ಮೇಲ್ಜಾತಿಯಲ್ಲಿರುವವರು ಮೀಸಲಾತಿಗೆ ಅರ್ಹರಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 27, 2022 | 5:40 PM

ಮೇಲ್ಜಾತಿಯವರಿಗೆ 10% ಮೀಸಲಾತಿ ಕೊಟ್ಟಿದ್ದಾರೆ ಅದು ಸರಿನಾ. ಮೇಲ್ಜಾತಿಯಲ್ಲಿರುವವರು ಮೀಸಲಾತಿಗೆ ಅರ್ಹರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮೇಲ್ಜಾತಿಯಲ್ಲಿರುವವರು ಮೀಸಲಾತಿಗೆ ಅರ್ಹರಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ಧರಾಮಯ್ಯ
Follow us on

ಮೈಸೂರು: ಮೇಲ್ಜಾತಿಯವರಿಗೆ 10% ಮೀಸಲಾತಿ (Upper castes) ಕೊಟ್ಟಿದ್ದಾರೆ ಅದು ಸರಿನಾ. ಮೇಲ್ಜಾತಿಯಲ್ಲಿರುವವರು ಮೀಸಲಾತಿಗೆ ಅರ್ಹರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಹೆಚ್​​.ಡಿ.ಕೋಟೆಯಲ್ಲಿ ನಡೆದ ವಿಶ್ವಕರ್ಮ ಸಮುದಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾರು ಹಿಂದುಳಿದಿದ್ದಾರೋ ಅವರಿಗೆ ಮಾತ್ರ ಮೀಸಲಾತಿ ಸಿಗಬೇಕು. ಯಾವ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಹೇಳಿ. ಬಸವಣ್ಣ ಅನುಭವ ಮಂಟಪ ಮಾಡಿ ಸಮಾನ ಅವಕಾಶ ಕೊಟ್ಟರು. ಅದಕ್ಕಾಗಿ ನಾವು ಬಸವಣ್ಣರಿಗೆ ಗೌರವ ಕೊಡುತ್ತೇವೆ. ನಾನು ರಾಜಕೀಯದಲ್ಲಿ ಇರುವವರೆಗೂ ಎಲ್ಲರಿಗೂ ಸಹಾಯ ಮಾಡುತ್ತೇನೆ. ಜಾತಿ ವ್ಯವಸ್ಥೆ ಇರಬಾರದು ಎಲ್ಲರೂ ಮನುಷ್ಯರಾಗಿ ಬದುಕಬೇಕು. ಅಧಿಕಾರ ಸಮಾನವಾಗಿ ಹಂಚಿಕೆಯಾದ್ರೆ ಜಾತಿ ವ್ಯವಸ್ಥೆ ಹೋಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಾವಿಯಲ್ಲಿ ನೀರು ಸೇದಲು ಹೋಗುತ್ತಿದ್ದೆ. ಬಾವಿ ಕಸವನ್ನು ಪಕಕ್ಕೆ ತಳ್ಳಿ ನೀರು ಸೇದುತ್ತೇವೆ. ಮತ್ತೆ ಕಸ ಸೇರಿಕೊಳ್ಳುತ್ತದೆ. ಇದೇ ರೀತಿ ಸದ್ಯ ಸಮಾಜ ಆಗಿದೆ. ರಘು ಆಚಾರ ಆರ್ಥಿಕವಾಗಿ ಸಬಲರಾದ ಕಾರಣ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುತ್ತಾನೆ. ಚಿತ್ರದುರ್ಗದಿಂದ ಟಿಕೆಟ್ ಕೊಡಿ ಗೆಲ್ಲುತ್ತೇನೆ ಅಣ್ಣಾ ಎಂದ. ನೋಡೋಣ ಇರಪ್ಪ ಅಂತಾ ಹೇಳಿದ್ದೀನಿ ಎಂದು ಹೇಳಿದರು.

ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಡಿಸುತ್ತೇನೆ:

ನಮಗೆ ರಾಜ್ಯದ ಜನ ಅವಕಾಶ ಕೊಟ್ಟರೆ, ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಡಿಸುತ್ತೇನೆ. ಆಗ ಸಿದ್ದರಾಮಯ್ಯರ ಮುಖವನ್ನೇ ಜಿ.ಟಿ. ದೇವೇಗೌಡ ನೋಡುತ್ತಿದ್ದರು. ನಾನು ಹೇಳ್ತಾ ಇರೋದು ಅವಕಾಶ ಸಿಕ್ಕರೆ ಅನುದಾನ ಕೊಡಿಸುತ್ತೇನೆ ಎಂದು. ಮತ್ತೆ ಅದನ್ನೇ ಒತ್ತಿ ಹೇಳಿದ ಸಿದ್ದರಾಮಯ್ಯ.

‘ಸಿದ್ದರಾಮಯ್ಯ ಒಬ್ಬ ಮೀರ್​ ಸಾದಿಕ್ ರಾಜಕಾರಣಿ’

ಸಿದ್ದರಾಮಯ್ಯ ಒಬ್ಬ ಮೀರ್​ ಸಾದಿಕ್ ರಾಜಕಾರಣಿ. ಅವರಿಗೆ ಹಿಂದುಳಿದ ವರ್ಗಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಡಿಸಿಎಂ ಪರಮೇಶ್ವರ್, ಶ್ರೀನಿವಾಸ್ ಪ್ರಸಾದ್ ಸೇರಿ ಘಟಾನುಘಟಿ ದಲಿತ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸಿದರು ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಬಿ.ಶ್ರೀರಾಮುಲು ಹರಿಹಾಯ್ದರು. ಕಾಂಗ್ರೆಸ್ಸಿನಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕಿಲ್ಲ ಸಿಗುವುದೂ ಇಲ್ಲ. ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ವೇಳೆ ಕಾಡುಗೊಲ್ಲ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ. ರಾಹುಲ್ ಗಾಂಧಿ ಭೇಟಿ ಮಾಡಿ, ಸಂವಾದಕ್ಕೆ ಮುಂದಾಗಿದ್ದ ಕಾಡುಗೊಲ್ಲರಿಗೆ ತಡೆಯೊಡ್ಡಲಾಗಿದೆ. ಕಾಡುಗೊಲ್ಲರು ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಅಡ್ಡಿಪಡಿಸಲಾಗಿದೆ. ಇದು ಕಾಂಗ್ರೆಸ್ಸಿನ ಹಿಂದುಳಿದ ವರ್ಗಗಳ ವಿರೋಧಿತನಕ್ಕೆ ಸಾಕ್ಷಿಯಾಗಿದೆ ಎಂದರು.

SC, ST ಮೀಸಲಾತಿ ಹೆಚ್ಚಳ ಸಂಬಂಧ ಕ್ರೆಡಿಟ್​ ವಾರ್​ ವಿಚಾರ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಯಾರ ಅವಧಿಯಲ್ಲಿ ಸಮಿತಿ ರಚನೆ ಆಗಿದೆ ಎಂಬುದು ಮುಖ್ಯವಲ್ಲ. ಆದರೆ ಮೀಸಲಾತಿ ಹೆಚ್ಚಳ ಅನುಷ್ಠಾನಕ್ಕೆ ತಂದಿರುವುದು ಬಿಜೆಪಿ. ಜೆಡಿಎಸ್-ಕಾಂಗ್ರೆಸ್​​ಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ. ಹೀಗಾಗಿ ಅವರು ಮೀಸಲಾತಿ ಹೆಚ್ಚಳ ಅನುಷ್ಠಾನಕ್ಕೆ ತಂದಿರಲಿಲ್ಲ. ನಮಗೆ ಇಚ್ಛಾಶಕ್ತಿ ಇರುವುದರಿಂದ ಅನುಷ್ಠಾನಕ್ಕೆ ತಂದಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಇಚ್ಛಾಶಕ್ತಿಯಿಂದ ಮೀಸಲಾತಿ ಹೆಚ್ಚಳ ಅನುಷ್ಠಾನಗೊಂಡಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:38 pm, Thu, 27 October 22