AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು’: ಪ್ರಮೋದಾದೇವಿ ಒಡೆಯರ್​​ ಪತ್ರಕ್ಕೆ ಸಚಿವ ಯತೀಂದ್ರ ತಿರುಗೇಟು

ಮೈಸೂರು ದಸರಾ ಆಚರಣೆ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, 'ಅರಮನೆ ಬೋರ್ಡ್ ಹಾಗೂ ಜಾಗ ಸರ್ಕಾರದ್ದು' ಎಂದು ಖಾರವಾಗಿ ತಿಳಿಸಿದ್ದಾರೆ. ಅವರು ಹೇಳಿದ ರೀತಿ 7 ದಿನ ದಸರಾ ಮಾಡಲು ಸಾಧ್ಯವಿಲ್ಲ. ದಸರಾ ಸರ್ಕಾರದ್ದಲ್ಲ ಎಂಬ ಪದ ಬಳಕೆಯೂ ಸರಿಯಲ್ಲ. ಅಂಬಾರಿ ಆನೆ ಬಗ್ಗೆ ಕಾನೂನು ಪ್ರಕಾರ ಹೇಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

'ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು': ಪ್ರಮೋದಾದೇವಿ ಒಡೆಯರ್​​ ಪತ್ರಕ್ಕೆ ಸಚಿವ ಯತೀಂದ್ರ ತಿರುಗೇಟು
ಪ್ರಮೋದಾದೇವಿ ಒಡೆಯರ್​​ ಪತ್ರಕ್ಕೆ ಸಚಿವ ಯತೀಂದ್ರ ತಿರುಗೇಟು
ರಾಮ್​, ಮೈಸೂರು
| Edited By: |

Updated on: Oct 26, 2026 | 11:36 AM

Share

ಮೈಸೂರು, ಅಕ್ಟೋಬರ್​​ 26: ಮೈಸೂರು ದಸರಾ ಆಚರಣೆ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್​​ ಬರೆದಿರುವ ಪತ್ರ ವಿಚಾರವಾಗಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು. ಅವರು ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ, ಅಷ್ಟೇ. ಅಂಬಾರಿಯನ್ನು ನಾವು ಉಚಿತವಾಗಿ ಪಡೆಯುತ್ತಿಲ್ಲ. ಅದಕ್ಕೂ ಸರ್ಕಾರ ದುಡ್ಡು ಕೊಡುತ್ತದೆ. ಏನೇ ಸಮಸ್ಯೆ ಇದ್ದರೂ ಸರ್ಕಾರಕ್ಕೆ ನೇರವಾಗಿ ಹೇಳಬಹುದಿತ್ತು. ನಾವು ನಿರಂತರವಾಗಿ ಅವರ ಜೊತೆಯಲ್ಲಿ ಸಂಪರ್ಕದಲ್ಲಿದ್ದೆವು. ನಮ್ಮ ಗಮನಕ್ಕೆ ತರದೆ ಏಕಾಏಕಿ ಮಾಧ್ಯಮಕ್ಕೆ ಪತ್ರ ಬರೆದರೆ ಹೇಗೆ? ಅವರೇನು ಸರ್ಕಾರಕ್ಕೆ ಪತ್ರ ಬರೆದಿಲ್ಲ ಎಂದವರು ಹೇಳಿದ್ದಾರೆ. ಅಗತ್ಯವಿದರೆ ಕೆಲವರನ್ನು ಸರ್ಕಾರದಿಂದ ಅವರ ಬಳಿ ಕಳಿಹಿಸುತ್ತೇವೆ. ಏನು ಸಮಸ್ಯೆಯಾಗಿದೆ ಎಂಬುದನ್ನು ಬೇಕಾದರೆ ಚರ್ಚೆ ಮಾಡುತ್ತೇವೆಂದು ಯತೀಂದ್ರ ತಿಳಿಸಿದ್ದಾರೆ.

‘ಅಂಬಾರಿ ಆನೆ ಬಗ್ಗೆ ಕಾನೂನು ಪ್ರಕಾರ ಹೇಳುವ ಅವಶ್ಯಕತೆ ಇಲ್ಲ’

ಪ್ರಮೋದಾದೇವಿ ಒಡೆಯರ್ ಹೇಳಿರುವ ಸಮಸ್ಯೆ ಬಗೆಹರಿಸ್ತೇವೆ. ಆದರೆ ಅವರು ಹೇಳಿದ್ದನ್ನೆಲ್ಲ ಒಪ್ಪಲು ಆಗುವುದಿಲ್ಲ. ಅವರು ಹೇಳಿದ ರೀತಿ 7 ದಿನ ದಸರಾ ಮಾಡಲು ಸಾಧ್ಯವಿಲ್ಲ. ದಸರಾ ಸರ್ಕಾರದ್ದಲ್ಲ ಎಂಬ ಪದ ಬಳಕೆಯೂ ಸರಿಯಲ್ಲ. ಸರ್ಕಾರದ ದಸರಾಗೂ ಇತಿಹಾಸ ಇದೆ. ಅದನ್ನು ದಸರಾ ಅಲ್ಲ ಎಂದು ಹೇಳುವುದನ್ನ ನಾವು ಒಪ್ಪಲ್ಲ. ಅಂಬಾರಿ ಆನೆ ಬಗ್ಗೆ ಕಾನೂನು ಪ್ರಕಾರ ಹೇಳುವ ಅವಶ್ಯಕತೆ ಇಲ್ಲ. ಕೊನೆ ಗಳಿಗೆಯಲ್ಲಿ ಅಂಬಾರಿ ಆನೆ ತೀರ್ಮಾನ ಆಗಿದ್ದು, ಮೊದಲು ಮಹೇಂದ್ರ, ಧನಂಜಯ ಎಂದ್ರು. ಆಮೇಲೆ ಪ್ರಶಾಂತ ಎಂದರು. ಇಲ್ಲೇ ಸ್ವಲ್ಪ ಗೊಂದಲ ಇತ್ತು, ಹೀಗಾಗಿ ಆನೆ ಆಯ್ಕೆ ತಡವಾಗಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ದಸರಾ ಅಂಬಾರಿ ಆನೆ ಆಯ್ಕೆ ವಿಚಾರ ನನ್ನಿಂದ ಮುಚ್ಚಿಡಲಾಗಿತ್ತು: ಪ್ರಮೋದಾದೇವಿ ಒಡೆಯರ್ ಬೇಸರ

‘ಸಂಪ್ರದಾಯ ಮೀರಿ ಕಾರ್ಯಕ್ರಮ ಮಾಡಿಲ್ಲ’

ಇನ್ನು ಪ್ರಮೋದಾದೇವಿ ಒಡೆಯವರ್​​ ಬೇಸರ ಸಂಬಂಧ ಡಿಸಿಎಂ ಪರಮೇಶ್ವರ್ ಕೂಡ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ರಾಜಮನೆತನವನ್ನು ಧಿಕ್ಕರಿಸಿ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಹಿಂದೆ ನಡೆದು ಬಂದ ಸಂಪ್ರದಾಯವನ್ನೇ ಮುಖ್ಯಮಂತ್ರಿಗಳು ಪಾಲನೆ ಮಾಡಿದ್ದಾರೆ. ಯಾವುದೇ ರೀತಿ ಸಂಪ್ರದಾಯ ಮೀರಿ ಕಾರ್ಯಕ್ರಮ ಮಾಡಿಲ್ಲ. ರಾಜಮಾತೆಯವರು ಬೇಸರಗೊಳ್ಳುವುದು ಬೇಡ. ಅವರಿಗೆ ಬೇಸರ ಏನಾದರೂ ಆಗಿದ್ದರೆ ಸರ್ಕಾರದ ಪರವಾಗಿ ನಾವು ಹೋಗಿ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.

ಪ್ರಮೋದಾದೇವಿ ಏನು ಹೇಳಿದ್ದರು?

45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಜಪಡೆ ಕ್ಯಾಪ್ಟನ್ ಆಯ್ಕೆ ವಿಚಾರ ಮುಚ್ಚಿಟ್ಟಿದ್ದಾರೆ. ಕೊನೆ ಕ್ಷಣದವರೆಗೂ ನನಗೆ ಅಂಬಾರಿ ಆನೆ ಬಗ್ಗೆ ಮಾಹಿತಿ ಕೊಡಲಿಲ್ಲ ಎಂದು ಪ್ರಮೋದಾ ದೇವಿ ಆರೋಪಿಸಿದ್ದರು. ಅಲ್ಲದೆ ಮೈಸೂರು ದಸರಾ ಹಿನ್ನೆಲೆ ಅರಮನೆಯಲ್ಲಿ ಕಾರ್ಯಕ್ರಮ ಆಯೋಜನೆ ವಿಚಾರವಾಗಿ ಸರ್ಕಾರಕ್ಕೆ ಪ್ರಮೋದಾದೇವಿ ಕೆಲ ಸಲಹೆಯನ್ನೂ ನೀಡಿದ್ದರು. ಮೊದಲ ದಿನದಿಂದ 7ನೇ ದಿನದವರೆಗೆ ಸರ್ಕಾರ ಎಂದಿನಂತೆಯೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬಹುದು. ಆಯುಧ ಪೂಜೆ, ವಿಜಯದಶಮಿ ದಿನದಂದು ಅರಮನೆ ಆವರಣವನ್ನು ಮುಕ್ತವಾಗಿಡಬೇಕೆಂದು ಆಗ್ರಹಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು