ಮೈಸೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಹಾಸ್ಟೆಲ್​ಗೆ ಬೀಗ ಹಾಕಿದ ವಾರ್ಡನ್: ಕೊರೆಯುವ ಚಳಿಯಲ್ಲಿ ರಾತ್ರಿ ಕಳೆದ ಮಕ್ಕಳು, ಸ್ಥಳೀಯರ ನೆರವು

| Updated By: ಆಯೇಷಾ ಬಾನು

Updated on: Nov 06, 2022 | 11:12 AM

ವಿದ್ಯಾರ್ಥಿಗಳು ಹೊರಹೋಗಿದ್ದಾಗ ವಾರ್ಡನ್ ಬೀಗ ಹಾಕಿದ್ದಾರೆ. ಈ ಹಿನ್ನೆಲೆ ಮಕ್ಕಳು ಹಾಸ್ಟೆಲ್ ಹೊರ ಕೂರುವಂತಾಗಿದೆ. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮಕ್ಕಳಿಗೆ ಬನ್, ಬಿಸ್ಕತ್​ ನೀಡಿ ಊಟ ನೀಡಿ ನೆರವಾಗಿದ್ದಾರೆ.

ಮೈಸೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಹಾಸ್ಟೆಲ್​ಗೆ ಬೀಗ ಹಾಕಿದ ವಾರ್ಡನ್: ಕೊರೆಯುವ ಚಳಿಯಲ್ಲಿ ರಾತ್ರಿ ಕಳೆದ ಮಕ್ಕಳು, ಸ್ಥಳೀಯರ ನೆರವು
ಕೊರೆಯುವ ಚಳಿಯಲ್ಲಿ ರಾತ್ರಿ ಕಳೆದ ಮಕ್ಕಳು
Follow us on

ಮೈಸೂರು: ಕ್ಷುಲ್ಲಕ ಕಾರಣಕ್ಕೆ ವಾರ್ಡನ್ ಬಿಸಿಎಂ ಹಾಸ್ಟೆಲ್​ಗೆ ಬೀಗ ಹಾಕಿದ್ದು ಮಕ್ಕಳು ಕೊರೆಯುವ ಚಳಿಯಲ್ಲೇ ಹಾಸ್ಟೆಲ್​ ಮುಂದೆ ಕುಳಿತಿದ್ದ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಸರಗೂರು ತಾಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್​ ಪೂರ್ವ ಬಾಲಕರ ಹಾಸ್ಟೆಲ್​ನಲ್ಲಿ ಘಟನೆ ನಡೆದಿದೆ.

ನಿನ್ನೆ ಮಧ್ಯಾಹ್ನ ವಿದ್ಯಾರ್ಥಿಗಳು ಆಟವಾಡಲು ಹೊರಗೆ ತೆರಳಿದ್ದರು. ವಿದ್ಯಾರ್ಥಿಗಳು ಹೊರಹೋಗಿದ್ದಾಗ ವಾರ್ಡನ್ ಬೀಗ ಹಾಕಿದ್ದಾರೆ. ಈ ಹಿನ್ನೆಲೆ ಮಕ್ಕಳು ಹಾಸ್ಟೆಲ್ ಹೊರ ಕೂರುವಂತಾಗಿದೆ. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮಕ್ಕಳಿಗೆ ಬನ್, ಬಿಸ್ಕತ್​ ನೀಡಿ ಊಟ ನೀಡಿ ನೆರವಾಗಿದ್ದಾರೆ. ರಾತ್ರಿ 11 ಗಂಟೆವರೆಗೂ ಮಕ್ಕಳು ಚಳಿಯಲ್ಲೇ ಹೊರಗೆ ಕುಳಿತಿದ್ದರು. ಬಳಿಕ ಸ್ಥಳೀಯರು ವಾರ್ಡನ್​ಗೆ ಕರೆ ಮಾಡಿ ಕರೆಸಿ ಬೀಗ ತೆಗೆಸಿದ್ದಾರೆ. ಹಾಗೂ ಹಾಸ್ಟೆಲ್​ ಅವ್ಯವಸ್ಥೆ, ವಾರ್ಡನ್​ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಮತ್ತೆ ಹೆಣ್ಣು ಮಗು ಹುಟ್ಟಿತೆಂದು ತಂದೆ ನೇಣಿಗೆ ಶರಣು

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿಯ ಮನೆಯಲ್ಲಿ ಲೋಕೇಶ್(34) ಎಂಬ ವ್ಯಕ್ತಿ ನೇಣಿಗೆ ಶರಣಾಗಿದ್ದಾರೆ. ಈ ಮೊದಲು ಲೋಕೇಶ್​ಗೆ ಮೂವರು ಹೆಣ್ಣುಮಕ್ಕಳಿದ್ದರು. 4ನೇ ಮಗು ಕೂಡು ಹೆಣ್ಣು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಮಂಗಳೂರಿನ ಹೊಸ ಸೆಂಟ್ರಲ್ ಮಾರುಕಟ್ಟೆಯಲ್ಲಿ 9 ಬೀಫ್ ಸ್ಟಾಲ್​ಗೆ ಅವಕಾಶ, ವಿಶ್ವಹಿಂದೂ ಪರಿಷತ್ ಆಕ್ರೋಶ

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೂವರ ಸಾವು

ಮೈಸೂರಿನ ಟಿ ನರಸೀಪುರ ತಾಲ್ಲೂಕು ನೀಲಸೋಗೆ ಗ್ರಾಮದಲ್ಲಿ ಅವಘಡವೊಂದು ಸಂಭವಿಸಿದೆ. ಹರೀಶ್ (32), ರಾಚೇಗೌಡ (60), ಮಹದೇವಸ್ವಾಮಿ (38) ಎಂಬುವವರು ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ದೌಡಾಯಿಸಿದ್ದು ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಚಾಕು ತೋರಿಸಿ ಬೇಕರಿಯಲ್ಲಿ ಹಣ ದೋಚಿದ್ದ ಮೂವರ ಬಂಧನ

ಚಾಕು ತೋರಿಸಿ ಬೇಕರಿಯಲ್ಲಿ ಹಣ ದೋಚಿದ್ದ ಮೂವರನ್ನು ಬೆಂಗಳೂರಿನ ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೈಮನ್ ಗ್ಯಾಬ್ರಿಯಲ್, ಶೇಖ್ ಶಫಿ, ಸಿಕಂದರ್​ ಬಂಧಿತರು. ಅ.9ರ ರಾತ್ರಿ ಅಶೋಕನಗರ ಠಾಣಾ ವ್ಯಾಪ್ತಿಯ ಬೇಕರಿಯಲ್ಲಿ ಕೃತ್ಯ ನಡೆದಿತ್ತು. ಬೇಕರಿ ಮಾಲೀಕನಿಗೆ ಚಾಕು ತೋರಿಸಿ ಬೆದರಿಸಿ ಹಣ ದೋಚಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದ ಇಬ್ಬರ ಬಂಧನ

ಬೆಂಗಳೂರಿನ ಅಶೋಕನಗರ ಠಾಣೆ ಪೊಲೀಸರು ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದ ಇಬ್ಬರನ್ನು ಬಂಧಿಸಿದ್ದಾರೆ. ತರುಣ್ ಕುಮಾರ್, ಹರೀಶ್ ಕುಮಾರ್​ ಬಂಧಿತರು. ಆರೋಪಿಗಳು ನ.1ರಂದು ಆಸ್ಟಿನ್​ಟೌನ್​ನ ರೋಜ್​ ವೈನ್ಸ್​ ಬಳಿ ಹಲ್ಲೆ ನಡೆಸಿದ್ದರು. ಕುಮಾರೇಶ್ ತಲೆ, ಕೈ, ಕಾಲಿಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದಿದ್ದರು. ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಸದ್ಯ ಅಶೋಕನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

Published On - 10:37 am, Sun, 6 November 22