ಸಾರಿಗೆ ಸಂಸ್ಥೆಯಲ್ಲಿ 7-8 ಲಕ್ಷ ಲೀಟರ್ ಡೀಸೆಲ್ ಸಂಗ್ರಹವಿದೆ, ಸಾರ್ವಜನಿಕರು ಅತಂಕಪಡುವ ಅವಶ್ಯಕತೆಯಿಲ್ಲ: ಶ್ರೀರಾಮುಲು
ಮುಂಬರುವ ದಿನಗಳಲ್ಲಿ ಸಾರಿಗೆ ಸಂಸ್ಥೆಯ ಎಲ್ಲ 47 ಡಿಪೊಗಳಲ್ಲಿ ಒಂದೊಂದು ರಿಟೇಲ್ ಬಂಕ್ ಸ್ಥಾಪಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ ಸಚಿವರು ಯಾವ ಕಾರಣಕ್ಕೂ ಜನರು ಆತಂಕಪಡುವ ಸ್ಥಿತಿ ಇಲ್ಲ, ಒಂದೇ ಒಂದು ಬಸ್ ಕೂಡ ಡೀಸೆಲ್ ಕೊರತೆಯಿಂದ ನಿಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
Bengaluru: ಡೀಸೆಲ್ ಕೊರತೆ ಸಂಬಂಧಿಸಿದಂತೆ ಸಾರಿಗೆ ಮಾಧ್ಯಮವಾಗಿ ಬಿ ಎಮ್ ಟಿ ಸಿ (BMTC) ಮತ್ತು ಕೆ ಎಸ್ ಆರ್ ಟಿ ಸಿ ಬಸ್ ಗಳ (KSRTC) ಅವಲಂಬಿತರಾಗಿರುವ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲವೆಂದು ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಮಂಗಳವಾರ ಬೆಂಗಳೂರಲ್ಲಿ ಹೇಳಿದರು. ನಮ್ಮ ಬಳಿ ಈಗಾಗಲೇ 7-8 ಲಕ್ಷ ಲೀಟರ್ ಡೀಸೆಲ್ ಸಂಗ್ರಹವಿದೆ. ಇದು ಒಂದು ವಾರದವರೆಗೆ ನಡೆಯುತ್ತದೆ. ಅದಲ್ಲದೆ ಮುಂಜಾಗ್ರತೆಯ ಕ್ರಮವಾಗಿ ಡೀಸೆಲ್ ಅನ್ನು ರಿಟೇಲ್ ಬಂಕ್ ಗಳಿಂದ ತುಂಬಿಸಿಕೊಳ್ಳುವ ಕೆಲಸ ಕೂಡ ಸಂಸ್ಥೆ ಮಾಡುತ್ತಿದೆ.
ಮುಂಬರುವ ದಿನಗಳಲ್ಲಿ ಸಾರಿಗೆ ಸಂಸ್ಥೆಯ ಎಲ್ಲ 47 ಡಿಪೊಗಳಲ್ಲಿ ಒಂದೊಂದು ರಿಟೇಲ್ ಬಂಕ್ ಸ್ಥಾಪಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ ಸಚಿವರು ಯಾವ ಕಾರಣಕ್ಕೂ ಜನರು ಆತಂಕಪಡುವ ಸ್ಥಿತಿ ಇಲ್ಲ, ಒಂದೇ ಒಂದು ಬಸ್ ಕೂಡ ಡೀಸೆಲ್ ಕೊರತೆಯಿಂದ ನಿಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Viral Video: ಮಳೆಗಾಲದಲ್ಲಿ ಹೇಗೆ ನಡೆದುಕೊಂಡು ಹೋಗಬೇಕು ಗೊತ್ತಾ? ಈ ವಿಡಿಯೋ ನೋಡಿ
Latest Videos