Mysore News: ಮೈಸೂರಿನ ಈ ಬಡಾವಣೆಗಳಿಗೆ ಜೂ.20, 21 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಮೈಸೂರಿನ ಹಲವು ಪ್ರದೇಶಗಳಿಗೆ ಇಂದು ಮತ್ತು ನಾಳೆ (ಜೂ.20, 21) ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

Mysore News: ಮೈಸೂರಿನ ಈ ಬಡಾವಣೆಗಳಿಗೆ ಜೂ.20, 21 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ

Updated on: Jun 20, 2023 | 10:22 AM

ಮೈಸೂರು: ಮೈಸೂರಿನ (Mysore) ಹಲವು ಬಡಾವಣೆಗಳಿಗೆ (Area) ಇಂದು ಮತ್ತು ನಾಳೆ (ಜೂ.20, 21) ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಎರಡು ದಿನಗಳ ಕಾಲ ಮೈಸೂರಿನ ಹಲವೆಡೆ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ (KPTCL)ನ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಸಂಬಂಧ ಪಂಪಿಂಗ್ ಸ್ಟೇಷನ್‌ಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಮೈಸೂರಿನಲ್ಲಿ ಹಲವು ಬಡಾವಣೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.

ನೀರು ವ್ಯತ್ಯಯವಾಗುವ ಪ್ರದೇಶಗಳು

42 ರಿಂದ 51 ರ ನಡುವಿನ ವಾರ್ಡ್‌ಗಳು ಕೆ.ಜಿ. ಕೊಪ್ಪಳ, ಶಾರದಾದೇವಿ ನಗರ, ದಟ್ಟಗಲ್ಲಿ, ಲಕ್ಷ್ಮೀಪುರ, ಸುನ್ನದಕೇರಿ, ಅಗ್ರಹಾರ, 54 ಮತ್ತು 65 ರ ನಡುವಿನ ವಾರ್ಡ್‌ಗಳು ಗುಂಡೂರಾವ್ ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಕುವೆಂಪು ನಗರ, ರಾಮಕೃಷ್ಣ ನಗರ, ಕುವೆಂಪು ನಗರ, ಎಂ ಬ್ಲಾಕ್, ವಿದ್ಯಾರಣ್ಯಪುರಂ, ಅಶೋಕಪುರಂ , ವಿಶ್ವೇಶ್ವರ ನಗರ, ಜೆಪಿ ನಗರ, ಅರವಿಂದ ನಗರ, ಶ್ರೀರಾಂಪುರ ಮತ್ತು ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿವೇಕ ಬಿರಾದಾರ

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

Loading...
Unable to load recommendations.
Follow Us