ಒಂದು ಲಿಂಕ್​ ತೆಗೆದರೆ, 10 ಲಿಂಕ್​ ಅಪ್​ಲೋಡ್​ ಆಗ್ತಾ ಇತ್ತು; ಪೈರಸಿ ಬಗ್ಗೆ ‘ಏಕ್​ ಲವ್​ ಯಾ’ ಟೀಂ ಮಾತು

ಈ ಸಿನಿಮಾ ರಿಲೀಸ್​ ಆದ ದಿನವೇ ಪೈರಸಿ ಆಗಿತ್ತು. ನಂತರದಲ್ಲೂ ಹಲವು ಲಿಂಕ್​ಗಳು ಟೆಲಿಗ್ರಾಮ್​ನಲ್ಲಿ ಹರಿದಾಡಿತ್ತು. ಈ ಬಗ್ಗೆ ಪ್ರೇಮ್​ ಅಸಮಾಧಾನ ಹೊರಹಾಕಿದ್ದಾರೆ.

TV9kannada Web Team

| Edited By: Rajesh Duggumane

Mar 11, 2022 | 2:13 PM

‘ಜೋಗಿ’ ಪ್ರೇಮ್​ (Jogi Prem)ನಿರ್ದೇಶನದ ‘ಏಕ್​ ಲವ್​ ಯಾ’ ಸಿನಿಮಾ (Ek Love Ya Movie) ಕಳೆದ ತಿಂಗಳು ರಿಲೀಸ್​ ಆಗಿತ್ತು. ರಕ್ಷಿತಾ ಪ್ರೇಮ್​ ನಿರ್ಮಾಣದ ಈ ಸಿನಿಮಾದಲ್ಲಿ ಅವರ ಸಹೋದರ ರಾಣ ಹೀರೋ ಆಗಿ ನಟಿಸಿದ್ದಾರೆ. ರಚಿತಾ ಹಾಗೂ ರೀಷ್ಮಾ ನಾಣಯ್ಯ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್​ ಆದ ದಿನವೇ ಪೈರಸಿ ಆಗಿತ್ತು. ನಂತರದಲ್ಲೂ ಹಲವು ಲಿಂಕ್​ಗಳು ಟೆಲಿಗ್ರಾಮ್​ನಲ್ಲಿ ಹರಿದಾಡಿತ್ತು. ಈ ಬಗ್ಗೆ ಪ್ರೇಮ್​ ಅಸಮಾಧಾನ ಹೊರಹಾಕಿದ್ದಾರೆ. ‘ಪೈರಸಿ ಲಿಂಕ್​ ತೆಗೆಯೋಕೆ ನಾನು ಒಂದು ಕಂಪನಿ ಇಟ್ಟುಕೊಂಡಿದ್ದೇನೆ. ಅವರು ಟೆಲಿಗ್ರಾಮ್​ನಿಂದ ದಿನಕ್ಕೆ 100 ಲಿಂಕ್ ತೆಗೆಯುತ್ತಿದ್ದರು ಎಂದರು ಪ್ರೇಮ್. ಈ ವಿಚಾರದಲ್ಲಿ ರಕ್ಷಿತಾ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಒಂದು ಲಿಂಕ್​ ತೆಗೆದರೆ ಮತ್ತೆ 10 ಲಿಂಕ್​ಗಳು ಅಪ್​ಲೋಡ್​ ಆಗುತ್ತಿದ್ದ ಬಗ್ಗೆ ರಕ್ಷಿತಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Ek Love Ya First Half Review: ಹೇಗಿದೆ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಮೊದಲಾರ್ಧ? ಇಲ್ಲಿದೆ ವಿವರ

ರಕ್ಷಿತಾ-ಪ್ರೇಮ್​ ದಾಂಪತ್ಯಕ್ಕೆ 15 ವರ್ಷ; ‘ಹೆಂಗೆ ಕಳೆದೆ ಅಂತ ಯೋಚನೆ ಮಾಡ್ತಾ ಇದೀನಿ’ ಅಂದ್ರು ರಕ್ಷಿತಾ

Follow us on

Click on your DTH Provider to Add TV9 Kannada