ನಾಗರಹೊಳೆ ಅರಣ್ಯದಲ್ಲಿ ಸಫಾರಿ ಮಾಡುವ ವೇಳೆ ಜೀಪ್​ ಎದುರೇ ಎರಡು ಹುಲಿಗಳ ಕಾದಾಟ; ವಿಡಿಯೋ ಇದೆ

| Updated By: preethi shettigar

Updated on: Aug 09, 2021 | 1:24 PM

ಸಾಮಾನ್ಯವಾಗಿ ಕಾಡಿನಲ್ಲಿ ಎರಡು ಹುಲಿಗಳ ನಡುವೆ ಈ ರೀತಿ ಕಾದಾಟ ನಡೆಯುತ್ತದೆ. ಆದರೆ ಅದು ಪ್ರವಾಸಿಗರಿಗೆ ಕಾಣ ಸಿಗುವುದಿಲ್ಲ. ಇಂತದ್ದೊಂದು ಅಪರೂಪದ ದೃಶ್ಯ ಈಗ ನೋಡುಗರನ್ನು ಹೆಚ್ಚು ಕುತೂಹಲ ಉಂಟುಮಾಡಿದೆ.

ನಾಗರಹೊಳೆ ಅರಣ್ಯದಲ್ಲಿ ಸಫಾರಿ ಮಾಡುವ ವೇಳೆ ಜೀಪ್​ ಎದುರೇ ಎರಡು ಹುಲಿಗಳ ಕಾದಾಟ; ವಿಡಿಯೋ ಇದೆ
ಎರಡು ಹುಲಿಗಳ ಕಾದಾಟ ಅಪರೂಪದ ದೃಶ್ಯ
Follow us on

ಮೈಸೂರು: ನಾಗರಹೊಳೆ ಅರಣ್ಯದಲ್ಲಿ ಸಫಾರಿ ಮಾಡುವ ವೇಳೆ ಎರಡು ಹುಲಿಗಳ ಕಾದಾಟದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಸಫಾರಿಯಲ್ಲಿ ಈ ದೃಶ್ಯ ಕಂಡುಬಂದಿದೆ. ಹುಲಿಗಳು ತಮ್ಮ ಸಾಮ್ರಾಜ್ಯಕ್ಕಾಗಿ ಕಾದಾಟ ನಡೆಸುತ್ತವೆ ಎನೋ ಎಂಬತ್ತೆ ಇವುಗಳ ವರ್ತನೆ ಬಿಂಬಿತವಾಗಿದೆ.

ಒಂದು ಹುಲಿಯ ಟೆರಿಟರಿಗೆ ಮತ್ತೊಂದು ಹುಲಿ ಬಂದಾಗ ಕಾದಾಟ ಶುರುವಾಗಿದ್ದು, ಕಾದಾಟದ ಅಪರೂಪದ ದೃಶ್ಯವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಸಾಮಾನ್ಯವಾಗಿ ಕಾಡಿನಲ್ಲಿ ಎರಡು ಹುಲಿಗಳ ನಡುವೆ ಈ ರೀತಿ ಕಾದಾಟ ನಡೆಯುತ್ತದೆ. ಆದರೆ ಅದು ಪ್ರವಾಸಿಗರಿಗೆ ಕಾಣ ಸಿಗುವುದಿಲ್ಲ. ಇಂತದ್ದೊಂದು ಅಪರೂಪದ ದೃಶ್ಯ ಈಗ ನೋಡುಗರನ್ನು ಹೆಚ್ಚು ಕುತೂಹಲ ಉಂಟುಮಾಡಿದೆ.

ಕೊರೊನಾ ಎರಡನೇ ಅಲೆಯ ಕಾರಣದಿಂದಾಗಿ ಸಫಾರಿಗೆ ಅಥವಾ ಮೃಗಾಲಯಗಳ ಭೇಟಿಗೆ ಅವಕಾಶವಿರಲಿಲಲ್ಲ ಈ ಸಂದರ್ಭದಲ್ಲಿ ಪ್ರಾಣಿಗಳು ಕೂಡ ಸಂಕಷ್ಟಕ್ಕೆ ಗುರಿಯಾಗಿದ್ದವು. ಹೀಗಾಗಿ ಈ ಬಾರಿ ಆಸರೆಯಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್.‌ ನಟ ದರ್ಶನ್‌ ಅವರ ಅಭಿಯಾನಕ್ಕೆ‌ 3 ಕೋಟಿಗೂ ಅಧಿಕ ದೇಣಿಗೆ ಸಂಗ್ರವಾಗಿದ್ದು, ಪ್ರಾಣಿಗಳ ನೆರವಿಗೆ ಜನರು ಮುಂದೆ ಬಂದಿದ್ದಾರೆ.‌ ಈಗ ಕೊರೊನಾ ಸೋಂಕಿನ ತೀವ್ರತೆಯೂ ಕಡಿಮೆಯಾಗುತ್ತಿದ್ದು, ಲಾಕ್​ಡೌನ್​ ಸಡಿಲಗೊಂಡಿದೆ. ಹೀಗಾಗಿ 3 ಮೃಗಾಲಯಕ್ಕೆ ಪ್ರವಾಸಿಗರಿಗೆ ಅವಕಾಶ‌ ನೀಡಲಾಗಿದೆ. ಹೀಗಾಗಿ ಮೈಸೂರಿನ ನಾಗರಹೊಳೆಗೆ ಪ್ರಾಣಿ ಪ್ರಿಯರು ಆಗಮಿಸುತ್ತಿದ್ದಾರೆ.

ಇದನ್ನೂ ಓದಿ:

ಗರಿಬಿಚ್ಚಿ ಕುಣಿಯುತ್ತಿದ್ದ ನವಿಲಿನ ಮೇಲೆ ಹುಲಿ ದಾಳಿ; ರಾಷ್ಟ್ರಪಕ್ಷಿ ಹಾಗೂ ರಾಷ್ಟ್ರಪ್ರಾಣಿ ಮುಖಾಮುಖಿಯಾದ ವಿಡಿಯೋ ವೈರಲ್

ಟೂರಿಸ್ಟ್​ ವ್ಯಾನ್​ ಸುತ್ತುವರೆದ ದೈತ್ಯಾಕಾರದ 3 ಹುಲಿಗಳು: ಪ್ರವಾಸಿಗರ ಹೃದಯ ಬಡಿತ ಹೆಚ್ಚಾಯ್ತು! ವಿಡಿಯೋ ವೈರಲ್ ಆಯ್ತು

Published On - 11:27 am, Mon, 9 August 21