ಪ್ರತಿಷ್ಠಾಪನೆಗೆ ಸಿದ್ಧವಾಗಿದ್ದ ಪುನೀತ್ ರಾಜ್‍ಕುಮಾರ್ ಪುತ್ಥಳಿ ವಶಕ್ಕೆ ಪಡೆದ ಪೊಲೀಸರು, ಠಾಣೆ ಮುಂದೆ ಅಭಿಮಾನಿಗಳ ಆಕ್ರೋಶ
ಮೈಸೂರಿನ ಲಿಂಗಾಬುದಿ ಪಾಳ್ಯ ಬಡಾವಣೆಯ ಅಪ್ಪು ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಪುತ್ಥಳಿ ಮಾಡಿಸಿದ್ರು. ಅದನ್ನ ಮೈಸೂರಿನ ಹೊರವಲಯದ ರಿಂಗ್ ರಸ್ತೆಯ ಮಧ್ಯೆ ಇರುವ ಡಿವೈಡರ್‌ನಲ್ಲಿ ಅಳವಡಿಸಲು ಮುಂದಾಗಿದ್ರು. ಅದಕ್ಕಾಗಿ ಎಲ್ಲಾ ಸಿದ್ದತೆಗಳು ನಡೆದಿತ್ತು. ಇನ್ನೇನು ಪುತ್ಥಳಿ ತಂದು ಪ್ರತಿಷ್ಠಾಪಿಸಬೇಕು ಕುವೆಂಪು ನಗರ ಪೊಲೀಸರು ಅದಕ್ಕೆ ಬ್ರೇಕ್ ಹಾಕಿದ್ದಾರೆ.
ಮೈಸೂರು: ಅಪ್ಪು ಅಗಲಿ ತಿಂಗಳಾದರೂ ಪವರ್ ಸ್ಟಾರ್ ನೆನಪು ಮಾತ್ರ ಮಾಸುತ್ತಿಲ್ಲ. ಅಪ್ಪು ಆರಾಧನೆ ನೆನಪಿನ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲೂ ಅಷ್ಟೇ, ಅಪ್ಪು ಹೆಸ್ರಲ್ಲಿ ಪುತ್ಥಳಿ ನಿರ್ಮಿಸಿದ್ರು. ಎಲ್ಲವೂ ರೆಡಿಯಾಗಿತ್ತು. ಆದ್ರೆ, ಪೊಲೀಸ್ರ ಎಂಟ್ರಿ ಬಳಿಕ ಎಲ್ಲವೂ ಬದಲಾಗಿ ಹೋಗಿದೆ.
ಮೈಸೂರಿನ ಲಿಂಗಾಬುದಿ ಪಾಳ್ಯ ಬಡಾವಣೆಯ ಅಪ್ಪು ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಪುತ್ಥಳಿ ಮಾಡಿಸಿದ್ರು. ಅದನ್ನ ಮೈಸೂರಿನ ಹೊರವಲಯದ ರಿಂಗ್ ರಸ್ತೆಯ ಮಧ್ಯೆ ಇರುವ ಡಿವೈಡರ್‌ನಲ್ಲಿ ಅಳವಡಿಸಲು ಮುಂದಾಗಿದ್ರು. ಅದಕ್ಕಾಗಿ ಎಲ್ಲಾ ಸಿದ್ದತೆಗಳು ನಡೆದಿತ್ತು. ಇನ್ನೇನು ಪುತ್ಥಳಿ ತಂದು ಪ್ರತಿಷ್ಠಾಪಿಸಬೇಕು ಕುವೆಂಪು ನಗರ ಪೊಲೀಸರು ಅದಕ್ಕೆ ಬ್ರೇಕ್ ಹಾಕಿದ್ದಾರೆ.
ಅಭಿಮಾನಿಗಳು ಅಪ್ಪು ಪುತ್ಥಳಿಯನ್ನು ಸಾರ್ವಜನಿಕ ಜಾಗದಲ್ಲಿ ಪ್ರತಿಷ್ಠಾಪಿಸಲು ಮುಂದಾಗಿದ್ರು. ಆದ್ರೆ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪುತ್ಥಳಿ ಸ್ಥಾಪಿಸಬಾರದು ಅನ್ನೋ ಆದೇಶವಿದೆ. ಇದೇ ಕಾರಣಕ್ಕೆ ಪೊಲೀಸರು ಇದಕ್ಕೆ ಬ್ರೇಕ್ ಹಾಕಿದ್ದಾರೆ. ವಿಚಾರ ತಿಳಿದ ತಕ್ಷಣ ಪುತ್ಥಳಿ ತಯಾರಿಸಿದ್ದ ಜಾಗಕ್ಕೆ ತೆರಳಿ ಪುತ್ಥಳಿಯನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ತಂದಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಕುವೆಂಪು ನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಅಭಿಮಾನಿಗಳು ಪೊಲೀಸರ ವಿರುದ್ದ ಆಕ್ರೋಶ ಹೊರಹಾಕಿದ್ರು. ನಮಗೆ ಹೇಳಿದ್ರೆ ನಾವೇ ಪುತ್ಥಳಿಯನ್ನು ಪ್ರತಿಷ್ಠಾಪಿಸುತ್ತಿರಲಿಲ್ಲ. ಆದರೆ ಏಕಾ ಏಕಿ ಶಿಲ್ಪಿಯಿಂದಲೇ ಪುತ್ಥಳಿ ತಂದಿದ್ದು ಸರಿಯಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದರು. ಒಟ್ಟಾರೆ ಮೈಸೂರಿನಲ್ಲಿ ಪುನೀತ್ ಪುತ್ಥಳಿ ಸ್ಥಾಪನೆ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ವರದಿ: ರಾಮ್, ಟಿವಿ9 ಮೈಸೂರು
ಇದನ್ನೂ ಓದಿ: ಶಿವಮೊಗ್ಗ: ಕಣ್ಮನ ಸೆಳೆಯುವ ಪುನೀತ್ ಪುತ್ಥಳಿಯನ್ನು ಸ್ಥಾಪಿಸಿದ ಅಭಿಮಾನಿಗಳು; ಚಿತ್ರಗಳನ್ನು ನೋಡಿ