ಮೈಸೂರು: ಮುಂದಿನ ವಾರದಿಂದ ವೀಕೆಂಡ್ ಕರ್ಫ್ಯೂ (Weekend curfew) ಬೇಡ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿ ಮಾಡುತ್ತೇವೆ. ಮೂರನೇ ಅಲೆಯ ಕೊವಿಡ್ ಅಷ್ಟೋಂದು ಪರಿಣಾಮಕಾರಿಯಾಗಿಲ್ಲ. ಹೀಗಾಗಿ ವೀಕೆಂಡ್ ಕರ್ಫ್ಯೂ ಜತೆಗೆ ನೈಟ್ ಕರ್ಫ್ಯೂ ಅವಧಿಯನ್ನು ಕಡಿಮೆ ಮಾಡಬೇಕು. ಮೈಸೂರು ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ (Tourists) ವೀಕೆಂಡ್ ಕರ್ಫ್ಯೂನಿಂದ ತೊಂದರೆಯಾಗುತ್ತದೆ. ನಾವು ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತೇವೆ ಎಂದು ಟಿವಿ9ಗೆ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.
ಈ ವಾರವೇ ವೀಕೆಂಡ್ ಕರ್ಫ್ಯೂಗೆ ವಿರೋಧವಿತ್ತು. ಆದರೆ ಆರೋಗ್ಯದ ಹಿತದೃಷ್ಟಿಯಿಂದ ಸಹಕರಿಸಿದ್ದೇವೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ನೀಡುತ್ತೇವೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.
ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿಯಿಂದ ಕೊವಿಡ್ ರೂಲ್ಸ್ ಬ್ರೇಕ್
ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಹಳ್ಳಿಗಳಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸುತ್ತಾಟ ನಡೆಸಿದ್ದಾರೆ. ವೀಕೆಂಡ್ ಕರ್ಫ್ಯೂ ವೇಳೆ ಸಾರ್ವಜನಿಕರು ಹೊರಗೆ ಓಡಾಡುವಂತಿಲ್ಲ. ಆದರೆ ಕೊವಿಡ್ ರೂಲ್ಸ್ ಉಲ್ಲಂಘಿಸಿ ರೇಣುಕಾಚಾರ್ಯ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಮೇಶ್ವರ, ಬಳೇಶ್ವರಕ್ಕೆ ಓಡಾಟ ನಡೆಸಿದ್ದಾರೆ. ಈ ವೇಳೆ ಗ್ರಾಮಕ್ಕೆ ಬಂದ ಶಾಸಕರಿಗೆ ವಿಶೇಷ ಪ್ರೀತಿ ತೋರಿದ ಶ್ವಾನಕ್ಕೆ ತಮಗೆ ಹಾಕಿದ ಹಾರವನ್ನು ಹಾಕಿದ್ದಾರೆ.
ಯಾದಗಿರಿ: ದಂಡ ಹಾಕಲು ಬಂದ ಪೊಲೀಸರ ಜೊತೆ ವಾದ ಮಾಡಿದ ವ್ಯಕ್ತಿ
ಶಾಲು ಮುಖಕ್ಕೆ ಕಟ್ಟಿಕೊಂಡಿದ್ದೀನಿ ಮತ್ತೆ ಮಾಸ್ಕ್ ಯಾಕೆ ಹಾಕಬೇಕು ಎಂದು ದಂಡ ಹಾಕಲು ಬಂದ ಪೊಲೀಸರ ಜೊತೆ ವ್ಯಕ್ತಿ ವಾದಕ್ಕೆ ಇಳಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ಬಸ್ ನಿಲ್ದಾಣದಲ್ಲಿ ನಡೆದಿದೆ. ಮಾಸ್ಕ್ ಧರಿಸದೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ದಂಡ ಕಟ್ಟು ಎಂದು ಬಸ್‌ನಿಂದ ಕೆಳಗಿಯುವಂತೆ ಹೇಳಿ ಗದರಿದ ಪೊಲೀಸರ ಜತೆಗೆ ವ್ಯಕ್ತಿ ವಾದಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ:
Bengaluru Metro: ಮೆಟ್ರೋ ರೈಲುಗಳಲ್ಲಿ ನಿಂತು ಪ್ರಯಾಣಿಸುವಂತಿಲ್ಲ, ವೀಕೆಂಡ್‌ನಲ್ಲಿ ಪ್ರತಿ 30 ನಿಮಿಷಕ್ಕೊಂದು ರೈಲು
Published On - 5:11 pm, Sun, 16 January 22