ಟಿವಿ9 ಇಂಪ್ಯಾಕ್ಟ್​: ಮೈಸೂರಿನ ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಸಿಕ್ತಿದೆ ಹೊಟ್ಟೆ ತುಂಬಾ ಊಟ

| Updated By: ವಿವೇಕ ಬಿರಾದಾರ

Updated on: Sep 16, 2024 | 11:43 AM

ಅವರೆಲ್ಲ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು. ಓದಿ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರಿ ವಸತಿ ನಿಲಯ ಸೇರಿದ ಮಕ್ಕಳಿಗೆ ಊಟವನ್ನು ಕೊಡದೆ ಅರೆ ಹೊಟ್ಟೆಯಲ್ಲಿ ಇರಿಸಲಾಗಿತ್ತು. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿದ್ದೆ ತಡ ಎಲ್ಲವೂ ಸರಿಯಾಗಿದೆ.‌ ಏನಿದು ಹಾಸ್ಟೆಲ್ ಅವಾಂತರ ಈ ಸುದ್ದಿ ಓದಿ.

ಟಿವಿ9 ಇಂಪ್ಯಾಕ್ಟ್​: ಮೈಸೂರಿನ ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಸಿಕ್ತಿದೆ ಹೊಟ್ಟೆ ತುಂಬಾ ಊಟ
ಕರ್ನಾಟಕ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯ
Follow us on

ಮೈಸೂರು, ಸೆಪ್ಟೆಂಬರ್​ 16: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ತವರು ಮೈಸೂರು (Mysore) ಜಿಲ್ಲೆಯ ಹೆಚ್​ಡಿ ಕೋಟೆಯ (HD Kote) ಕರ್ನಾಟಕ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ಒಟ್ಟು 65 ಮಂದಿ ವಿದ್ಯಾರ್ಥಿನಿಯರಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಕಳೆದ 15 ದಿ‌ನಗಳಿಂದ ಸಮರ್ಪಕ ಊಟ ಸಿಕ್ಕಿರಲಿಲ್ಲ. ಊಟ ಇಲ್ಲದೆ ವಿದ್ಯಾರ್ಥಿನಿಯರು ಸೊರಗಿ ಹೋಗಿದ್ದರು. 65 ಮಕ್ಕಳಿಗೆ 1 ಲೀಟರ್ ಹಾಲು ಹಾಗೂ ದಿನಕ್ಕೆ ಕೇವಲ‌ ಐದೂವರೆ ಕೆಜಿ ಅಕ್ಕಿ ನೀಡಲಾಗುತಿತ್ತು. ಇದರಿಂದ ವಿದ್ಯಾರ್ಥಿನಿಯರು ವಸತಿ ನಿಲಯ ಬಿಟ್ಟು ಹೋಗಲು ನಿರ್ಧರಿಸಿದ್ದರು. ವಿದ್ಯಾರ್ಥಿನಿಯರ ಈ ಪರಿಸ್ಥಿತಿಯ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು.

ಈ ವಿಚಾರ ತಿಳಿದು ವಸತಿ ನಿಲಯದ ವಾರ್ಡನ್ ಛಾಯಾ ಮಾತನಾಡಿ, ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ವಿಟ್ಟರು. ಗುತ್ತಿಗೆದಾರನ ಸಮಸ್ಯೆಯಿಂದ ಈ ರೀತಿ ಪರಿಸ್ಥಿತಿ ಉದ್ಭವವಾಗಿದೆ ಅಂತ ಹೇಳಿದ್ದರು. ನಂತರ ಮಾತನಾಡಿದ ಹಾಗೂ ಬಿಇಓ ಕಾಂತರಾಜು, ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಇದನ್ನೂ ಓದಿ: ಮೈಸೂರು: ಕಲುಷಿತ ನೀರು ಸೇವಿಸಿ ಓರ್ವ ಸಾವು, 12 ಜನ ಅಸ್ವಸ್ಥ

ಟಿವಿ9 ವರದಿ ಪ್ರಸಾರ ಮಾಡಿದ ಸ್ವಲ್ಪ ಹೊತ್ತಿನಲ್ಲೇ ವಿದ್ಯಾರ್ಥಿನಿಯರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಹಾಸ್ಟೆಲ್‌ಗೆ ಅಗತ್ಯವಿರುವ ದಿನಸಿ ಮತ್ತು ಹಾಲು ಸೇರಿದಂತೆ ಎಲ್ಲವನ್ನೂ ತಲುಪಿಸಲಾಗಿದೆ ಹೇಳಿದ್ದಾರೆ. ಖುದ್ದು ಬಿಇಓ ಕಾಂತರಾಜು ತಕ್ಷಣ ವಸತಿ ನಿಲಯಕ್ಕೆ ತೆರಳಿ ವಿದ್ಯಾರ್ಥಿನಿಯರ ಜೊತೆ ಮಾತನಾಡಿದ್ದಾರೆ. ಮುಂದೆ ಎಂದೂ ಈ ರೀತಿ ಆಗದಂತೆ ಕ್ರಮ ವಹಿಸುವುದಾಗಿ ಮಕ್ಕಳಿಗೆ ತಿಳಿಸಿದ್ದಾರೆ.

ಸದ್ಯ ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್ ಹಾಸ್ಟೆಲ್ ಸಮಸ್ಯೆ ಸಂಪೂರ್ಣ ಬಗೆಹರಿದಿದೆ. ಮಕ್ಕಳು ಸಾಕಷ್ಟು ಖುಷಿಯಾಗಿದ್ದಾರೆ. ಇಂತಹ ಘಟನೆ ಯಾವ ವಸತಿ ನಿಲಯದಲ್ಲಿ ನಡೆಯದಿರಲಿ. ದೇಶದ ಭವಿಷ್ಯದ ಮಕ್ಕಳ ಹಿತ ಕಾಪಾಡುವಲ್ಲಿ ಸರ್ಕಾರ ಗಮನ ಹರಿಸಲಿ ಎನ್ನುವದೇ ಟಿವಿ9 ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ