ಮೈಸೂರು: ಚಾಮುಂಡಿ ಬೆಟ್ಟದಲ್ಲಿ (Chamundi Hills) ಹೊಸ ಮನೆಗಳ (Homes) ನಿರ್ಮಾಣ ಮಾಡುವುದಿಲ್ಲ ಎಂದು ಮೈಸೂರಿನಲ್ಲಿ (Mysore) ಸ್ಥಳಿಯ ಶಾಸಕ ಜಿ.ಟಿ ದೇವೇಗೌಡ (GT Devegowda) ಸ್ಪಷ್ಟನೆ ನೀಡಿದ್ದಾರೆ. ಚಾಮುಂಡಿ ಬೆಟ್ಟದ ಮೇಲಿನ ಜನರನ್ನ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ. ಪ್ರಸ್ತುತ ಇರುವ ಯಾವ ಮನೆಗಳನ್ನೂ, ತೆರವು ಮಾಡುವ ನಿರ್ಧಾರ ಕೈಗೊಂಡಿಲ್ಲ. ಅಂತಹ ಯಾವ ನಿರ್ಧಾರಗಳನ್ನು ಮುಂದೆ ನಾವು ಕೈಗೊಳ್ಳುವುದು ಇಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ದೂರು ಸಲ್ಲಿಕೆ
ಹೊಸ ಮನೆಗಳ ನಿರ್ಮಾಣಕ್ಕೆ ಚಾಮುಂಡಿ ಬೆಟ್ಟ ಪಾದದ ಬಳಿ ನಾಲ್ಕೈದು ಎಕರೆ ಜಾಗ ನಿಗದಿ ಮಾಡುತ್ತೇವೆ ಚಾಮುಂಡೇಶ್ವರಿ ಬಡವಾಣೆಯೆಂದು ಹೆಸರಿಡುತ್ತೇವೆ. ಮುಂದೆ ಚಾಮುಂಡಿ ಬೆಟ್ಟದಲ್ಲಿ ಯಾರಿಗಾದರೂ ಮನೆಗಳ ಅವಶ್ಯಕತೆ ಇದ್ದರೆ ಆ ಬಡಾವಣೆಯಲ್ಲಿ ಜಾಗ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಏನು ಹೇಳಿದರು?
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿದ ಸಚಿವ ಎಸ್ ಟಿ ಸೋಮಶೇಖರ್ ಚಾಮುಂಡಿ ಬೆಟ್ಟದ ಮೇಲೆ ವಾಸವಾಗಿರುವವರನ್ನು ಸ್ಥಳಾಂತರಿಸುವ ಅಥವಾ ಒಕ್ಕಲೆಬ್ಬಿಸುವ ಯಾವುದೇ ಪ್ರಸ್ತಾಪ ಇಲ್ಲ. ಇನ್ನು ಮುಂದೆ ಹೊಸದಾಗಿ ಮನೆ ಕಟ್ಟುವವರಿಗೆ ಬೆಟ್ಟದ ಕೆಳ ಭಾಗದಲ್ಲಿ ನಿವೇಶನ ನೀಡಲು ನಿರ್ಧಾರ ಮಾಡಲಾಗಿದೆ. ಕುಟುಂಬಗಳು ವರ್ಷ ವರ್ಷಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ, ಅವರಿಗೆ ಮನೆ ಕಟ್ಟಿಕೊಳ್ಳಲು ನಿವೇಶನವನ್ನು ಬೆಟ್ಟದ ಕೆಳಭಾಗದಲ್ಲಿ ಗುರುತಿಸುವಂತೆ ಮುಡಾ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಹದಿಹರೆಯದ ಹೆಣ್ಣುಮಕ್ಕಳ ಸ್ವಚ್ಛ, ಸುರಕ್ಷಿತ ಋತುಚಕ್ರ ನಿರ್ವಹಣೆ: ಮೈತ್ರಿ ಮುಟ್ಟಿನ ಕಪ್ ಶುಚಿ ಯೋಜನೆಗೆ ಚಾಲನೆ
ಚಾಮುಂಡಿ ಬೆಟ್ಟ ರೋಪ್ ವೇ ನಿರ್ಮಾಣ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಸಭೆ ಮಾಡುತ್ತೇವೆ. ಈ ಸಭೆಯಲ್ಲಿ ಚಾಮುಂಡಿ ಬೆಟ್ಟದ ಅಭಿವೃದ್ಧಿ ಮತ್ತು ವಿವೇಚನಾರಹಿತ ಬೆಳವಣಿಗೆಗೆ ಕಡಿವಾಣ ಹಾಕುವ ಕುರಿತು ಚರ್ಚೆ ಮಾಡುತ್ತೇವೆ. ಈ ಸಂಬಂಧ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕೆಂಬ ಅಭಿಪ್ರಾಯ ವ್ಯಕವಾಗಿದೆ ಎಂದರು.
Published On - 5:24 pm, Wed, 6 July 22