ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು: ಸಿದ್ದರಾಮಯ್ಯ ಆಗ್ರಹ

TV9 Digital Desk

| Edited By: guruganesh bhat

Updated on: Sep 01, 2021 | 7:24 PM

ರಾಜ್ಯ ಸರ್ಕಾರ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ  ರಾಜೀನಾಮೆ ನೀಡಬೇಕು: ಸಿದ್ದರಾಮಯ್ಯ ಆಗ್ರಹ
ಸಿದ್ದರಾಮಯ್ಯ

ಮೈಸೂರು: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಕರಣದ ಕುರಿತು ಗೃಹ ಸಚಿವರಿಗೆ ಗಂಭೀರತೆಯಿಲ್ಲ. ಘಟನಾ ಸ್ಥಳಕ್ಕೆ ತೆರಳಿದ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರು ಚೈಲ್ಡೀಶ್, ಬೇಜವಾಬ್ದಾರಿಯಾಗಿ ಯುವತಿ ಆ ಸಮಯದಲ್ಲಿ ಯಾಕೆ ಹೋಗಬೇಕಿತ್ತು ಅಂತಾರೆ. ಇವರು ರಾಜ್ಯದ ಗೃಹ ಮಂತ್ರಿ ಆಗುವುದಕ್ಕೆ ಅರ್ಹರಾ? ರಾಜ್ಯ ಸರ್ಕಾರ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಈ ಕೂಡಲೇ ಗೃಹ ಸಚಿವರು ರಾಜೀನಾಮೆ ನೀಡಲಿ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಈ ಪ್ರಕರಣವನ್ನು ಸರ್ಕಾರ ಲಘುವಾಗಿ ಪರಿಗಣಿಸಿದೆ. ಇಂತಹ ಹಲವಾರು ಪ್ರಕರಣಗಳು ನಡೆದಿದ್ದರೂ ರಾಜ್ಯ ಸರ್ಕಾರ ಪ್ರಕರಣ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪೊಲೀಸರಿಗೆ ಅಭಿನಂದನೆಗಳನ್ನು ಹೇಳಿದ್ದೇ ಹೇಳಿದ್ದು, ಪೊಲೀಸರು ಸಾಮೂಹಿಕ ಅತ್ಯಾಚಾರ ತಡೆದಿದ್ದರೆ ಹೊಗಳಬಹುದಿತ್ತು. ಅಪರಾಧಗಳನ್ನ ತಡೆಗಟ್ಟಿದರೆ ಮಾತ್ರ ಬೆನ್ನು ತಟ್ಟಬೇಕು. ಇದು ಮೈಸೂರಿಗೆ ಕಪ್ಪು ಚುಕ್ಕೆ ಅಲ್ಲವಾ? ಎಂದು ಅವರು ಪ್ರಶ್ನಿಸಿದರು. ಈ ಪ್ರಕರಣದಿಂದಲೇ ರಾಜ್ಯ ಸರ್ಕಾರ ವಿಫಲವಾಗಿರುವುದು ತಿಳಿಯುತ್ತದೆ ಎಂದು ಅವರು ಆಗ್ರಹಿಸಿದರು.

ಸಾರ್ವಜನಿಕರು ರಾತ್ರಿ ವೇಳೆ ಓಡಾಡದಂತಹ ಜಾಗ ಅದು. ಘಟನೆ 8 ದಿನವಾದರೂ ಯಾವ ವ್ಯಾಪ್ತಿಗೆ ಬರುತ್ತೆಂದು ಅಧಿಕಾರಿಗಳಿಗೆ ಗೊತ್ತಿಲ್ಲ. ನಗರಾಭಿವೃದ್ಧಿ ವ್ಯಾಪ್ತಿಗೆ ಸೇರುತ್ತಾ ಅರಣ್ಯ ಇಲಾಖೆಗೆ ಸೇರುತ್ತಾ? ಘಟನೆ ನಡೆದು 8 ದಿನವಾದರೂ ಇದಕ್ಕೆ ಉತ್ತರ ಸಿಕ್ಕಿಲ್ಲ. ಪ್ರಕರಣದ ಆರೋಪಿಗಳ ಮೇಲೆ ಹಲವಾರು ಪ್ರಕರಣಗಳಿವೆ. ಆರೋಪಿಗಳು ಆಗಾಗ ಇಲ್ಲಿಗೆ ಬಂದು ಕಾನೂನು ಬಾಹಿರ ಕೃತ್ಯವೆಸಗುತ್ತಿದ್ದರು. ಸಂತ್ರಸ್ತೆ ಡಿಸ್ಚಾರ್ಜ್ ವೇಳೆ ಪೊಲೀಸ್ ಅಧಿಕಾರಿಗಳಿರಬೇಕಿತ್ತು. ಸಂತ್ರಸ್ತೆ ಹೇಳಿಕೆ ನೀಡುವುದಿಲ್ಲ ಅಂದರೆ ಪೊಲೀಸರ ಕೆಲಸವೇನು? ಸಂತ್ರಸ್ತೆಯ ಮನವೊಲಿಸಿ ಹೇಳಿಕೆಯನ್ನ ಪಡೆಯಬೇಕಿತ್ತು. ಪೊಲೀಸರು ಸಂತ್ರಸ್ತೆ ಹೇಳಿಕೆ ಪಡೆಯದಿದ್ದರಿಂದ ಅನುಮಾನ ಹುಟ್ಟಿಕೊಂಡಿದೆ. ಇದರಿಂದ ಪೊಲೀಸರ ವೈಫಲ್ಯ ಸ್ಪಷ್ಟವಾಗಿ ಗೊತ್ತಾಗುತ್ತದೆ. ಘಟನೆ ಬಗ್ಗೆ ಸರ್ಕಾರ ಬೇಜವಾಬ್ದಾರಿತನ ಪ್ರದರ್ಶನ ಮಾಡಿದೆ ಎಂದು ಅವರು ಟೀಕಿಸಿದರು.

ಇದನ್ನೂ ಓದಿ:  

‘ಕಾಂಗ್ರೆಸ್‌ನವರು ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾರೆ‘ ಹೇಳಿಕೆ ಹಿಂಪಡೆಯುವೆ, ಸಂತ್ರಸ್ತೆಯನ್ನು ನನ್ನ ಮಗಳ ಸ್ಥಾನದಲ್ಲಿ ನೋಡುವೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಗೃಹ ಸಚಿವ ಆರಗ ಭಾಷಣದ ವೇಳೆ ಕುಸಿದು ಬಿದ್ದ ಕಾನ್ಸ್​​ಟೇಬಲ್​; ಎತ್ತಿಕೊಂಡು ಹೋಗಿ ಮಾನವೀಯತೆ ಮೆರೆದ ಎಸ್​ಪಿ ಅಕ್ಷಯ್

(Opposition Leader Siddaramaiah urges resignation of Home Minister Araga Jnanendra in Mysore Gang Rape case)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada