ಎಫ್ಐಆರ್ ನಲ್ಲಿ ಪೆನ್ ಡ್ರೈವ್ ಹಂಚಿದ ನಾಲ್ವರ ಹೆಸರುಗಳಿವೆ, ಅವರ ವಿರುದ್ಧ ಇದುವರೆಗೆ ಕ್ರಮವಿಲ್ಲ: ಕುಮಾರಸ್ವಾಮಿ
ಪ್ರಕರಣದ ಬಗ್ಗೆ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ ಅವರು, ತಾನು ಯಾರ ರಕ್ಷಣೆಗೂ ಪ್ರಯತ್ನಿಸುತ್ತಿಲ್ಲ, ತಪ್ಪಿತಸ್ಥರು ಯಾರೇ ಆಗಿದ್ದರೂ ನೆಲದ ಕಾನೂನಿನ್ವಯ ಕಠಿಣ ಶಿಕ್ಷೆಯಾಗಬೇಕು, ಈ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಮತ್ತು ಯಾರದೇ ಪರವಾಗಿ ವಕಾಲತ್ ಸಹ ಮಾಡಲ್ಲ ಎಂದು ಹೇಳಿದರು.
ಬೆಂಗಳೂರು: ನಗರದಲ್ಲಿಂದು ತುರ್ತು ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರ (HD Revanna) ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳಿಗೆ (Prajwal Revanna sex tapes) ಸಂಬಂಧಿಸಿದಂತೆ ಹಲವಾರು ಅಂಶಗಳನ್ನು ಚರ್ಚಿಸಿದರು. ಪ್ರಕರಣದ ಬಗ್ಗೆ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ ಅವರು, ತಾನು ಯಾರ ರಕ್ಷಣೆಗೂ ಪ್ರಯತ್ನಿಸುತ್ತಿಲ್ಲ, ತಪ್ಪಿತಸ್ಥರು ಯಾರೇ ಆಗಿದ್ದರೂ ನೆಲದ ಕಾನೂನಿನ್ವಯ ಕಠಿಣ ಶಿಕ್ಷೆಯಾಗಬೇಕು, ಈ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಮತ್ತು ಯಾರದೇ ಪರವಾಗಿ ವಕಾಲತ್ ಸಹ ಮಾಡಲ್ಲ ಎಂದು ಹೇಳಿದರು. ಜೆಡಿಎಸ್ ಪಕ್ಷದ ಪೊಲೀಂಗ್ ಏಜೆಂಟೊಬ್ಬರು ಪೆನ್ ಡ್ರೈವ್ ಗಳನ್ನು ಸಾರ್ವಜನಿಕಗೊಳಿದ್ದರ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಫ್ಐಆರ್ ನಲ್ಲಿ ನಾಲ್ವರ ಹೆಸರಿದೆ-ನವೀನ್ ಗೌಡ, ಕಾರ್ತೀಕ್ ಗೌಡ, ಚೇತನ್ ಮತ್ತು ಪುಟ್ಟಿ ಅಲಿಯಾಸ್ ಪುಟ್ಟರಾಜು. ಇವರ ವಿರುದ್ಧ ದೂರು ದಾಖಲಾಗಿ 15 ದಿನ ಕಳೆದರೂ ಅವರ ಬಂಧನದ ಮಾತು ಹಾಗಿರಲಿ, ಕರೆಸಿ ವಿಚಾರಣೆಯನ್ನೂ ಎಸ್ಐಟಿ ಅಧಿಕಾರಿಗಳು ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಇವರಲ್ಲಿ ನವೀನ್ ಗೌಡ ಎನ್ನುವವನು, ಪೆನ್ ಡ್ರೈವ್ ಬಿತ್ತರಗೊಳ್ಳುವ ಮೊದಲು ಕ್ಷಣಗಣನೆ ಮಾಡುತ್ತಿದ್ದನಂತೆ ಎಂದ ಕುಮಾರಸ್ವಾಮಿ ಪೇಪರ್ ನಲ್ಲಿನ ಅಂಶವೊಂದನ್ನು ಉಲ್ಲೇಖಿಸಿ ಒಟ್ಟು 25,000 ವಿಡಿಯೋ ಹಂಚಲಾಗಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣಲ್ಲಿ ದೇವೇಗೌಡ ಮತ್ತು ನನ್ನ ವಿರುದ್ಧ ಯಾಕೆ ಮೀಡಿಯ ಟ್ರಯಲ್? ಹೆಚ್ ಡಿ ಕುಮಾರಸ್ವಾಮಿ