ಕೊರೊನಾದಿಂದ ಆಗುತ್ತಿರುವ ಅನಾಹುತಗಳು ಒಂದೆರಡಲ್ಲ. ಅದರಲ್ಲೂ ಈಗಿದ್ದ ಜೀವವನ್ನು ಇನ್ನೊಂದು ಕ್ಷಣದಲ್ಲಿ ಈ ಸೋಂಕು ಬಲಿಪಡಿಯುತ್ತಿದೆ. ಜನಜೀವನವನ್ನೇ ಅಸ್ವಸ್ಥಗೊಳಿಸಿದೆ. ಇದೀಗ ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ನಾಲ್ವರು ಆಪ್ತರು ಕೊರೊನಾದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಅವರೇ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ನಮ್ಮ ತಲೆಮಾರು ಇಂಥ ಕರಾಳದಿನಗಳಿಗೆ ಸಾಕ್ಷಿಯಾಗುತ್ತದೆ ಎಂದು ಎಣಿಸಿರಲಿಲ್ಲ. ಶತಾಯಗತಾಯ ಹೋರಾಟ ಮಾಡಿ ಆಸ್ಪತ್ರೆಯಲ್ಲಿ ಹಾಸಿಗೆ ಪಡೆದುಕೊಂಡಾಯಿತು. ಆದರೆ ಅಲ್ಲಿಗೆ ಹೋಗಿ ದಾಖಲಾಗುವ ಮೊದಲೇ ನಾಲ್ವರು ಪ್ರಾಣ ಕಳೆದುಕೊಂಡರು. ಇನ್ನು ಕ್ಷೇಮವೆಂದು ನಂಬಿದ್ದ ನನ್ನ ಹಳ್ಳಿಯಲ್ಲೂ ಸಾಲುಸಾಲಾಗಿ ಹೆಣಗಳು ಬೀಳುತ್ತಿವೆ. ಎಲ್ಲರೂ ಅಸಹಾಯಕರಂತೆ ಕಾಣುತ್ತಿದ್ದೇವೆ ಎಂದು ನೋವಿನ ನುಡಿಗಳನ್ನು ಟ್ವೀಟ್ ಮಾಡಿದ್ದಾರೆ.
ಕೊರೊನಾ ಎರಡನೇ ಅಲೆ ತುಂಬ ಮಾರಣಾಂತಿಕವಾಗಿ ಪರಿಣಮಿಸಿದೆ. ಸೋಂಕು ಹರಡುವ ಪ್ರಮಾಣ, ಈ ವೈರಸ್ನಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಸಹ ಈ ಬಾರಿ ಹಲವರು ಕೊರೊನಾದಿಂದ ಪ್ರಾಣಕಳೆದುಕೊಂಡಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಎದುರಾಗಿದೆ. ಅದೆಷ್ಟೋ ಜನ ಹೋಂ ಐಸೋಲೇಶನ್ನಲ್ಲೇ ಇದ್ದು ಗುಣಮುಖರಾಗುತ್ತಿದ್ದಾರೆ. ಇನ್ನೊಂದಷ್ಟು ಮಂದಿ ಕೊನೇ ಕ್ಷಣದಲ್ಲಿ ಆಸ್ಪತ್ರೆ ಸೇರಲು ಹೋಗಿ ಬೆಡ್ ಸಿಗದೆ ಉಸಿರು ಚೆಲ್ಲುತ್ತಿದ್ದಾರೆ. ಒಟ್ಟಿನಲ್ಲಿ ಈ ಸೋಂಕಿನ ಎದುರು ಮನುಷ್ಯ ಅಸಹಾಯಕನಾಗಿದ್ದಾನೆ.
ನಮ್ಮ ತಲೆಮಾರು ಇಂಥ ಕರಾಳ ದಿನಗಳಿಗೆ ಸಾಕ್ಷಿಯಾದೀತು ಎಂದು ಯಾರೂ ಎಣಿಸಿರಲಿಲ್ಲ. ಶತಾಯ ಗತಾಯ ಹೋರಾಡಿ ಹಾಸಿಗೆ ಪಡೆದುಕೊಂಡರೆ ದಾಖಲಾಗುವ ಮೊದಲೇ ನಾಲ್ವರು ಮಾರ್ಗ ಮಧ್ಯದಲ್ಲಿ ಮೃತ್ಯುಮಂಚವೇರಿದ್ದಾರೆ. ಕ್ಷೇಮವೆಂದು ನಂಬಿದ್ದ ನನ್ನ ಹಳ್ಳಿಯಲ್ಲೂ ಸಾಲುಸಾಲಾಗಿ ಹೆಣಬೀಳುತ್ತಿವೆ. ಎಲ್ಲರೂ ಅಸಹಾಯಕರಂತೆ ಕಾಣುತ್ತಿದ್ದೇವೆ.
— Nagathihalli Chandrashekhar (@NomadChandru) May 10, 2021
ಇದನ್ನೂ ಓದಿ: ‘ಮಾತುಕತೆಗೆ ನಾವು ಬರೋದಿಲ್ಲ..’-ಮತ್ತೆ ಜಮ್ಮುಕಾಶ್ಮೀರದ ಬಗ್ಗೆ ಅಲವತ್ತುಕೊಂಡ ಪಾಕಿಸ್ತಾನ ಪ್ರಧಾನಿ
(Nagathihalli Chandrashekhar Unleashing the horror of the corona virus)