ಮೈಸೂರು ವಿಶ್ವ ವಿದ್ಯಾಲಯಕ್ಕೆ ತನ್ನದೇ ಆದ ಇತಿಹಾಸ ಇದೆ. ರಾಜ್ಯದ ಮೊದಲ ವಿವಿ ಮತ್ತು ದೇಶದ ಆರನೇ ವಿವಿ (Mysore University) ಎಂಬ ಹೆಗ್ಗಳಿಕೆ ಸಹ ಇದೆ. ಆದ್ರೆ ಇದೀಗ ಆ ವಿವಿಗೆ ಕುಲಪತಿಗಳೇ (Vice Chancellor) ನೇಮಕವಾಗಿಲ್ಲ. ಇದರಿಂದ ವಿವಿಯಲ್ಲಿ ನೂರೆಂಟು ಸಮಸ್ಯೆಗಳು ಉದ್ಭವಿಸುತ್ತಿದೆ. ಮೈಸೂರು ವಿವಿ ಅಂದ್ರೆ ಸಾಕು ಇಡೀ ದೇಶದಲ್ಲಿ ಅದಕ್ಕೆ ತನ್ನದೆ ಆದ ಪ್ರತಿಷ್ಠೆ, ಗೌರವ ಇದೆ. ದೇಶದ ಮೂಲೆ ಮೂಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬರುತ್ತಾರೆ. ಸಾಧನೆಯನ್ನು ಮಾಡಿದ್ದಾರೆ. ಅಷ್ಟೆ ಯಾಕೆ ವಿದೇಶಿ ವಿದ್ಯಾರ್ಥಿಗಳು ವಿವಿಯಲ್ಲಿ ಉನ್ನತ ವ್ಯಾಸಂಗಕ್ಕೆ ಬಂದಿದ್ದಾರೆ. ಅಷ್ಟೆ ಹಲವು ರಾಷ್ಟ್ರಕವಿ ಕುವೆಂಪು ಆದಿಯಾಗಿ ಹಲವು ಶ್ರೇಷ್ಠರು ಮೈಸೂರು ವಿವಿಯಲ್ಲಿ ಇದ್ದವರು ಎಂಬುದು ಹೆಮ್ಮೆಯ ವಿಚಾರ.
ಆದ್ರೆ ಇತ್ತೀಚಿಗೆ ಒಂದಿಲ್ಲೊಂದು ವಿಚಾರಗಳಿಗೆ ವಿವಿ ಗೆ ಕೆಟ್ಟ ಹೆಸರು ಬರುತ್ತಿದೆ. ಸದ್ಯ ಇದೀಗಾ ಉದ್ಭವವಾಗಿರುವ ಸಮಸ್ಯೆ ಅಂದ್ರೆ ವಿವಿಗೆ ಕುಲಪತಿ () ನೇಮಕವಾಗದಿರುವುದು. ಹೌದು, ಕೆಲ ದಿನಗಳಿಂದ ಮೈಸೂರು ವಿವಿ ಗೆ ಕುಲಪತಿಗಳಾಗಿ ಲೋಕನಾಥ್ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದರು. ಆದ್ರೆ ಅವರ ನೇಮಕ ವಿಚಾರವಾಗಿ ಹೈಕೋರ್ಟ್ ತಡೆ ನೀಡಿತು. ಇದ್ರಿಂದ ವಿವಿ ಗೆ ಕುಲಪತಿಗಳೆ ಇಲ್ಲದಂತಾಗಿದೆ. ಇದ್ರಿಂದ ವಿವಿಯಲ್ಲಿ ನೂರೆಂಟು ಸಮಸ್ಯೆಗಳು ಉದ್ಭವಿಸಿವೆ. ಅದರಲ್ಲೂ ಪ್ರಮುಖ ವಿಚಾರ ಅಂದ್ರೆ ವಿವಿಯ ನೌಕರರಿಗೆ ಕುಲಪತಿಗಳಿಲ್ಲದೆ ಸಂಬಳವೆ ಇಲ್ಲದಂತಾಗಿದೆ.
ಕುಲಪತಿ ಸಹಿ ಇಲ್ಲದೆ ನಿವೃತ್ತ ಹಾಗೂ ತಾತ್ಕಾಲಿಕ ಉದ್ಯೋಗಿಗಳಿಗೆ ಸಂಬಳ ನೀಡಲು ಸಾಧ್ಯವಿಲ್ಲ. ಸಿಂಡಿಕೇಟ್ ತೀರ್ಮಾನದಂತೆ ಕಲಪತಿಗಳ ಸಹಿ ಇಲ್ಲದೆ ರೂ. 1 ಲಕ್ಷಕಿಂತ ಹೆಚ್ಚಿನ ಹಣ ಬಳಸಲು ಅನುಮತಿ ಇಲ್ಲ. 1840 ನಿವೃತ್ತ ನೌಕರರಿಗೆ ಸುಮಾರು 7.20 ಕೋಟಿ ಪೆನ್ಷನ್ ಹಣ ಬಿಡುಗಡೆಯಾಗಬೇಕು. 120 ವಿದ್ಯಾರ್ಥಿಗಳ 70 ಲಕ್ಷ ಫೆಲೋಶಿಪ್ ಹಣ ಬಿಡುಗಡೆಯಾಗಬೇಕಿದೆ. ಇದ್ರಿಂದ ಕುಲಪತಿಗಳಿಲ್ಲದೆ ಸಂಬಳ ಕಷ್ಟ ಅಂತ ಸಿಬ್ಬಂದಿ ಅಲವತ್ತುಕೊಂಡಿದ್ದಾರೆ.
ಒಟ್ಟಾರೆ, ಮೈಸೂರು ವಿವಿಗೆ ಕುಲಪತಿಗಳಿಲ್ಲದೆ ಒಂದೊಂದೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಆದಷ್ಟು ಬೇಗ ಕುಲಪತಿ ನೇಮಕವಾಗದಿದ್ದರೆ ಮತ್ತಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುವುದರಲ್ಲಿ ಅನುಮಾನವೆ ಇಲ್ಲ.
ಶಿಕ್ಷಣ ಕುರಿತಾದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ