ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ (Prakash Hukkeri) ಜಯಗಳಿಸಿದ್ದು,ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿಗೆ (Basavaraj Horatti) ಜಯವಾಗಿದೆ. ಸದ್ಯ ವಾಯಾವ್ಯ ಪದವೀಧರ ಕ್ಷೇತ್ರದ (Northwestern Graduate Constituency) ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ (Hanumath Nirani) ಗೆಲವು ಬಹುತೇಕ ಖಚಿತವಾಗಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಒಂದೇ ಬಾಕಿ ಇದೆ.
ಹದಿನಾರು ಸಾವಿರ ಮತಗಳ ಎಣಿಕೆ ಮುಂದುವರೆದಿವೆ. ಐದನೇ ಸುತ್ತಿನ ಮತ ಎಣಿಕಾ ಕಾರ್ಯ ಮುಕ್ತಾಯಗೊಂಡಿದ್ದು. ಐದನೇ ಸುತ್ತಿನ ಮತ ಎಣಿಕೆಯಲ್ಲೂ ಬಿಜೆಪಿ ಅಭ್ಯರ್ಥಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ 35000ಮತಗಳು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ 7500ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಿಂತ 27,500 ಸಾವಿರ ಮತಗಳಿಂದ ಹನುಮಂತ ನಿರಾಣಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪಡೆದ ಮತಗಳಿಗಿಂತ ಹೆಚ್ಚು ಮತಗಳು ರಿಜೆಕ್ಟ್ ಆಗಿವೆ. ಈವರೆಗೂ ಎಂಟು ಸಾವಿರ ಮತಗಳು ತಿರಸ್ಕೃತವಾಗಿವೆ. ಐವತ್ತು ಸಾವಿರ ಮತಗಳ ಎಣಿಕೆ ಮುಕ್ತಾಯ, ಇನ್ನೂ 16ಸಾವಿರ ಮತಗಳ ಎಣಿಕೆ ಬಾಕಿ ಇದೆ. ನಾಲ್ಕನೇ ಕ್ಷೇತ್ರವಾದ ದಕ್ಷಿಣ ಪದವೀಧರ ಕ್ಷೇತ್ರ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಮುಕ್ತಾಯವಾಗಿದ್ದು ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ನಾಳೆ (ಜೂನ್ 16) ರಂದು ನಡೆಯಲಿದೆ.
ಇದನ್ನು ಓದಿ: ಬಂಧಿತ ಶಾಂತಿಬಾಯಿ ದಂಪತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಕಲಬುರಗಿ ನ್ಯಾಯಾಲಯ
ದಕ್ಷಿಣ ಪದವೀಧರ ಕ್ಷೇತ್ರ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಮುಕ್ತಾಯ
ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಮುಕ್ತಾಯಗೊಂಡಿದೆ ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ಹೇಳಿದ್ದಾರೆ. ಇಲ್ಲಿವರೆಗು 49,700 ಮತಗಳು ಎಣಿಕೆಯಾಗಿದ್ದು, ಇನ್ನೂ 49,000 ಮತ ಎಣಿಕೆ ಬಾಕಿ ಇವೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ (Congress) : 16,137, ಬಿಜೆಪಿ (BJP) : 13,179, ಜೆಡಿಎಸ್ (JDS) : 8,512 ಪ್ರಸನ್ನ ಗೌಡ : 3,142, ವಿನಯ್ : 1,890, ಬಿಎಸ್ಪಿ : 1,418 , ತಿರಸ್ಕೃತ : 3,718, ಕಾಂಗ್ರೆಸ್ ಅಭ್ಯರ್ಥಿ 2,958 ಮತಗಳ ಮುನ್ನೆಡೆಯಲ್ಲಿವೆ ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ನ (MLC Election) ನಾಲ್ಕು ಸ್ಥಾನಗಳಿಗೆ ಜೂನ್ 13ರಂದು ನಡೆದಿದ್ದ ಚುನಾವಣಾ ಫಲಿತಾಂಶ ಇಂದು ಹೊರಬೀಳುತ್ತಿದೆ. ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಶೇ 59, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶೇ 70, ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 80, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶೇ 84ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಒಟ್ಟು 49 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 2,84,992 ಮತದಾರರು ಇದ್ದಾರೆ.
ಇದನ್ನು ಓದಿ: ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ ಜಯ; ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರಗೆ ಸೋಲು
ವಾಯವ್ಯ ಪದವೀಧರ, ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿದ್ದವು. ಪಶ್ಚಿಮ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಿದ್ದವು. ದಕ್ಷಿಣ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳಿದ್ದವು.
ಮೈಸೂರಿನ ಪಡುವಾರಹಳ್ಳಿ ಮಹಾರಾಣಿ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಿತ್ತು. ಮತ ಎಣಿಕೆಗಾಗಿ 28 ಟೇಬಲ್ ಸಿದ್ಧಪಡಿಸಲಾಗಿತ್ತು. ಪ್ರತಿ ಮತ ಎಣಿಕೆ ಟೇಬಲ್ಗೆ ಇಬ್ಬರು ಮೇಲ್ವಿಚಾರಕರು. ಇಬ್ಬರು ಮತ ಎಣಿಕೆ ಸಹಾಯಕರು ಸೇರಿ 90 ಸಿಬ್ಬಂದಿ ನೇಮಕ ಮಾಡಲಾಗಿದೆ. ಅಭ್ಯರ್ಥಿಗಳು ಪರವಾಗಿ ಮತ ಎಣಿಕೆ ಟೇಬಲ್ಗೆ ಒಬ್ಬರಂತೆ ಎಣಿಕಾ ಏಜೆಂಟ್ ನೇಮಿಸಲಾಗಿದೆ. ಪದವೀಧರ ಕ್ಷೇತ್ರದಲ್ಲಿ 1,41,963 ಮತದಾರರಿದ್ದು, 99,304 ಮಂದಿ ಮತದಾನ ಮಾಡಿದ್ದಾರೆ. ಒಟ್ಟಾರೆಯಾಗಿ 69.95% ಮತದಾನ ದಾಖಲಾಗಿತ್ತು. ಇಂದು 19 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:03 pm, Wed, 15 June 22