ಮೈಸೂರು: ಸೋಲಾರ್ ತಂತಿ ಬೇಲಿಗೆ ಸಿಲುಕಿ ಕಾಡಾನೆ ಸಾವು

| Updated By: preethi shettigar

Updated on: Sep 14, 2021 | 8:26 AM

ಸೋಲಾರ್ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಇರುವ ಆರೋಪ ಕೇಳಿ ಬಂದಿದ್ದು, ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರು: ಸೋಲಾರ್ ತಂತಿ ಬೇಲಿಗೆ ಸಿಲುಕಿ ಕಾಡಾನೆ ಸಾವು
ಸೋಲಾರ್ ತಂತಿಗೆ ಸಿಲುಕಿ ಕಾಡಾನೆ ಸಾವು
Follow us on

ಮೈಸೂರು: ಸೋಲಾರ್ ತಂತಿಗೆ ಸಿಲುಕಿ ಕಾಡಾನೆ ಸಾವಿಗೀಡಾದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡ ಹೊಸೂರು ಗ್ರಾಮದ ಕಾಫಿ ತೋಟದಲ್ಲಿ ನಡೆದಿದೆ. ಸುಮಾರು 30 ವರ್ಷದ ಗಂಡು ಆನೆ ಸಾವನ್ನಪ್ಪಿದೆ. ಸರ್ವೇ ನಂ 61 ರ ಜೈಸನ್ ಅವರ ಕಾಫಿ ತೋಟದಲ್ಲಿ ಈ ಅವಗಢ ಸಂಭವಿಸಿದೆ.

ಸೋಲಾರ್ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಇರುವ ಆರೋಪ ಕೇಳಿ ಬಂದಿದ್ದು, ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಮೊದಲು ಕೂಡ ಕಾಡಾನೆಗಳು ನಾಡಿನತ್ತ ಆಹಾರ ಅರಸಿ ಬಂದು ಸಾವಿಗೀಡಾದ ಅನೇಕ ಉದಾಹರಣೆಗಳಿದೆ.

ಚಿಕ್ಕಮಗಳೂರು: ಜಮೀನಿಗೆ ಹಾಕಿದ್ದ ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು
ಜಮೀನಿಗೆ ಹಾಕಿದ್ದ ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಗಾಳಿ ಪೂಜೆ ಗ್ರಾಮದಲ್ಲಿ ನಡೆದಿದೆ. ಸುಮಾರು 25 ವರ್ಷದ ಒಂಟಿ ಸಲಗ ಸಾವನ್ನಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಜಮೀನಿನ ಮಾಲೀಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಕೊಡಗು ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಮರಿಯಾನೆ ಸಾವು
ನಾಗರಹೊಳೆ ಉದ್ಯಾನವನ ವ್ಯಾಪ್ತಿಯಲ್ಲಿ ಘಟನೆ ಹುಲಿ ದಾಳಿಗೆ ಒಂದು ತಿಂಗಳ ಮರಿಯಾನೆ ಸಾವಿಗೀಡಾಗಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಕಾಡಾನೆಗಳು ಮೃತಪಟ್ಟಿವೆ. ಕೊಡಗು-ಮೈಸೂರು ಗಡಿಯ ನಾಗರಹೊಳೆ ವ್ಯಾಪ್ತಿಯಲ್ಲಿ (Nagarahole National Park ) ದಕ್ಷಿಣ ಕೊಡಗು ಭಾಗದಲ್ಲಿ ನಿಟ್ಟೂರು ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಹುಲಿ ದಾಳಿಗೆ ಒಂದು ತಿಂಗಳ ಮರಿಯಾನೆ (elephant calf) ಸಾವನ್ನಪ್ಪಿದೆ.

ಎಎಸ್​ಎಫ್ ಗೋಪಾಲ್​ ಮತ್ತು ಇತರೆ ಅರಣ್ಯ ಸಿಬ್ಬಂದಿಯು ಮರಿಯಾನೆ ದೇಹ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿ ದಾಳಿಯಿಂದಲೇ ಒಂದು ತಿಂಗಳ ಮರಿಯಾನೆ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.

 ಕಾಡಾನೆಗಳ ಕಾದಾಟದಲ್ಲಿ 14 ವರ್ಷದ ಗಂಡಾನೆ ಸಾವು
ಪೊನ್ನಂಪೇಟೆ ತಾಲ್ಲೂಕಿನ ಪೂಜೆಕಲ್ಲು ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಲ್ಲಿ ಕಾಡಾನೆಗಳ ಕಾದಾಟದಲ್ಲಿ 14 ವರ್ಷದ ಗಂಡಾನೆ (male wild elephant) ಅಸುನೀಗಿದೆ ಎನ್ನಲಾಗಿದೆ. ಎರಡೂ ಸ್ಥಳಗಳಿಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.  ಪೂಜೆಕಲ್ಲು ವ್ಯಾಪ್ತಿಯಲ್ಲಿ ಕಲ್ಪನಾ ಎಂಬುವವರ ಖಾಸಗಿ ಎಸ್ಟೇಟ್​ಗೆ ಸಮೀಪ 14 ವರ್ಷದ ಗಂಡಾನೆ ಮೃತದೇಹ ಪತ್ತೆಯಾಗಿದೆ.

ಶ್ರೀಮಂಗಲ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪಶು ವೈದ್ಯಾಧಿಕಾರಿ ಮುಜೀಬ್ ಗಂಡಾನೆಯ ಶವಪರೀಕ್ಷೆ ನಡೆಸಿದ್ದಾರೆ. ಶವಪರೀಕ್ಷೆ ವರದಿ ಬಂದ ಮೇಲೆ ಗಂಡಾನೆಯ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು  ಶ್ರೀಮಂಗಲ ಆರ್​ಎಫ್​ಒ (Srimangala RFO) ವೀರೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ:
ಮರದಲ್ಲಿದ್ದ ಸೊಪ್ಪು ಕೀಳಲು ಸೊಂಡಿಲು ಚಾಚಿದಾಗ.. ವಿದ್ಯುತ್ ತಂತಿ ತಗುಲಿ ಹೆಣ್ಣಾನೆ ಸಾವು

ಜಮೀನಿಗೆ ಹಾಕಿದ್ದ ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು: ಮಾಲೀಕನನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ

ಕೊಡಗು ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಮರಿಯಾನೆ ಸಾವು; ಮತ್ತೊಂದೆಡೆ ಕಾಡಾನೆ ಸಾವು

Published On - 8:18 am, Tue, 14 September 21