ಡಾ. ರಾಜಕುಮಾರ್ ಪ್ರತಿಮೆ ವಿವಾದ; ಹ್ಯಾರಿಸ್ ಮನೆ ಮುಂದೆ ಅಭಿಮಾನಿಗಳ ಪ್ರತಿಭಟನೆ

ಡಾ. ರಾಜಕುಮಾರ್ ಪ್ರತಿಮೆ ವಿವಾದ; ಹ್ಯಾರಿಸ್ ಮನೆ ಮುಂದೆ ಅಭಿಮಾನಿಗಳ ಪ್ರತಿಭಟನೆ
ಕಾಂಗ್ರೆಸ್​ ಶಾಸಕ ಎನ್​.ಎ ಹ್ಯಾರಿಸ್

ಡಾ. ರಾಜಕುಮಾರ್ ಪ್ರತಿಮೆ ವಿವಾದಕ್ಕೆ ಸಂಬಂಧಿಸಿದಂತೆ, ಹ್ಯಾರಿಸ್ ಮನೆ ಮುಂದೆ ಅಭಿಮಾನಿಗಳ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

shruti hegde

|

Feb 18, 2021 | 2:59 PM

ಬೆಂಗಳೂರು: ವರನಟ ಡಾ. ರಾಜ​ಕುಮಾರ್​ ಪ್ರತಿಮೆ ವೀಕ್ಷಣೆ ಸಂದರ್ಭದಲ್ಲಿ ಶಾಂತಿನಗರ ಕಾಂಗ್ರೆಸ್​ ಶಾಸಕ ಎನ್​.ಎ. ಹ್ಯಾರಿಸ್​ ವಿವಾದಾತ್ಮಕವಾಗಿ ಮಾತನಾಡಿರುವ ವಿಡಿಯೋ ಈಗಾಗಲೇ ಎಲ್ಲೆಡೆ ವೈರಲ್​ ಆಗಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡುತ್ತಾ ‘ಯಾರೋ ವಿಡಿಯೋ ಎಡಿಟ್ ಮಾಡಿದ್ದಾರೆ. ಆದರೂ ನಾನು ಇದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದ್ದರು. ಈ ಕುರಿತಂತೆ ಹ್ಯಾರಿಸ್ ಕ್ಷಮೆ ಯಾಚಿಸಲೇ ಬೇಕು ಎಂದು ಡಾ.ರಾಜಕುಮಾರ್ ಅಭಿಮಾನಿಗಳು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗರುಡಾ ಮಾಲ್ ಬಳಿ ಅಭಿಮಾನಿಗಳೆಲ್ಲ ಜಮಾಯಿಸಿದ್ದರು. ಹ್ಯಾರಿಸ್ ಮನೆ ಮುಂದೆ ಪ್ರತಿಭಟನೆ ನಡೆಸಲು ಅಭಿಮಾನಿಗಳು ಸಜ್ಜಾಗಿದ್ದರು. ಹ್ಯಾರಿಸ್ ಕ್ಷಮೆ ಕೇಳಲೇಬೇಕು, ಅಣ್ಣಾವ್ರ ಅಭಿಮಾನಿಗಳು ಎಂದೆಂದೂ ಸತ್ತಿಲ್ಲ, ಅಣ್ಣಾವ್ರ ಅಭಿಮಾನಿಗಳನ್ನ ಕೆಣಕಿದರೆ ಕ್ರಾಂತಿ – ಕ್ಷಮೆ ಕೇಳಿದರೆ ಶಾಂತಿ ಎಂದು ಘೋಷಣೆ ಕೂಗುತ್ತಾ ಅಭಿಮಾನಿಗಳೆಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಕ್ಷಮೆಯಲ್ಲಿ ಹ್ಯಾರಿಸ್​ ಹೇಳಿದ್ದೇನು? ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಕ್ಷಮೆ ಇರಲಿ. ಅಣ್ಣಾವ್ರನ್ನ ತುಂಬಾ ಹತ್ತಿರದಿಂದ ನೋಡಿದ್ದೇನೆ. ಅಣ್ಣಾವ್ರ ಬಗ್ಗೆ ನಾನು ಮಾತಾಡಿಲ್ಲ ಎಂದು ಕಾಂಗ್ರೆಸ್​ ಶಾಸಕ ಎನ್​.ಎ. ಹ್ಯಾರಿಸ್ ಪ್ರತಿಭಟನಾ ನಿರತ ಡಾ.ರಾಜಕುಮಾರ್ ಅಭಿಮಾನಿಗಳಿಗೆ ಕ್ಷಮೆ ಯಾಚಿಸಿದ್ದರು. ನಾನು ಯಾವುದೇ ದುರುದ್ದೇಶದಿಂದ ಮಾತನಾಡಿಲ್ಲ. ನನ್ನ ಹೇಳಿಕೆ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಕ್ಷಮೆ ಇರಲಿ. ಅಣ್ಣಾವ್ರನ್ನ ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅಣ್ಣಾವ್ರ ಪ್ರತಿಮೆ ಇಡುವ ಬಗ್ಗೆ ನನ್ನ ಬೆಂಬಲವೂ ಇದೆ. ಕನ್ನಡನಾಡಿನಲ್ಲಿ ನಾನು ಇದ್ದೇನೆ ಕನ್ನಡಕ್ಕಾಗಿ ಸದಾ ಸೇವೆ ಸಲ್ಲಿಸುತ್ತೇನೆ. ನಾನೂ ಕೂಡಾ ಅಣ್ಣಾವ್ರ ದೊಡ್ಡ ಅಭಿಮಾನಿ. ಸಂಘದಲ್ಲಿ ಅವಕಾಶ ಕೊಟ್ಟರೆ ಪದಾಧಿಕಾರಿ ಆಗ್ತೀನಿ. ಎಲ್ಲರೆದುರು ಬಹಿರಂಗವಾಗಿ ಸೋಷಿಯಲ್​ ಮೀಡಿಯಾದಲ್ಲಿ ನಾನು ಕ್ಷಮೆ ಕೇಳಿದ್ದೀನಿ. ನಿಮಗೂ ಹೇಳ್ತಿದಿನಿ ಕ್ಷಮೆ ಇರಲಿ ಎಂದು ಮನವಿ ಮಾಡಿದ್ದರು.

ಎನ್​.ಎ. ಹ್ಯಾರಿಸ್ ಹೇಳಿಕೆಗೆ ರಾಜ್ ಅಭಿಮಾನಿಗಳ ಆಕ್ರೋಶ ವ್ಯಕ್ತವಾಗಲು ಕಾರಣ? ಡಾ. ರಾಜ​​ಕುಮಾರ್​ ಪ್ರತಿಮೆ ನೋಡಲು ಹ್ಯಾರಿಸ್ ಹೋಗಿದ್ದರು. ಈ ವೇಳೆ ಮಾತನಾಡಿದ್ದ ಹ್ಯಾರಿಸ್, ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ. ಅದರಲ್ಲಿ ಆಫೀಸ್ ಬೇರೆ ಮಾಡಿಕೊಡುವುದಕ್ಕೆ ಆಗುತ್ತಾ? ಈ ಪ್ರತಿಮೆಗೆ ಕವರ್​ ಏನು ಬೇಕಾಗುವುದಿಲ್ಲ. ಓಪನ್ ಆಗಿ ಇಡಿ. ಸ್ಟ್ಯಾಚ್ಯುಗೆಲ್ಲಾ ಕವರ್ ಯಾಕ್ ಬೇಕು? ಪ್ರೊಟೆಕ್ಷನ್ ಬೇಕಿದ್ದರೆ ಮನೆಯಲ್ಲೇ ಇಟ್ಟಿದ್ದರೆ ಆಗಿರುತ್ತಿತ್ತು. ರೋಡಲ್ಲಿ ಯಾಕೆ ಇಡುತ್ತಾರೆ? ಬುದ್ಧಿ ಇಲ್ಲ, ಏನ್ ಮಾಡೋದು? ಏನಾದರೂ ಹೇಳಿದರೆ ಅದನ್ನು ಬೇರೆ ರೀತಿಯಲ್ಲೇ ತೆಗೆದುಕೊಳ್ಳುತ್ತಾರೆ ಎಂದಿದ್ದರು.

ಇದನ್ನೂ ಓದಿ: ಡಾ. ರಾಜಕುಮಾರ್ ಪ್ರತಿಮೆ ವಿವಾದ: ಕ್ಷಮೆ ಕೇಳಿದ ಶಾಸಕ ಎನ್.ಎ. ಹ್ಯಾರಿಸ್

Follow us on

Related Stories

Most Read Stories

Click on your DTH Provider to Add TV9 Kannada