COVID-19: 10 ದಿನದ ಕ್ವಾರಂಟೈನ್ ಬಳಿಕವೂ ಹತ್ತರಲ್ಲಿ ಒಬ್ಬರಿಗೆ ಕೊರೋನಾ ಸೋಂಕಿನ ವರದಿ ಪಾಸಿಟಿವ್ ಬರಲಿದೆ: ಅಧ್ಯಯನ
ಪ್ರಮಾಣೀಕೃತ ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ಧನಾತ್ಮಕ ಪರೀಕ್ಷೆ ಮಾಡಿಸಿ 10 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ 172 ಮಂದಿ ಸೋಂಕಿತರನ್ನು ಇಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಅದರಲ್ಲಿ 10 ದಿನಗಳ ಬಳಿಕ 13 ಪ್ರತಿಶತದಷ್ಟು ಜನರಲ್ಲಿ ವೈರಸ್ ಇರುವುದು ದೃಢಪಟ್ಟಿದೆ.
ಕೊರೋನಾ (corona) ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೂರನೆ ಅಲೆ ಈಗಾಗಲೇ ಭಾರತದಲ್ಲಿ ಕಾಡಲು ಆರಂಭವಾಗಿದೆ. ಈ ನಡುವೆ ಯುಕೆ ಮೂಲದ ಯುನಿವರ್ಸಿಟಿಯೊಂದು ನಡೆಸಿದ ಅಧ್ಯಯನದಲ್ಲಿ 10 ದಿನಗಳ ಕ್ವಾರಂಟೈನ್ (Quarantine) ಬಳಿಕವೂ ಕೊರೋನಾ ಸೋಂಕು 10ರಲ್ಲಿ ಒಬ್ಬರಿಗೆ ಕಾಡುತ್ತದೆ ಎಂದು ಸಾಬೀತಾಗಿದೆ. 10 ದಿನಗಳ ಕ್ವಾರಂಟೈನ್ ಬಳಿಕ 13 ಪ್ರತಿಶತದಷ್ಟು ಜನರು ಸೋಂಕಿನಿಂದ ಗುಣಮುಖರಾಗದೆ ಪಾಸಿಟಿವ್ ಅಂಶಗಳನ್ನೇ ತೋರಿಸಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಅಧ್ಯಯನವನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಇನ್ಫೆಕ್ಷಿಯಸ್ ಡಿಸೀಸ್ (International Journal of Infectious Diseases)ನಲ್ಲಿ ಪ್ರಕಟಿಸಲಾಗಿದೆ. ಎಕ್ಸೆಟರ್ ವಿಶ್ವವಿದ್ಯಾನಿಲಯ ಅಳವಡಿಸಿಕೊಂಡ ಹೊಸ ರೀತಿಯ ಅಧ್ಯಯನ ವಿಧಾನದಲ್ಲಿ ವೈರಸ್ ಕ್ವಾರಂಟೈನ್ ಬಳಿಕವೂ ಎಷ್ಟು ದಿನಗಳ ಕಾಲ ಸಕ್ರಿಯವಾಗಿರುತ್ತದೆ ಎನ್ನುವುದನ್ನು ಪತ್ತೆ ಮಾಡಲಾಗಿದೆ.
ಪ್ರಮಾಣೀಕೃತ ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ಧನಾತ್ಮಕ ಪರೀಕ್ಷೆ ಮಾಡಿಸಿ 10 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ 172 ಮಂದಿ ಸೋಂಕಿತರನ್ನು ಇಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಅದರಲ್ಲಿ 10 ದಿನಗಳ ಬಳಿಕ 13 ಪ್ರತಿಶತದಷ್ಟು ಜನರಲ್ಲಿ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ ಸಾಂಕ್ರಾಮಿಕವಾಗಿ ಹರಡುವ ಆತಂಕ ಹೆಚ್ಚಾಗಿಯೇ ಇದೆ. ಗುಣಮುಖರಾದೆವೆಂದು ಇತರ ಜನರನ್ನು ಸಂಪರ್ಕಿಸುವ ಮೊದಲು ಎಚ್ಚರವಹಿಸಬೇಕು. ಇಲ್ಲವಾದರೆ ಅಂತಹ ವ್ಯಕ್ತಿಗಳು ರೋಗವನ್ನು ಹರಡಬಹುದು ಎಂದು ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.
ಈ ಕುರಿತು ಮೆಡಿಕಲ್ ವಿಶ್ವವಿದ್ಯಾಲಯದ ಪ್ರಪೆಸರ್ ಲೋರ್ನಾ ಹ್ಯಾರಿಸ್ ಮಾಹಿತಿ ನೀಡಿದ್ದು, ನಾವು ನಡೆಸಿರುವುದು ಸಣ್ಣ ಅಧ್ಯಯನವೇ ಇರಬಹುದು ಆದರೆ ಇದರ ಫಲಿತಾಂಶ ಮಾತ್ರ ನಿಖರವಾಗಿದೆ. 10 ದಿನಗಳ ಬಳಿಕವೂ ವೈರಸ್ ಸಕ್ರಿಯವಾಗಿದ್ದು, ಸೋಂಕನ್ನು ಹರಡುವ ಅಪಾಯವಿದೆ. ಈವರೆಗೆ ಸೋಂಕಿತ ವ್ಯಕ್ತಿಯಲ್ಲಿ ವೈರಸ್ ಇತರರಿಗೆ ಹರಡುವ ಸಾಮರ್ಥ್ಯವನ್ನು ಹೊಂದಿದೆಯೇ ಅಥವಾ ಇಲ್ಲವೊ ಎನ್ನುವುದನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಅಧ್ಯಯನದಲ್ಲಿ ಬಳಸಲಾದ ಪರೀಕ್ಷೆಯು ವೈರಸ್ ಸಕ್ರಿಯವಾಗಿದ್ದಾಗ ಮತ್ತು ಮುಂದೆ ಹರಡುವ ಸಾಮರ್ಥ್ಯವಿದ್ದಾಗ ಮಾತ್ರ ಧನಾತ್ಮಕತೆಯನ್ನು ತೋರಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನು ಮುಂದುವರೆದು ಮಾತನಾಡಿದ ಇನ್ನೋರ್ವ ಪ್ರೊಪೇಸರ್ ಜನರು 10 ದಿನಗಳ ಬಳಿಕ ಆರೋಗ್ಯ ಸರಿಹೋಗಿದೆ ಎಂದು ಗುಣಮುಖರಾದ ಲಕ್ಷಣಗಳನ್ನು ಗಮನಿಸಿ ಹೊರಹೋಗುತ್ತಾರೆ. ಇದರಿಂದ ಸೋಂಕು ಹರಡುವ ಅಪಾಯ ಹೆಚ್ಚು. ಹೀಗಾಗಿ 10 ದಿನಗಳ ಬಳಿಕವೂ ಸರಿಯಾಗ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದರೆ ಮಾತ್ರ ಕ್ವಾರಂಟೈನ್ನಿಂದ ಹೊರಬನ್ನಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:
ಓಮಿಕ್ರಾನ್ ಆತಂಕ: ಬಟ್ಟೆಯ ಮಾಸ್ಕ್ಗಳ ಬಳಕೆ ಬೇಡ ಎಂದ ತಜ್ಞರು
Published On - 11:46 am, Sun, 16 January 22