ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಬಸ್ ಗಳಿಲ್ಲದೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಪರದಾಟ

ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಬಸ್ ಗಳಿಲ್ಲದೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಪರದಾಟ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 28, 2022 | 4:56 PM

ಇಲ್ಲಿ ನಿಂತಿರುವ ಬಸ್ಸಲ್ಲಿ ಶಾಲಾ ಮಕ್ಕಳು ಏಣಿಯ ಮೂಲಕ ಬಸ್ಸಿನ ಟಾಪ್ ಹತ್ತಿ ಮೇಲೆ ಕೂರುತ್ತಿರುವುದನ್ನು ನೋಡಬಹುದು. ಇದು ಬಹಳ ಅಪಾಯಕಾರಿ ಅಭ್ಯಾಸ. ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಇದಕ್ಕೆಲ್ಲ ಅವಕಾಶ ನೀಡಬಾರದು. ಏನಾದರೂ ಹೆಚ್ಚು ಕಮ್ಮಿಯಾದರೆ ಅದಕ್ಕೆ ಯಾರು ಗತಿ?

ವಿಜಯಪುರದ ಮುದ್ದೇಬಿಹಾಳ ತಾಲ್ಲೂಕಿನ ಗುಂಡಕರ್ಜಗಿ ಗ್ರಾಮದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಕರ್ಯವಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ. ಇಲ್ಲಿ ನಿಂತಿರುವ ಬಸ್ಸಲ್ಲಿ ಶಾಲಾ ಮಕ್ಕಳು ಏಣಿಯ ಮೂಲಕ ಬಸ್ಸಿನ ಟಾಪ್ ಹತ್ತಿ ಮೇಲೆ ಕೂರುತ್ತಿರುವುದನ್ನು ನೋಡಬಹುದು. ಇದು ಬಹಳ ಅಪಾಯಕಾರಿ ಅಭ್ಯಾಸ. ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಇದಕ್ಕೆಲ್ಲ ಅವಕಾಶ ನೀಡಬಾರದು. ಏನಾದರೂ ಹೆಚ್ಚು ಕಮ್ಮಿಯಾದರೆ ಅದಕ್ಕೆ ಯಾರು ಗತಿ? ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ಶಾಲೆಗಳು ಆರಂಭ ಮತ್ತು ಮುಗಿಯುವ ಸಮಯದಲ್ಲಿ ಹೆಚ್ಚುವರಿ ಬಸ್ಗಳನ್ನು ಓಡಿಸುವ ಬಗ್ಗೆ ಯೋಚಿಸಬೇಕು.

ಇದನ್ನೂ ಓದಿ:   Viral Video: ಜೋರ್ಡಾನ್​​ನ ಬಂದರಿನಲ್ಲಿ ವಿಷಾನಿಲ ಸೋರಿಕೆ; 12 ಜನ ಸಾವು, 250ಕ್ಕೂ ಹೆಚ್ಚು ಮಂದಿಗೆ ಗಾಯ