ಬೇಲಿಯೇ ಎದ್ದು ಹೊಲ ಮೇಯ್ದಂತೆ, ಮನೆಗಳ್ಳರಿಗೆ ಸಾಥ್ ನೀಡಿದ್ದ ಹೆಡ್​ಕಾನ್ಸ್​ಟೇಬಲ್ ಅರೆಸ್ಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 05, 2024 | 4:04 PM

ಕಾಯುವವರೇ, ಕೊಲ್ಲುವವರಾದರೆ ಜನ ಸಾಮಾನ್ಯರ ಪರಿಸ್ಥಿತಿ ಏನು ಎಂಬ ಪ್ರಶ್ನೆ ಮೂಡಿದೆ. ಹೌದು, ಮನೆಗಳ್ಳರಿಗೆ ಸಾಥ್ ನೀಡಿದ್ದ ಹಿನ್ನಲೆ ಮೈಸೂರಿನ ಅಶೋಕಪುರಂ ಠಾಣೆ ಹೆಡ್​ಕಾನ್ಸ್​ಟೇಬಲ್(Head constable) ರಾಜು ಎಂಬುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಬೇಲಿಯೇ ಎದ್ದು ಹೊಲ ಮೇಯ್ದಂತೆ, ಮನೆಗಳ್ಳರಿಗೆ ಸಾಥ್ ನೀಡಿದ್ದ ಹೆಡ್​ಕಾನ್ಸ್​ಟೇಬಲ್ ಅರೆಸ್ಟ್
ಮನೆಗಳ್ಳರಿಗೆ ಸಾಥ್ ನೀಡಿದ್ದ ಹೆಡ್​ಕಾನ್ಸ್​ಟೇಬಲ್ ಅರೆಸ್ಟ್
Follow us on

ಮೈಸೂರು, ಸೆ.05: ಮನೆಗಳ್ಳರಿಗೆ ಸಾಥ್ ನೀಡಿದ್ದ ಮೈಸೂರಿನ ಅಶೋಕಪುರಂ ಠಾಣೆ ಹೆಡ್​ಕಾನ್ಸ್​ಟೇಬಲ್(Head constable) ರಾಜು ಎಂಬಾತನನ್ನು ಬಂಧಿಸಲಾಗಿದೆ. ಕದ್ದ ಚಿನ್ನಾಭರಣ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮೈಸೂರಿನ ಮಂಡಿ ಠಾಣೆ ಪೊಲೀಸರು ಹೆಡ್​ಕಾನ್ಸ್​ಟೇಬಲ್ ರಾಜು ಸೇರಿದಂತೆ ಕಳ್ಳರಾದ ನಜರುಲ್ಲಾ ಬಾಬು ಹಾಗೂ ಅಲೀಂ ಎಂಬ ಮೂವರನ್ನು ಅರೆಸ್ಟ್​ ಮಾಡಲಾಗಿದೆ.

ಘಟನೆ ವಿವರ

ಮೈಸೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳವು ಮಾಡಿದ್ದ ನಜರುಲ್ಲಾ ಬಾಬು, ಅಲೀಂ. ಸುಮಾರು 400 ಗ್ರಾಂ ಚಿನ್ನಾಭರಣ ಕದ್ದಿದ್ದರು. ಜೊತೆಗೆ ಕದ್ದಿದ್ದ 400 ಗ್ರಾಂ ಚಿನ್ನದಲ್ಲಿ 300 ಗ್ರಾಂನ್ನು ಹೆಚ್​ಸಿ ರಾಜುಗೆ ನೀಡಿದ್ದರು.ಉಳಿದ 100 ಗ್ರಾಂ ಚಿನ್ನಾಭರಣ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ಬಳಿಕ ನಜರುಲ್ಲಾ ಬಾಬು, ಅಲೀಂನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ರಿಯಲ್ ಎಸ್ಟೇಟ್ ವ್ಯವಹಾರ: ನಿವೃತ್ತ ಡಿವೈಎಸ್​ಪಿ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲು

ವಿಚಾರಣೆ ವೇಳೆ ಹೆಡ್​ಕಾನ್ಸ್​ಟೇಬಲ್ ರಾಜು ಬಗ್ಗೆ ಕಳ್ಳರು ಬಾಯ್ಬಿಟ್ಟಿದ್ದು, ಈ ಹಿನ್ನಲೆ ಅಶೋಕಪುರಂ ಠಾಣೆ ಹೆಡ್​ಕಾನ್ಸ್​ಟೇಬಲ್ ರಾಜು ಅವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಹಲವು ಕೇಸ್​ಗಳಲ್ಲಿ ಹೆಡ್​ಕಾನ್ಸ್​ಟೇಬಲ್ ರಾಜು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮಂಡಿ ಠಾಣೆ ಪೊಲೀಸರಿಂದ ಹೆಡ್​ಕಾನ್ಸ್​ಟೇಬಲ್ ರಾಜು ವಿಚಾರಣೆ ಮಾಡಲಾಗುತ್ತಿದೆ. ಕಾಯುವವರೇ ಕೊಲ್ಲುವವರಾದರೆ ಜನ ಸಾಮಾನ್ಯರ ಪರಿಸ್ಥಿತಿ ಏನು ಎಂಬ ಪ್ರಶ್ನೆ ಮೂಡಿದೆ.

ಕೊಟ್ಟಿಗೆಯಲ್ಲಿದ್ದ 11 ಕುರಿಗಳ ಕಳ್ಳತನ; ರೈತ ಕಂಗಾಲು

ಕೋಲಾರ: ಕೊಟ್ಟಿಗೆಯಲ್ಲಿದ್ದ 11 ಕುರಿಗಳನ್ನು ತಡರಾತ್ರಿ  ಕಳ್ಳತನ ಮಾಡಿದ ಘಟನೆ ಮಾಲೂರಿನ ತಾಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದು ರೈತ ನಾರಾಯಣಪ್ಪ ಎಂಬುವರಿಗೆ ಸೇರಿದ ಕುರಿಗಳಾಗಿದ್ದು, ಲಕ್ಷಾಂತರ ಮೌಲ್ಯದ ಕುರಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಇನ್ನು ರಾತ್ರಿ ಪಾಳಿ ಪೊಲೀಸರ ಗಸ್ತು ತಿರುಗುವುದಿಲ್ಲ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ