AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Metro: ಮೆಟ್ರೋ ರೈಲುಗಳಲ್ಲಿ ನಿಂತು ಪ್ರಯಾಣಿಸುವಂತಿಲ್ಲ, ವೀಕೆಂಡ್‌ನಲ್ಲಿ ಪ್ರತಿ 30 ನಿಮಿಷಕ್ಕೊಂದು ರೈಲು

ವೀಕೆಂಡ್‌ನಲ್ಲಿ ಪ್ರತಿ 30 ನಿಮಿಷಕ್ಕೊಂದು ರೈಲು ಪ್ರಯಾಣ ಇರಲಿದೆ. ಈ ಹಿಂದೆ ಪ್ರತಿ 20 ನಿಮಿಷಕ್ಕೊಂದು ರೈಲು ತೆರಳುತ್ತಿತ್ತು. ಈ ಬದಲಾವಣೆ ಮಾಡಿ ಆದೇಶ ನೀಡಲಾಗಿದೆ. ಬಿಎಂಆರ್‌ಸಿಎಲ್‌ ನಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

Bengaluru Metro: ಮೆಟ್ರೋ ರೈಲುಗಳಲ್ಲಿ ನಿಂತು ಪ್ರಯಾಣಿಸುವಂತಿಲ್ಲ, ವೀಕೆಂಡ್‌ನಲ್ಲಿ ಪ್ರತಿ 30 ನಿಮಿಷಕ್ಕೊಂದು ರೈಲು
ಬೆಂಗಳೂರು ನಮ್ಮ ಮೆಟ್ರೋ (ಪ್ರಾತಿನಿಧಿಕ ಚಿತ್ರ)
TV9 Web
| Updated By: ganapathi bhat|

Updated on:Jan 12, 2022 | 4:17 PM

Share

ಬೆಂಗಳೂರು: ಮೆಟ್ರೋ ರೈಲುಗಳಲ್ಲಿ ನಿಂತು ಪ್ರಯಾಣಿಸುವಂತಿಲ್ಲ. ಸೀಟು ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯಾಣಿಸಬೇಕು. ಸೀಟ್‌ ಭರ್ತಿಯಾದ್ರೆ ರೈಲು ನಿಲ್ದಾಣದೊಳಗೂ ಪ್ರವೇಶವಿಲ್ಲ. ಮೆಟ್ರೋ ರೈಲು ನಿಲ್ದಾಣಕ್ಕೂ ಪ್ರಯಾಣಿಕರಿಗೆ ಪ್ರವೇಶವಿಲ್ಲ. ಸೀಟು ಭರ್ತಿಯಾದರೆ ನಂತರ ಮುಂದಿನ ರೈಲಿನಲ್ಲಿ ಪ್ರಯಾಣಿಸಬೇಕು. ವೀಕೆಂಡ್‌ನಲ್ಲಿ ಪ್ರತಿ 30 ನಿಮಿಷಕ್ಕೊಂದು ರೈಲು ಪ್ರಯಾಣ ಇರಲಿದೆ. ಈ ಹಿಂದೆ ಪ್ರತಿ 20 ನಿಮಿಷಕ್ಕೊಂದು ರೈಲು ತೆರಳುತ್ತಿತ್ತು. ಈ ಬದಲಾವಣೆ ಮಾಡಿ ಆದೇಶ ನೀಡಲಾಗಿದೆ. ಬಿಎಂಆರ್‌ಸಿಎಲ್‌ ನಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ವಿದೇಶದಿಂದ ಬೆಂಗಳೂರಿಗೆ ಬಂದಿದ್ದ 10 ಜನರಿಗೆ ಬುಧವಾರ ಕೊರೊನಾ ದೃಢವಾಗಿದೆ. ಕೆಐಎಬಿಗೆ ಬಂದ ವೇಳೆ RTPCR ಟೆಸ್ಟ್ ಮಾಡಿದಾಗ ಸೋಂಕು‌ ಪತ್ತೆಯಾಗಿದೆ. ಯುಎಸ್​ಎ ಮೂಲದ 4, ಸೇಂಟ್ ಫ್ರಾನ್ಸಿಸ್ಕೊ ಮೂಲದ ಒಬ್ಬರು, ಟರ್ಕಿ, ಪೋರ್ಚುಗಲ್, ದಾಲರ್, ಐರ್ಲೆಂಡ್ ಮತ್ತು ಲಂಡನ್ ಮೂಲದ ಒಬ್ಬರು ಸೇರಿದಂತೆ 10 ಜನರಿಗೆ ಕೊವಿಡ್19 ದೃಢವಾಗಿದೆ.

ಸಂಕ್ರಾಂತಿ, ವೈಕುಂಠ ಏಕಾದಶಿ ಆಚರಣೆಗೆ ಮಾರ್ಗಸೂಚಿ ಪ್ರಕಟ

ಸಂಕ್ರಾಂತಿ ಮತ್ತು ವೈಕುಂಠ ಏಕಾದಶಿಗೆ ಸಂಬಂಧಪಟ್ಟಂತೆ ಸರ್ಕಾರದಿಂದ ಕಠಿಣ ನಿಯಮಗಳನ್ನು ಸೂಚಿಸಲಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ವಿಶೇಷ ಮಾರ್ಗಸೂಚಿ ಹೊರಡಿಸಲಾಗಿದೆ. ಅದರಂತೆ, ದೇವಾಲಯದ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜಾ ಕೈಂಕರ್ಯ ನಡೆಸಲು‌ ಅವಕಾಶ ನೀಡಲಾಗಿದೆ.

ವೈಕುಂಠ ಏಕಾದಶಿ ದಿನದಂದು ಎರಡೂ ಡೋಸ್ ಲಸಿಕೆ ಪಡೆದ 50 ಜನರಿಗೆ ಮಾತ್ರ ಒಂದು ಬಾರಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶವಿಲ್ಲ. ಯಾವುದೇ ಮೆರವಣಿಗೆ, ಮನರಂಜನಾ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಬೆಂಗಳೂರಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಜಿಲ್ಲೆಗಳಲ್ಲಿ ಡಿಸಿಗಳು ಪರಿಸ್ಥಿತಿ ಅವಲೋಕಿಸಿ ಇನ್ನೂ ಹೆಚ್ಚಿನ ನಿರ್ಬಂಧ ವಿಧಿಸಬಹುದು ಎಂದು ಹೇಳಲಾಗಿದೆ.

ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಜನವರಿ 31ರ ವರೆಗೆ ಕೊವಿಡ್ ಮಾರ್ಗಸೂಚಿ ವಿಸ್ತರಣೆ ಮಾಡಲಾಗಿದೆ. ಸರ್ಕಾರ ಈ ಮೊದಲು ವಿಧಿಸಿದ್ದ ಕೊರೊನಾ ಮಾರ್ಗಸೂಚಿ ವಿಸ್ತರಣೆ ಮಾಡಿ ಆದೇಶ ನೀಡಿದೆ. ಜನವರಿ 31ರ ವರೆಗೂ ಪ್ರತಿಭಟನೆಗಳು, ಮೆರವಣಿಗೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಶಾಲೆಗಳಿಗೆ ರಜೆ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ಹೊಣೆ ನೀಡಲಾಗಿದೆ.

ಇದನ್ನೂ ಓದಿ: Mekedatu Padayatra: ಹೈಕೋರ್ಟ್‌ ಆದೇಶ ನೀಡಿದ್ರೆ ಪಾದಯಾತ್ರೆ ನಿಲ್ಲಿಸುತ್ತೇವೆ: ಸಿದ್ದರಾಮಯ್ಯ ಹೇಳಿಕೆ

ಇದನ್ನೂ ಓದಿ: ಕೊರೊನಾ ಸೋಂಕು ಹೆಚ್ಚಳ: ಧಾರವಾಡ, ಹುಬ್ಬಳ್ಳಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

Published On - 4:10 pm, Wed, 12 January 22