು: ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ವಿರೋಧ; ಕನ್ನಡ ವೇದಿಕೆಯಿಂದ ಪ್ರತಿಭಟನೆ

ಇದನ್ನೂ ಓದಿ: ಮೈಸೂರು ಲ್ಯಾಂಪ್​ನ 22.50 ಎಕರೆ ಜಮೀನು ಖಾಸಗಿಯವರಿಗೆ ಏಕೆ ಹಸ್ತಾಂತರ ಮಾಡಿದ್ದೀರಿ: ಕೆ.ಟಿ.ಶ್ರೀಕಂಠೇಗೌಡ

Published On - 8:26 am, Fri, 11 March 22