ಮೈಸೂರು: ಮಗನ ಸಾವಿನ ಹಿಂದೆ ಸೊಸೆ ಕೈವಾಡವಿರುವ ಶಂಕೆ, ಒಂದು ತಿಂಗಳ ಹಿಂದೆ ಹೂತಿಟ್ಟಿದ್ದ ಶವ ಹೊರಗೆ ತೆಗೆದು ಪರೀಕ್ಷೆ

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಯಡದೊರೆ ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ಅನಾರೋಗ್ಯದಿಂದ ವಿನೋದ್‌ರಾಜ್ ಎಂಬ ವ್ಯಕ್ತಿ ಮೃತಪಟ್ಟಿದ್ದರು. ಅಣ್ಣ ವಿನೋದ್‌ರಾಜ್ನ ಸಾವಿನ ವೇಳೆ ಅಣ್ಣನ ಪತ್ನಿ ಮಾಹಿತಿ ತಿಳಿಸಿರಲಿಲ್ಲ. ಅನಾರೋಗ್ಯದಿಂದ ವಿನೋದ್ ಮೃತಪಟ್ಟಿದ್ದ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದರು.

ಮೈಸೂರು: ಮಗನ ಸಾವಿನ ಹಿಂದೆ ಸೊಸೆ ಕೈವಾಡವಿರುವ ಶಂಕೆ, ಒಂದು ತಿಂಗಳ ಹಿಂದೆ ಹೂತಿಟ್ಟಿದ್ದ ಶವ ಹೊರಗೆ ತೆಗೆದು ಪರೀಕ್ಷೆ
ಮೈಸೂರು: ಮಗನ ಸಾವಿನ ಹಿಂದೆ ಸೊಸೆ ಕೈವಾಡವಿರುವ ಶಂಕೆ, ಒಂದು ತಿಂಗಳ ಹಿಂದೆ ಹೂತಿಟ್ಟಿದ್ದ ಶವ ಹೊರಗೆ ತೆಗೆದು ಪರೀಕ್ಷೆ
Follow us
TV9 Web
| Updated By: ಆಯೇಷಾ ಬಾನು

Updated on:Mar 13, 2022 | 2:24 PM

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಸಿನಿಮೀಯ ಘಟನೆಗೆ ಸಾಕ್ಷಿಯಾಗಿದೆ. 20 ದಿನದ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದ‌ ಶಿಕ್ಷಕನ ಸಾವಿನ ಸುತ್ತ ಅನುಮಾನಗಳ ಹುತ್ತ ಮೂಡಿದೆ. ಈಗಾಗಿ ಹೂತಿದ್ದ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಏನಿದು ಘಟನೆ? ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿರುವುದು ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಯಡತೊರೆ ಗ್ರಾಮದಲ್ಲಿ. ಗ್ರಾಮದ ವಿನೋದ್ ರಾಜ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಕೇವಲ 32 ವರ್ಷದ ವಿನೋದ್ ಸಾವನ್ನಪ್ಪಿದ್ದು ಕುಟುಂಬದವರಿಗೆ ಸಾಕಷ್ಟು ದುಖಃ ತಂದಿತ್ತು. ವಿನೋದ್ ರಾಜ್ ಟಿ ನರಸೀಪುರ ತಾಲ್ಲೂಕಿನ ಆದಿಬೆಟ್ಟಳ್ಳಿ ಗ್ರಾಮದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಾವಾಯ್ತು ತಮ್ಮ ಪಾಡಾಯ್ತು ಅಂತಿದ್ದ ವಿನೋದ್ ಸಾಕಷ್ಟು ಲವಲವಿಕೆಯಿಂದಲೇ ಇದ್ದರು. ವಿನೋದ್‌ಗೆ ಮದುವೆಯಾಗಿದ್ದು ಒಂದು ಮಗು ಸಹಾ ಇತ್ತು. ಜೀವನ ಸಹಾ ಸುಗಮವಾಗಿಯೇ ಇತ್ತು. ಈ ಮಧ್ಯೆ ವಿನೋದ್ ಅಕಾಲಿಕ ಮರಣ ಹೊಂದಿದ್ದರು. ವಿನೋದ್ ರಾಜ್ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರು. ಫೆಬ್ರವರಿ 21ರಂದು ಮೂಗೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿನೋದ್ ರಾಜ್ ಸಾವನ್ನಪ್ಪಿದ್ದರು. ಪತ್ನಿ ಮಹೇಶ್ವರಿ ಅವರೇ ಖುದ್ದಾಗಿ 108 ಆ್ಯಂಬುಲೆನ್ಸ್‌ ಮೂಲಕ ಮೃತದೇಹ ತಂದು ಅಂತ್ಯಕ್ರಿಯೆ ಸಹಾ ನೆರವೇರಿಸಿದ್ದರು. ಚೆನ್ನಾಗಿಯೇ ಇದ್ದ ವಿನೋದ್ ರಾಜ್ ಸಾವು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

ಸಹಜ ಸಾವಲ್ಲ -ಕೊಲೆ 20 ದಿನಗಳ‌ ನಂತರ ವಿನೋದ್ ರಾಜ್ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಿನೋದ್ ರಾಜ್ ಸಾವು ಸ್ವಾಭವಿಕ ಸಾವಲ್ಲ. ಇದೊಂದು ಕೊಲೆ ಎಂದು ವಿನೋದ್ ರಾಜ್ ಕುಟುಂಬದವರು ಅನುಮಾನ ವ್ತಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಟಿ ನರಸೀಪುರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಶೇಷ ಅಂದರೆ ವಿನೋದ್ ರಾಜ್ ಅವರನ್ನು ಆತನ ಪತ್ನಿ ಮಹೇಶ್ವರಿ ಕೊಲೆ ಮಾಡಿದ್ದಾರೆ ಅನ್ನೋದು ವಿನೋದ್ ರಾಜ್ ಕುಟುಂಬಸ್ಥರ ಆರೋಪ. ಪ್ರಕರಣ ದಾಖಲಿಸಿಕೊಂಡ ಟಿ ನರಸೀಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಟಿ ನರಸೀಪುರ ತಹಶೀಲ್ದಾರ್ ಗಿರಿಜಾ ಅವರ ಸಮ್ಮುಖದಲ್ಲಿ ಹೂತಿದ್ದ ವಿನೋದ್ ರಾಜ್ ಶವವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಇದು ಸ್ವಾಭಾವಿಕ ಸಾವ ಅಥವಾ ಕೊಲೆಯೋ ಅನ್ನೋದು ಗೊತ್ತಾಗಲಿದೆ ಅನ್ನೋದು ಪೊಲೀಸರ ವಿಶ್ವಾಸ‌.

ಮರಣೋತ್ತರ ಪರೀಕ್ಷೆಗೆ ದೇಹ ಹೊರ ತೆಗೆದ ಪೊಲೀಸರು – ತಾಯಿಯ ಗೋಳಾಟ ಇನ್ನು ವಿನೋದ್ ರಾಜ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹೊರತೆಗೆದ ವೇಳೆ ವಿನೋದ್ ಅವರ ತಾಯಿ ರಾಜಮ್ಮ ಅವರ ದುಖಃ ಉಮ್ಮಳಿಸಿ ಬಂದಿತ್ತು. ಮಗನ ಮೃತದೇಹ ಮೇಲೆ ಬಿದ್ದು ಗೋಳಾಡಿದರು. ಅಮ್ಮನ ದುಖಃ ಕಂಡು ನೆರೆದಿದ್ದವು ಕಣ್ಣುಗಳಲ್ಲಿ ನೀರು ತುಂಬಿತು. ತನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಅಂತಾ ರಾಜಮ್ಮ ಅಲವತ್ತುಕೊಂಡರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಯಿತು.

ಅಣ್ಣನ ಸಾವಿನ ಬಗ್ಗೆ ನಮಗೆ ದುಖಃ ಅನುಮಾನ ಎರಡು ಇದೆ. ನಮ್ಮ ಅತ್ತಿಗೆ ನಮಗೆ ಅಣ್ಣನ ಸಾವಿನ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ. ವಿನೋದ್ ರಾಜ್ ಅನಾರೋಗ್ಯದ ಬಗ್ಗೆಯೂ ನಮಗೆ ಏನು ಗೊತ್ತಿಲ್ಲ. ಆತ ಚೆನ್ನಾಗಿಯೇ ಇದ್ದ. ಇನ್ನು ನಮ್ಮ ಅಣ್ಣನ ಮಗ ಸಹಾ ಅಪ್ಪನ ಸಾವಿನ ನಂತರ ವಿಚಿತ್ರವಾಗಿ ಮಾತನಾಡುತ್ತಿದ್ದಾನೆ. ಇದೆಲ್ಲಾ ನೋಡಿದರೆ ನಮಗೆ ನಮ್ಮ ಅತ್ತಿಗೆ ಹಾಗೂ ಅವರ ಮನೆಯವರ ಮೇಲೆ ಅನುಮಾನ ಮೂಡುತ್ತಿದೆ ಎಂದು ಮೃತ ವಿನೋದ್ ಸಹೋದರ ರಘು ಅನುಮಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಟಿ ನರಸೀಪುರ ಇನ್ಸಪೆಕ್ಟರ್ ಕೃಷ್ಣಪ್ಪ ನೇತೃತ್ವದಲ್ಲಿ ವಿನೋದ್ ರಾಜ್ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲರೂ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವೇ ಇದು ಸಹಜ ಸಾವೋ ಅಥವಾ ಕೊಲೆಯೋ ಅನ್ನೋದು ಗೊತ್ತಾಗಲಿದೆ.

ವರದಿ: ರಾಮ್ ಟಿವಿ9 ಮೈಸೂರು

ಇದನ್ನೂ ಓದಿ: ಕೇಸರಿ ಟೋಪಿ, ಸಾಬ್ರ ಟೋಪಿ ಎರಡೂ ಹಾಕಿಕೊಳ್ಳಿ; ಈ ರೀತಿ ಹೇಳೋದೇ ಹಿಂದುತ್ವ: ಸಿಟಿ ರವಿ ಹೇಳಿಕೆ

ಒಂದು ಲಿಂಕ್​ ತೆಗೆದರೆ, 10 ಲಿಂಕ್​ ಅಪ್​ಲೋಡ್​ ಆಗ್ತಾ ಇತ್ತು; ಪೈರಸಿ ಬಗ್ಗೆ ‘ಏಕ್​ ಲವ್​ ಯಾ’ ಟೀಂ ಮಾತು

Published On - 2:48 pm, Fri, 11 March 22

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ