Tomato Price: ಮೈಸೂರು; ಬೆಲೆ ಸಿಗದ ಸಿಟ್ಟಲ್ಲಿ 40 ಟ್ರೇ ಟೊಮೆಟೊ ರಸ್ತೆಗೆ ಸುರಿದ ರೈತರು

ಕಷ್ಟಪಟ್ಟು ಬೆಳೆದ 40 ಟ್ರೇ ಟೊಮೆಟೊವನ್ನು ಇಲ್ಲಿವರೆಗೆ ತೆಗೆದುಕೊಂಡು ಬಂದಿದ್ದೇವೆ. ಇಲ್ಲಿ ಉತ್ತಮ ಬೆಲೆ ದೊರೆಯುತ್ತಿಲ್ಲ. ವಾಪಸ್ ತೆಗೆದುಕೊಂಡು ಹೋಗಲು ನಮ್ಮ ಬಳಿ ದುಡ್ಡಿಲ್ಲ ಎಂದು ರೈತರು ಹೇಳಿದ್ದಾರೆ.

Follow us
TV9 Web
| Updated By: Ganapathi Sharma

Updated on:Feb 22, 2023 | 9:31 AM

ಮೈಸೂರು: ಬೆಳೆದ ಬೆಲೆಗೆ ಸೂಕ್ತ ಬೆಲೆ (Tomato Price) ಸಿಗದ ಸಿಟ್ಟಿನಲ್ಲಿ ರೈತರು (Farmers) 40 ಟ್ರೇ ಟೊಮೆಟೊವನ್ನು (Tomato) ರಸ್ತೆಗೆ ಸುರಿದ ಘಟನೆ ಹುಣಸೂರು ಎಪಿಎಂಸಿ ಆವರಣದಲ್ಲಿ ನಡೆದಿದೆ. ಹುಣಸೂರು ತಾಲ್ಲೂಕು ರಾಮಪಟ್ಟಣದಿಂದ ಎಪಿಎಂಸಿಗೆ (Hunsur APMC) ಟೊಮೆಟೊ ಮಾರಾಟ ಮಾಡಲು ರೈತರು ಬಂದಿದ್ದರು. ಸುಮಾರು 1 ಎಕರೆ ಪ್ರದೇಶದಲ್ಲಿ 1 ಲಕ್ಷ ರೂ. ವೆಚ್ಚದಲ್ಲಿ 3 ತಿಂಗಳುಗಳಿಂದ ಕೃಷಿ ಮಾಡಲಾಗಿತ್ತು. ಉತ್ತಮ ಇಳುವರಿಯೂ ಬಂದಿತ್ತು. ಆದರೆ ಸೂಕ್ತ ಬೆಲೆ ಸಿಗದೆ ನಷ್ಟವಾಗಿದೆ ಎಂದು ರೈತರು ಅಳಲುತೋಡಿಕೊಂಡಿದ್ದಾರೆ.

ಮಧ್ಯವರ್ತಿಗಳಿಂದಾಗಿ ಬೆಲೆ ಸಮಸ್ಯೆ ಸೃಷ್ಟಿಯಾಗಿದೆ. ಟೊಮೆಟೊಗೆ ಉತ್ತಮ ಬೆಲೆ ಇದ್ದರೂ ಕಡಿಮೆ ಬೆಲೆ ನೀಡಿ ಅನ್ಯಾಯ ಎಸಗುತ್ತಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದ್ದೆವು. ಆದರೆ, ಕ್ರಮ ಕೈಗೊಂಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಷ್ಟಪಟ್ಟು ಬೆಳೆದ 40 ಟ್ರೇ ಟೊಮೆಟೊವನ್ನು ಇಲ್ಲಿವರೆಗೆ ತೆಗೆದುಕೊಂಡು ಬಂದಿದ್ದೇವೆ. ಇಲ್ಲಿ ಉತ್ತಮ ಬೆಲೆ ದೊರೆಯುತ್ತಿಲ್ಲ. ವಾಪಸ್ ತೆಗೆದುಕೊಂಡು ಹೋಗಲು ನಮ್ಮ ಬಳಿ ದುಡ್ಡಿಲ್ಲ ಎಂದು ರೈತರು ಹೇಳಿದ್ದಾರೆ. ಜತೆಗೆ, ಟೊಮೆಟೊವನ್ನು ರಸ್ತೆಗೆ ಸುರಿದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 am, Wed, 22 February 23