ಕೋಲಾರ: ಶ್ರೀನಿವಾಸಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಗವಂತನ ಇಚ್ಛೆ ಸಿಎಂ ಯಡಿಯೂರಪ್ಪ ಮೇಲೆ ಇರೋದ್ರಿಂದ ಕೊರೊನಾ ನಿಯಂತ್ರಣ ಆಗ್ತಿದೆ ಎಂದಿದ್ದಾರೆ.
ಕೋಲಾರದ ಶ್ರೀನಿವಾಸಪುರದಲ್ಲಿ ಮಾತನಾಡಿದ ನಳಿನ್ ಕುಮಾರ್ ಭಗವಂತನ ಇಚ್ಛೆ ಸಿಎಂ ಮೇಲೆ ಇರೋದ್ರಿಂದ ಕೊರೊನಾ ನಿಯಂತ್ರಣ ಆಗ್ತಿದೆ ಸಿದ್ದರಾಮಣ್ಣ ಮುಖ್ಯಮಂತ್ರಿ ಆಗಿದ್ರೆ ಭಗವಂತನ ಕೈಯಲ್ಲೂ ಉಳಿಸೋಕೆ ಆಗ್ತಿರಲಿಲ್ಲ. ಬೇರೆ ಬೇರೆ ಕಡೆಗೆ ಹೋಗಿ ಇತಿಹಾಸ ಬರೆದವರು ಇವತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ತಿಹಾರ್ ಜೈಲಿನಲ್ಲಿ ಏಕೆ ಕುಳಿತುಕೊಳ್ಳುತ್ತಿದ್ರು. ಕೊರೊನಾ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್ ಸಹಕಾರ ನೀಡುತ್ತಿಲ್ಲ. ನಾವು ವಿರೋಧ ಪಕ್ಷದಲ್ಲಿದ್ದಾಗ ಇಂತಹ ಸಂದರ್ಭ ಬಂದಾಗ ಸಹಕರಿಸಿದ್ದೇವೆ. ಕಿಟ್ನಲ್ಲಿ ಹಗರಣ ಆಗಿದೆ ಅಂತ ಕಾಂಗ್ರೆಸ್ ಬಾಯಿಗೆ ಬಂದಂತ್ತೆ ಮಾತನಾಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.