‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆಗೆ ಹೇಗಿತ್ತು ಸುದೀಪ್ ಎಂಟ್ರಿ? ಇಲ್ಲಿದೆ ವಿಡಿಯೋ
ಶಿವರಾಜ್ಕುಮಾರ್ ಅವರು ಈ ಬಾರಿ ‘ಡಿಕೆಡಿ 6’ಗೆ ಜಡ್ಜ್ ಆಗಿರುವುದು ವಿಶೇಷ. ರಕ್ಷಿತಾ ಕೂಡ ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಈಗ ಇವರ ಜತೆ ಸುದೀಪ್ ಕೂಡ ಸೇರಿಕೊಂಡಿದ್ದಾರೆ.
ಕಿಚ್ಚ ಸುದೀಪ್ (Kichcha Sudeep) ಅವರು ‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಬಗ್ಗೆ ಅವರಿಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇದೆ. ಅವರು ಈ ಚಿತ್ರದ ಬಗ್ಗೆ ಹೆಚ್ಚು ಕಾಳಜಿ ತೋರುತ್ತಿದ್ದಾರೆ. ಈಗಾಗಲೇ ಪರ ಭಾಷೆಯಲ್ಲಿ ಒಂದು ಹಂತದ ಪ್ರಚಾರ ಕಾರ್ಯ ಪೂರ್ಣಗೊಂಡಿದೆ. ಈಗ ಕರ್ನಾಟಕದಲ್ಲಿ ಚಿತ್ರಕ್ಕೆ ಪ್ರಚಾರ ಮಾಡಲಾಗುತ್ತಿದೆ. ಸುದೀಪ್ (Sudeep) ಅವರು ಈ ಬಾರಿ ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6’ (Dance Karnataka Dance 6 ) ವೇದಿಕೆ ಏರಿದ್ದಾರೆ. ಶನಿವಾರ (ಜೂನ್ 2) ಹಾಗೂ ಭಾನುವಾರ (ಜೂನ್ 3) ಈ ಸಂಚಿಕೆ ಪ್ರಸಾರ ಆಗಲಿದೆ. ವೇದಿಕೆ ಮೇಲೆ ಸುದೀಪ್ ಎಂಟ್ರಿ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ಅನೇಕ ಟ್ಯಾಲೆಂಟ್ಗಳಿಗೆ ವೇದಿಕೆ ಆಗಿದೆ. ಸಾಕಷ್ಟು ಡ್ಯಾನ್ಸರ್ಗಳು ಇಲ್ಲಿಗೆ ಆಗಮಿಸಿ ತಮ್ಮ ಕಲೆಯನ್ನು ತೋರಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಬ್ಯುಸಿ ಇರುವ ಶಿವರಾಜ್ಕುಮಾರ್ ಅವರು ಈ ಬಾರಿ ‘ಡಿಕೆಡಿ 6’ಗೆ ಜಡ್ಜ್ ಆಗಿರುವುದು ವಿಶೇಷ. ರಕ್ಷಿತಾ ಕೂಡ ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಈಗ ಇವರ ಜತೆ ಸುದೀಪ್ ಕೂಡ ಸೇರಿಕೊಂಡಿದ್ದಾರೆ.
ಸುದೀಪ್ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೂಟಿಂಗ್ಗೆ ಆಗಮಿಸಿರುವ ವಿಡಿಯೋವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಜತೆಗೆ ಈ ಕಾರ್ಯಕ್ರಮದಲ್ಲಿ ಏನೆಲ್ಲ ಆಯ್ತು ಎನ್ನುವ ಸಣ್ಣ ಝಲಕ್ ನೀಡಲಾಗಿದೆ. ಸುದೀಪ್ ಆಗಮಿಸಿದ್ದ ಈ ಸಂಚಿಕೆಯಲ್ಲಿ ಸ್ಪರ್ಧಿಗಳು ಪವರ್ಫುಲ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸ್ಪರ್ಧಿಗಳ ನೃತ್ಯ ನೋಡಿ ಸುದೀಪ್ ಅಚ್ಚರಿ ಹೊರಹಾಕಿದ್ದಾರೆ.
View this post on Instagram
ಸುದೀಪ್ ಹಾಗೂ ಶಿವರಾಜ್ಕುಮಾರ್ ಅವರು ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಕಾರಣಕ್ಕೂ ಇವರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವೇದಿಕೆ ಮೇಲೆ ಸುದೀಪ್ ಹಾಗೂ ಶಿವರಾಜ್ಕುಮಾರ್ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ‘ವಿಕ್ರಾಂತ್ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡಿಗೆ ಶಿವಣ್ಣ ಹಾಗೂ ಸುದೀಪ್ ಡ್ಯಾನ್ಸ್ ಮಾಡಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.
View this post on Instagram
‘ವಿಕ್ರಾಂತ್ ರೋಣ’ ಚಿತ್ರವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ನ ಜಾಕ್ವೆಲಿನ್ ಫರ್ನಾಂಡಿಸ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಯಾರಾದ್ರೂ ಬಿಟ್ಟು ಹೋದ್ರೆ ಹೋಗಲಿ, ಯಾವುದೋ ಒಂದು ಹೊಸದು ಆರಂಭವಾಗುತ್ತದೆ’: ಸುದೀಪ್
‘ವಿಕ್ರಾಂತ್ ರೋಣ’ ಸಿನಿಮಾ ಕಡೆಯಿಂದ ಸಿಕ್ತು ಮತ್ತೊಂದು ಅಪ್ಡೇಟ್; ಹೊಸ ಸಾಂಗ್ ರಿಲೀಸ್ಗೆ ಡೇಟ್ ಫಿಕ್ಸ್