ತಲೆ ಕೂದಲು ಉದುರುವ ಸಮಸ್ಯೆಯಿಂದ ಬೇಸತ್ತು ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆಗೆ ಶರಣು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 02, 2022 | 12:24 PM

ಮೂರೂವರೆ ವರ್ಷದ ಪುತ್ರಿ ಕೊಂದು ತಾಯಿ ನೇಣಿಗೆ ಶರಣಾಗಿರುವಂತಹ ಘಟನೆ ರಾಜರಾಜೇಶ್ವರಿ ನಗರದ ಚನ್ನಸಂದ್ರದಲ್ಲಿ ನಡೆದಿದೆ. ಅನಾರೋಗ್ಯದಿಂದ ಬೇಸತ್ತು ಪುತ್ರಿ ಜತೆ ದೀಪಾ ಆತ್ಮಹತ್ಯೆ ಮಾಡಕೊಂಡಿರುವ ಶಂಕೆ ವ್ಯಕ್ತವಾಗಿದೆ.

ತಲೆ ಕೂದಲು ಉದುರುವ ಸಮಸ್ಯೆಯಿಂದ ಬೇಸತ್ತು ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆಗೆ ಶರಣು
ಪ್ರಾತಿನಿಧಿಕ ಚಿತ್ರ
Follow us on

ಮೈಸೂರು: ತಲೆ ಕೂದಲು ಉದುರುವ ಸಮಸ್ಯೆಯಿಂದ ಬೇಸರಗೊಂಡ ಯುವತಿ ನೇಣಿಗೆ ಶರಣಾಗಿರುವಂತಹ ಘಟನೆ ನಗರದ ರಾಘವೇಂದ್ರ ನಗರ ಬಡಾವಣೆಯಲ್ಲಿ ನಡೆದಿದೆ. ಕಾವ್ಯಶ್ರೀ (22) ಆತ್ಮಹತ್ಯೆ (Suicide) ಮಾಡಿಕೊಂಡ ಯುವತಿ. ಹಲವು ದಿನಗಳಿಂದ ಅನಾರೋಗ್ಯದಿಂದ ಕಾವ್ಯಶ್ರೀ ಬಳಲುತ್ತಿದ್ದು, ನಿರಂತರವಾಗಿ ಕೂದಲು ಉದುರುತ್ತಿತ್ತು. ಸಾಕಷ್ಟು ಚಿಕಿತ್ಸೆ ಪಡೆದರೂ ಪರಿಹಾರ ದೊರೆತಿರಲಿಲ್ಲ. ಕೂದಲು ಸಂಪೂರ್ಣವಾಗಿ ಕಳೆದುಕೊಂಡ ಹಿನ್ನೆಲೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಾಕು ತೋರಿಸಿ ಸುಲಿಗೆ ಮಾಡಿದ್ದ ಖದೀಮನಿಂದಲೇ ಪೊಲೀಸ್ ಠಾಣೆಗೆ ದೂರು:

ಬೆಂಗಳೂರು: ಚಾಕು ತೋರಿಸಿ ಸುಲಿಗೆ ಮಾಡಿದ್ದ ಖದೀಮನಿಂದಲೇ ಪೊಲೀಸ್​ ಠಾಣೆಗೆ ದೂರು ನೀಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಜೂ.24ರಂದು ಬೈಕ್​​ ಅಡ್ಡಗಟ್ಟಿ ಚಾಕು ತೋರಿಸಿ ವ್ಯಕ್ತಿ ಬೈಕ್​ ಹಾಗೂ ಮೊಬೈಲ್​ನ್ನ ತಬ್ರೇಜ್ ಹಾಗೂ ತೌಸೀಫ್​ ದೋಚಿದ್ದರು. ಈ ವೇಳೆ ಖದೀಮರನ್ನ ಹಿಡಿದು ಸಾರ್ವಜನಿಕರು ಥಳಿಸಿದ್ದಾರೆ. ಹಿಗ್ಗಾಮುಗ್ಗಾ ಥಳಿಸಿದ್ದ ಮೂವರ ವಿರುದ್ಧ ಖದೀಮ ತಬ್ರೇಜ್ ಠಾಣೆಗೆ ದೂರು ನೀಡಿದ. ನ್ಯಾಯಾಲಯದ ಅನುಮತಿ ಪಡೆದು ಸದಾಶಿವನಗರ ಠಾಣಾ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.

ಅನಾರೋಗ್ಯದಿಂದ ಬೇಸತ್ತು ಮೂರೂವರೆ ವರ್ಷದ ಪುತ್ರಿ ಕೊಂದು ತಾನು ನೇಣಿಗೆ ಶರಣಾದ ತಾಯಿ

ಬೆಂಗಳೂರು: ಮೂರೂವರೆ ವರ್ಷದ ಪುತ್ರಿ ಕೊಂದು ತಾಯಿ ನೇಣಿಗೆ ಶರಣಾಗಿರುವಂತಹ ಘಟನೆ ರಾಜರಾಜೇಶ್ವರಿ ನಗರದ ಚನ್ನಸಂದ್ರದಲ್ಲಿ ನಡೆದಿದೆ. ರಿಯಾಳನ್ನು ಕೊಂದು (31) ವರ್ಷದ ದೀಪಾ ನೇಣಿಗೆ ಶರಣಾದ ಮಹಿಳೆ. 1 ವಾರದಿಂದ ಜ್ವರ, ಹೊಟ್ಟೆ ನೋವಿನಿಂದ ದೀಪಾ ಬಳಲುತ್ತಿದ್ದಳು. ನನ್ನ ಸಾವಿಗೆ ಯಾರೂ ಹೊಣೆಯಲ್ಲ ಎಂದು ಬೆಡ್​ರೂಮ್​ನಲ್ಲಿ ಡೆತ್​ನೋಟ್ ಬರೆದಿಟ್ಟು ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಶರಣಾದ ದೀಪಾ ಉಡುಪಿ ಜಿಲ್ಲೆ ಬ್ರಹ್ಮಾವರದವರಾಗಿದ್ದು, 2017ರಲ್ಲಿ ದೀಪಾ, ಆದರ್ಶರೊಂದಿಗೆ ಮದುವೆಯಾಗಿದ್ದು, ಪತಿ ಆದರ್ಶ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದಾರೆ. ವಿವಾಹವಾದಾಗಿನಿಂದ ಮಂತ್ರಿ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದರು. ಚಿಕಿತ್ಸೆ ಪಡೆದರೂ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಅನಾರೋಗ್ಯದಿಂದ ಬೇಸತ್ತು ಪುತ್ರಿ ಜತೆ ದೀಪಾ ಆತ್ಮಹತ್ಯೆ ಮಾಡಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಾಜರಾಜೇಶ್ವರಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕನಸಿನ ಹಣ್ಣುಗಳು: ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಈ ಹಣ್ಣುಗಳು ಕಂಡರೆ ಶುಭವಂತೆ!

Published On - 7:08 am, Sat, 2 July 22