ಪಾರ್ಕ್​ನಲ್ಲಿ ಟಿಪ್ಪು ಬಾವುಟ ಹಾಕಿದ್ದಾರಲ್ಲ, ಒಪ್ಪಿಗೆ ಪಡೆದಿದ್ದಾರಾ? ಸಿದ್ದರಾಮಯ್ಯ, ಪರಮೇಶ್ವರ್​ಗೆ ಪ್ರತಾಪ್​ ಸಿಂಹ ಪ್ರಶ್ನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 30, 2024 | 9:52 PM

ಮಂಡ್ಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ವಿವಾದ ಕೇಸ್ ಹಿನ್ನೆಲೆ ಇದೀಗ ಸಂಸದ ಪ್ರತಾಪ್​ ಸಿಂಹ ಕೂಡ ಸಾಮಾಜಿಕ ಜಾಲತಾಣದ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್​ಗೆ ಟಾಂಗ್​ ನೀಡಿದ್ದಾರೆ. ಮೈಸೂರಿನ ಕೈಲಾಸಪುರಂನ ಪಾರ್ಕ್​​ನಲ್ಲಿ ಟಿಪ್ಪು ಬಾವುಟ ಹಾಕಿದ್ದಾರಲ್ಲ, ಒಪ್ಪಿಗೆ ಪಡೆದಿದ್ದಾರಾ? ಸಿಎಂ ಸಿದ್ದರಾಮಯ್ಯ, ಪರಮೇಶ್ವರ್​ಗೆ? ಪ್ರಶ್ನೆ ಮಾಡಿದ್ದಾರೆ. 

ಪಾರ್ಕ್​ನಲ್ಲಿ ಟಿಪ್ಪು ಬಾವುಟ ಹಾಕಿದ್ದಾರಲ್ಲ, ಒಪ್ಪಿಗೆ ಪಡೆದಿದ್ದಾರಾ? ಸಿದ್ದರಾಮಯ್ಯ, ಪರಮೇಶ್ವರ್​ಗೆ ಪ್ರತಾಪ್​ ಸಿಂಹ ಪ್ರಶ್ನೆ
ಟಿಪ್ಪು ಬಾವುಟ
Follow us on

ಮೈಸೂರು, ಜನವರಿ 30: ಮಂಡ್ಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ವಿವಾದ ಕೇಸ್ ಹಿನ್ನೆಲೆ ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿನ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ಹಾರಾಡುತ್ತಿರುವುದನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದರು. ಇದೀಗ ಸಂಸದ ಪ್ರತಾಪ್​ ಸಿಂಹ (Pratap Simha) ಕೂಡ ಸಾಮಾಜಿಕ ಜಾಲತಾಣದ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್​ಗೆ ಟಾಂಗ್​ ನೀಡಿದ್ದಾರೆ. ಮೈಸೂರಿನ ಕೈಲಾಸಪುರಂನ ಪಾರ್ಕ್​​ನಲ್ಲಿ ಟಿಪ್ಪು ಬಾವುಟ ಹಾಕಿದ್ದಾರಲ್ಲ, ಒಪ್ಪಿಗೆ ಪಡೆದಿದ್ದಾರಾ? ಸಿಎಂ ಸಿದ್ದರಾಮಯ್ಯ, ಪರಮೇಶ್ವರ್​ಗೆ? ಪ್ರಶ್ನೆ ಮಾಡಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಮೈಸೂರಿನ ಕೈಲಾಸಪುರಂನ ಮೊಟ್ಟೆಕೇರಿ ಶ್ರೀನಿವಾಸ ಟೆಂಪಲ್ ರೋಡ್​​ನಲ್ಲಿರುವ ಅಂಬೇಡ್ಕರ್ ಪಾರ್ಕ್​ನಲ್ಲಿ ಟಿಪ್ಪು ಭಾವುಟ ಹಾಕಿದ್ದಾರಲ್ಲಾ ಅವರು ಯಾರ ಅನುಮತಿ ಪಡೆದಿದ್ದಾರೆ ಸಿದ್ದರಾಮಯ್ಯನವರೇ, ಪರಮೇಶ್ವರರೇ? ಎಂದು ಕಿಡಿಕಾರಿದ್ದಾರೆ.

ಸಂಸದ ಪ್ರತಾಪ್​ ಸಿಂಹ ಟ್ವೀಟ್​

ಸದ್ಯ ಕೇಸರಿ ಧ್ವಜ, ಹಸಿರು ಧ್ವಜ ವಿವಾದ ಬೆಂಗಳೂರಿಗೂ ಹಬ್ಬಿದೆ. ಶಿವಾಜಿನಗರದ ಚಾಂದಿನಿ ಚೌಕ್​ನ ಬಿಬಿಎಂಪಿ ಧ್ವಜಸ್ತಂಭದಲ್ಲಿ ಹಸಿರು ಧ್ವಜ ಹಾರಾಡುವುದನ್ನು ಹಿಂದೂ ಕಾರ್ಯಕರ್ತರು ಟ್ವೀಟ್ ಮಾಡಿ ಕಾಂಗ್ರೆಸ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶಿವಾಜಿ ನಗರ ಪೊಲೀಸರು ಹಸಿರುವ ಬಾವುಟವನ್ನು ತೆರವುಗೊಳಿಸಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಶಿವಾಜಿನಗರದಲ್ಲಿ ಹಸಿರು ಬಾವುಟ ತೆಗೆದು ರಾಷ್ಟ್ರ ಧ್ವಜ ಹಾರಿಸಿದ ಪೊಲೀಸರು

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಆರಂಭವಾದ ಧ್ವಜ ದಂಗಲ್ ರಾಜಕೀಯ ವಾಗ್ಯುದ್ಧಕ್ಕೆ ತಿರುಗಿದೆ. ಈ ನಡುವೆ ಗ್ರಾಮಪಂಚಾಯಿತಿ ನೀಡಿದ್ದ ಅನುಮತಿ ಬಗ್ಗೆ ಹಲವು ಆಯಾಮಗಳಲ್ಲಿ ಚರ್ಚೆ ವಾದ-ಪ್ರತಿವಾದಗಳು ನಡೆಯುತ್ತಿವೆ.

ಇದನ್ನೂ ಓದಿ: ಭಟ್ಕಳ ಧ್ವಜ ವಿವಾದ: 20 ನಿಮಿಷದಲ್ಲಿ ಧ್ವಜ ಕಟ್ಟೆ ನಿರ್ಮಾಣ ಮಾಡಿದ ಹಿಂದೂ ಕಾರ್ಯಕರ್ತರು

ಸತ್ಯ-ಅಸತ್ಯ, ಸರಿ-ತಪ್ಪುಗಳು ದಾಖಲೆಗಳ ಸಮೇತ ಹೊರಬರ್ತಿವೆ. ನಿನ್ನೆಯಷ್ಟೇ ಧ್ವಜಸ್ತಂಭಕ್ಕೆ ಸಂಬಂಧಪಟ್ಟ ಒರಿಜಿನಲ್ ದಾಖಲೆಗಳನ್ನು ಗೃಹಸಚಿವ ಪರಮೇಶ್ವರ್ ಬಹಿರಂಗಗೊಳಿಸಿದ್ದರು. ಈ ಮೂಲಕ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು ಅಂತಾ ಪ್ರತಿಪಾದಿಸಿದ್ದರು. ಆದರೆ ಇಂದು ಹೊರಗೆ ಬಂದ ಕೆರಗೋಡು ಗ್ರಾಮ ಪಂಚಾಯಿತಿಯಲ್ಲಾದ ಚರ್ಚೆ, ನಡಾವಳಿ ಹಾಗೂ ಅನುಮತಿ ಪತ್ರದಲ್ಲೇನೇನಿತ್ತು ಅನ್ನೋ ಸತ್ಯ ಆಚೆ ಬರುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.