‘ಯಾರಾದ್ರೂ ಬಿಟ್ಟು ಹೋದ್ರೆ ಹೋಗಲಿ, ಯಾವುದೋ ಒಂದು ಹೊಸದು ಆರಂಭವಾಗುತ್ತದೆ’: ಸುದೀಪ್

ಸುದೀಪ್ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಹಲವರ ಬಾಳಲ್ಲಿ ಹಲವರು ಬಿಟ್ಟು ಹೋಗುತ್ತಾರೆ. ಆ ಕುರಿತಾಗಿಯೂ ಸುದೀಪ್ ಕೆಲ ಸಲಹೆ ನೀಡಿದ್ದಾರೆ.

TV9kannada Web Team

| Edited By: Rajesh Duggumane

Jun 28, 2022 | 8:00 PM

‘ಕಿಚ್ಚ’ ಸುದೀಪ್ (Kichcha Sudep) ಅವರ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ತೆರೆಗೆ ಬರೋಕೆ ರೆಡಿ ಇದೆ. ಈ ಚಿತ್ರ ಜುಲೈ 28ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಸುದೀಪ್ ಬ್ಯುಸಿ ಆಗಿದ್ದಾರೆ. ಟಿವಿ9 ಕನ್ನಡಕ್ಕೆ ಅವರು ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಹಲವರ ಬಾಳಲ್ಲಿ ಹಲವರು ಬಿಟ್ಟು ಹೋಗುತ್ತಾರೆ. ಆ ಕುರಿತಾಗಿಯೂ ಸುದೀಪ್ ಕೆಲ ಸಲಹೆ ನೀಡಿದ್ದಾರೆ. ‘ಒಬ್ಬರು ಬಿಟ್ಟು ಹೋದರೆ ಹೋಗಲಿ. ಯಾವುದೋ ವಸ್ತು ಒಡೆದು ಹೋಯ್ತು ಅಂದ್ರೆ ಹೋಗಲಿ. ಪ್ರತಿಯೊಂದು ಕೊನೆಯಾದಾಗಲೂ ಹೊಸದೊಂದು ಆರಂಭ ಆಗುತ್ತದೆ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: Kichcha Sudeep: ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಅಮಿತಾಭ್​ ಬಚ್ಚನ್​ ಸಾಥ್​; ಕಿಚ್ಚ ಸುದೀಪ್​ ಸಿನಿಮಾಗೆ ‘ಬಿಗ್​ ಬಿ’ ಬೆಂಬಲ

Sudeep: ‘ನಾನು-ಶಿವಣ್ಣ ಕೆಲವು ಸಮಯ ಮಾತಾಡ್ತಾ ಇರಲಿಲ್ಲ, ಕಾರಣ ಹುಡುಕ್ತಾ ಹೋದ್ರೆ..’; ಸುದೀಪ್​ ನೇರ ಮಾತು

Follow us on

Click on your DTH Provider to Add TV9 Kannada