ಸುಸೈಡ್ ಹಾಟ್ ಸ್ಪಾಟ್ ಆಗುತ್ತಿದೆಯೇ ನಮ್ಮ ಮೆಟ್ರೋ ಸ್ಟೇಷನ್​ಗಳು; ಪಿಎಸ್ಡಿ ಡೋರ್ ಅಳವಡಿಸಲು ಹೆಚ್ಚಾಯ್ತು ಪ್ರಯಾಣಿಕರಿಂದ ಒತ್ತಡ!

ಬೆಂಗಳೂರಿನ ನಮ್ಮ ಮೆಟ್ರೋ ಸ್ಟೇಷನ್​ಗಳಲ್ಲಿ ಆತ್ಮಹತ್ಯೆಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಶನಿವಾರ ಮೆಟ್ರೋ ಟ್ರ್ಯಾಕಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ವಿರೇಶ್ ಎಂಬ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಮುಂದಾಗಿದ್ದು, ಮೆಟ್ರೋ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ. ಪಿಎಸ್ಡಿ ಡೋರ್ ಅಳವಡಿಸಲು ಹೆಚ್ಚಾಯ್ತು ಪ್ರಯಾಣಿರು ಒತ್ತಾಯಿಸುತ್ತಿದ್ದಾರೆ.

ಸುಸೈಡ್ ಹಾಟ್ ಸ್ಪಾಟ್ ಆಗುತ್ತಿದೆಯೇ ನಮ್ಮ ಮೆಟ್ರೋ ಸ್ಟೇಷನ್​ಗಳು; ಪಿಎಸ್ಡಿ ಡೋರ್ ಅಳವಡಿಸಲು ಹೆಚ್ಚಾಯ್ತು ಪ್ರಯಾಣಿಕರಿಂದ ಒತ್ತಡ!
ಬೆಂಗಳೂರಿನ ಮೆಟ್ರೋ ಸ್ಟೇಷನ್​ಗಳಲ್ಲಿ ಹೆಚ್ಚುತ್ತಿವೆ ಆತ್ಮಹತ್ಯೆ ಪ್ರಕರಣಗಳು
Updated By: ಭಾವನಾ ಹೆಗಡೆ

Updated on: Oct 06, 2025 | 8:54 AM

ಬೆಂಗಳೂರು, ಅಕ್ಟೋಬರ್ 6:  ನಮ್ಮ ಮೆಟ್ರೋ (Namma metro) ಟ್ರ್ಯಾಕ್​ಗೆ ಹಾರಿ ಸುಸೈಡ್ ಮಾಡಿಕೊಳ್ಳಲು ಮುಂದಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಶನಿವಾರ ಮೆಟ್ರೋ ಟ್ರ್ಯಾಕಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ವಿರೇಶ್ ಎಂಬ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಮುಂದಾಗಿದ್ದು, ಮೆಟ್ರೋ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ.

ಟ್ರೇನ್ ಟ್ರ್ಯಾಕ್​ಗೆ ಹಾರಿದ್ದ ವ್ಯಕ್ತಿ ಬಚಾವ್

ಮಧ್ಯಾಹ್ನ 03-17 ಕ್ಕೆ ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್ ಫ್ಲಾಟ್ ಫಾರಂ- 3 ರಲ್ಲಿ ಹಸಿರು ಮಾರ್ಗದ ಸಿಲ್ಕ್ ಇನ್ಸ್ಟಿಟ್ಯೂಟ್ ನಿಂದ ಮಾದವಾರಕ್ಕೆ ಹೊರಟ್ಟಿದ್ದ ರೈಲು ಬರುವ ವೇಳೆ ವಿಧಾನಸೌಧದಲ್ಲಿ ಡಿ ಗ್ರೂಪ್ ನಲ್ಲಿ ನೌಕರನಾಗಿದ್ದ ವೀರೇಶ್ ( 40 ) ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಟ್ರ್ಯಾಕಿಗೆ ಹಾರಿದ್ದ. ನಂತರ ಮೆಟ್ರೋ ಸಿಬ್ಬಂದಿಗಳು ಆತನನ್ನು ರಕ್ಷಣೆ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. 2024-25 ರಲ್ಲಿ 10 ಕ್ಕೂ ಹೆಚ್ಚು ಜನರು ನಮ್ಮ ಮೆಟ್ರೋ ಟ್ರ್ಯಾಕ್​ಗೆ ಜಿಗಿದಿರುವ ಪ್ರಕರಣ ಬೆಳಕಿಗೆ ಬಂದಿದೆ. ಪದೇ ಪದೇ ಮೆಟ್ರೋ ಟ್ರ್ಯಾಕ್​ಗೆ ಜಿಗಿಯುತ್ತಿರುವ ಪ್ರಯಾಣಿಕರು. ಗಂಟೆಗಟ್ಟಲೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

ಕಳೆದ ವರ್ಷ ಮತ್ತು ಈ ವರ್ಷ ಮೆಟ್ರೋ ಟ್ರ್ಯಾಕಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದವರು

1. ದಿನಾಂಕ: 1 ಜನವರಿ 2024
ಸ್ಥಳ: ಇಂದಿರಾ ನಗರ ಮೆಟ್ರೋ ನಿಲ್ದಾಣ
ಮಹಿಳೆಯೊಬ್ಬರು ಮೊಬೈಲ್ ತೆಗೆಯಲು ಟ್ರ್ಯಾಕ್​ಗೆ ಇಳಿದಿದ್ದರು. ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದಾರೆ. ಬಳಿಕ ಮಹಿಳೆಯನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ ಪೀಕ್ ಅವರ್ ನಲ್ಲಿ 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು.

2. ದಿನಾಂಕ: 5 ಜನವರಿ 2024
ಸ್ಥಳ: ಜಾಲಹಳ್ಳಿ ಮೆಟ್ರೋ ನಿಲ್ದಾಣ
23 ವರ್ಷದ ಶ್ಯಾರೊನ್ ಎನ್ನುವ ಕೇರಳ ಮೂಲದ ಯುವಕ ಆತ್ಮಹತ್ಯೆಗೆ ಆತ್ಮಹತ್ಯೆಗೆ ಯತ್ನಿಸಿದ್ದ. ಸ್ನೇಹಿತನ ಜೊತೆ ಜಾಲಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಶ್ಯಾರೊನ್ ಮೆಜೆಸ್ಟಿಕ್ಗೆ ಹೋಗಲು ಟಿಕೆಟ್ ಸಹ ಪಡೆದುಕೊಂಡಿದ್ದ. ಮೆಟ್ರೊ ಟ್ರೈನ್ ಬಂದಾಗ ಏಕಾಏಕಿ ಹಳಿಗೆ ಶ್ಯಾರೊನ್ ಧುಮುಕಿದ್ದು,ಈ ವೇಳೆ ಮೆಟ್ರೋ ಟ್ರೈನ್ ಡಿಕ್ಕಿ ಹೊಡೆದಿದ್ದು ಅವತ್ತು ಹಸಿರು ಮಾರ್ಗದಲ್ಲಿ ಕೆಲಕಾಲ ಸಂಚಾರ ಸ್ಥಗಿತವಾಗಿತ್ತು.

3. ದಿನಾಂಕ: 6 ಜನವರಿ 2024
ಸ್ಥಳ: ಜೆ.ಪಿ.ನಗರ ಮೆಟ್ರೋ ನಿಲ್ದಾಣ
ಮೆಟ್ರೋ ಟ್ರ್ಯಾಕ್ ಮೇಲೆ ಬೆಕ್ಕು ಕಾಣಿಸಿಕೊಂಡಿತ್ತು. ಕೂಡಲೇ ಪ್ರಯಾಣಿಕರು ಸಿಬ್ಬಂದಿ ಗಮನಕ್ಕೆ ತಂದರು. ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಟ್ರ್ಯಾಕ್ನಲ್ಲಿದ್ದ ಬೆಕ್ಕನ್ನು ಓಡಿಸಲು ಸಿಬ್ಬಂದಿ ಮುಂದಾದರು. ಮೆಟ್ರೋ ಸಿಬ್ಬಂದಿ ನಡೆಗೆ ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

4. ದಿನಾಂಕ : 12 ಮಾರ್ಚ್ 2024
ಸ್ಥಳ :- ಜ್ಞಾನ ಭಾರತಿ ಮೆಟ್ರೋ ನಿಲ್ದಾಣ
ಜ್ಞಾನಭಾರತಿ ಮೆಟ್ರೋ ಸ್ಟೇಷನ್ ನಿಂದ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ನಡುವಿನ ವಯಾಡಕ್ಟ್ ನಲ್ಲಿ ಅಪರಿಚಿತ ವ್ಯಕ್ತಿ ಕಾಣಿಸಿಕೊಂಡಿದ್ದ. ಹಲವು ಮೆಟ್ರೋ ರೈಲುಗಳ ಸಂಚಾರವನ್ನೇ ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸಾವಿರಾರು ಜನ ಪರದಾಡಿದ ಘಟನೆ ನಡೆದಿತ್ತು.

5. ದಿನಾಂಕ:- 21 ಮಾರ್ಚ್ 2024

ಸ್ಥಳ :- ಅತ್ತಿಗುಪ್ಪೆ
ಮೆಟ್ರೋ ಹಳಿ ಮೇಲೆ ಬಿದ್ದು ಧ್ರುವ್ ಟಕ್ಕರ್ ಎನ್ನುವ 19 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ. ಈತ ನ್ಯಾಷನಲ್ ಲಾ ಕಾಲೇಜಿನಲ್ಲಿ ಮೊದಲನೇ ವರ್ಷ ವ್ಯಾಸಂಗ ಮಾಡ್ತಿದ್ದ ಎಂದು ತಿಳಿದುಬಂದಿದೆ.

6. ದಿನಾಂಕ:- 3 ಆಗಸ್ಟ್ 2024

ಸ್ಥಳ :- ದೊಡ್ಡಕಲ್ಲಸಂದ್ರ
ಹಸಿರು ‌ಮಾರ್ಗದ ನಾಗಸಂದ್ರ ಟು ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ಹಳಿ ಮೇಲೆ ಬಿದ್ದು 35 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ರೈಲು ಬರುತ್ತಿರುವುದನ್ನು ತಿಳಿದು ಹಳಿಗೆ ಹಾರಿ ಪ್ರಾಣ ಬಿಟ್ಟಿದ್ದ.

7. ದಿನಾಂಕ:- 17 ಸಪ್ಟೆಂಬರ್ 2024
ಸ್ಥಳ :- ಜ್ಞಾನಭಾರತಿ ಮೆಟ್ರೋ ಸ್ಟೇಷನ್

ನೇರಳೆ ಮಾರ್ಗದ ವೈಟ್ ಫೀಲ್ಡ್ ಟು ಚೆಲ್ಲಘಟ್ಟ ಮಾರ್ಗದಲ್ಲಿ ಬಿಹಾರ ಮೂಲದ ಯುವಕನೊಬ್ಬ ಹಳಿಗೆ ಜಿಗಿದಿದ್ದ. ಮೆಟ್ರೋ ಸೆಕ್ಯುರಿಟಿ ‌ಗಾರ್ಡ್ ರಶ್ಮಿ ಇಪಿಎಸ್ ( ಎಮರ್ಜೆನ್ಸಿ ಸ್ಟಾಪ್ ಪ್ಲಂಗರ್ ) ಬಟನ್ ಆಫ್ ಮಾಡಿ ಸಿದ್ದಾರ್ಥ ಜೈನ್ ಪ್ರಾಣ ಉಳಿಸಿದ್ದರು.

8. ದಿನಾಂಕ:- 20 ಜನವರಿ 2025
ಸ್ಥಳ ಜಾಲಹಳ್ಳಿ ಮೆಟ್ರೋ ನಿಲ್ದಾಣ

ಹಸಿರು ಮಾರ್ಗದ ಜಾಲಹಳ್ಳಿ ಮೆಟ್ರೋ ಸ್ಟೇಷನ್ ನಲ್ಲಿ ಟ್ರೈನ್ ಬರುತ್ತಿದ್ದಂತೆ ಟ್ರ್ಯಾಕ್​ಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ವ್ಯಕ್ತಿಯೋರ್ವ ಯತ್ನಿಸಿದ್ದ.ಎರಡು ಟ್ರ್ಯಾಕ್ ಗಳ ಮಧ್ಯೆ ಮಲಗಿದ್ದ 49 ವರ್ಷದ ವ್ಯಕ್ತಿ ಅನಿಲ್ ಕುಮಾರ್ ಪಾಂಡೆ ನಿವೃತ್ತ ವಾಯುಸೇನಾ ಯೋಧ. ಮೆಟ್ರೋ ಸೆಕ್ಯುರಿಟಿ ಗಾರ್ಡ್ ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ ( ಇಟಿಎಸ್ ) ಬಟನ್ ಪ್ರೆಸ್ ಮಾಡಿದ್ದರಿಂದ ವ್ಯಕ್ತಿಯ ಜೀವ ಉಳಿದಿದೆ.

9.ದಿನಾಂಕ:- 11 ಆಗಸ್ಟ್ 2025

ಸೋಮವಾರ ರಂದು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 10.04 ಕ್ಕೆ 29 ಜಯಂತ್ ಎನ್ನುವ ಯುವಕ ರೈಲು ಬರುವ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಕೂಡಲೇ ಮೆಟ್ರೋ ಸಿಬ್ಬಂದಿ ವಿದ್ಯುತ್ ಸರಬರಾಜು ಸ್ಥಗಿತ ಗೊಳಿಸಿ ರಕ್ಷಿಸಿದರು‌. ಹಸಿರು ಮಾರ್ಗದ ರೇಷ್ಮೆ ಸಂಸ್ಥೆ ಕಡೆಗೆ ತೆರಳುವ ಮಾರ್ಗದಲ್ಲಿ ಘಟನೆ ನಡೆದಿದ್ದು, ಅರ್ಧಗಂಟೆ ಮೆಟ್ರೋ ಸಂಚಾರ ಸ್ಥಗಿತ ಗೊಳಿಸಲಾಗಿತ್ತು. 10-30 ರ ನಂತರ ಸಂಚಾರ ಪುನರ್ ಆರಂಭಗೊಂಡಿದೆ.

10. ದಿನಾಂಕ:- 26 ಆಗಸ್ಟ್ 2025

ಮಂಗಳವಾರ ನಮ್ಮ ಮೆಟ್ರೋದ ಹಳದಿ ಮಾರ್ಗದ ರಾಗಿಗುಡ್ಡ ಮೆಟ್ರೋ ಸ್ಟೇಷನ್ ಹಳಿಗೆ 45 ರಮೇಶ್ ಭದ್ರತಾ ಸಿಬ್ಬಂದಿ ಬಿದ್ದಿದ್ದು, ಹಳಿ ಮೇಲೆ ಭದ್ರತಾ ಸಿಬ್ಬಂದಿ ಬೀಳುತ್ತಿರುವುದನ್ನು ಗಮನಿಸಿದ ಮೆಟ್ರೋ ಸೆಕ್ಯುರಿಟಿ ಪವರ್ ಆಫ್ ಮಾಡಿ ಮೇಲಕ್ಕೆ ಎತ್ತಿದ್ದರು. ಆರು ನಿಮಿಷಗಳ ಮೆಟ್ರೋ ಸಂಚಾರ ಸ್ಥಗಿತ ಗೊಳಿಸಲಾಗಿತ್ತು.

ಇದನ್ನೂ ಓದಿ ಆತ್ಮಹತ್ಯೆ ತಾಣ ಆಗುತ್ತಿದೆಯಾ ನಮ್ಮ ಮೆಟ್ರೋ? 9 ತಿಂಗಳಲ್ಲಿ 7ನೇ ಘಟನೆ, ಇಬ್ಬರು ಸಾವು!

11. ದಿನಾಂಕ:- 4 ಅಕ್ಟೋಬರ್2025

ಶನಿವಾರ 03-17 ಕ್ಕೆ ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್ ಫ್ಲಾಟ್ ಫಾರಂ- 3 ರಲ್ಲಿ ಹಸಿರು ಮಾರ್ಗದ ಸಿಲ್ಕ್ ಇನ್ಸ್ಟಿಟ್ಯೂಟ್ ನಿಂದ ಮಾದವಾರಕ್ಕೆ ಹೊರಟ್ಟಿದ್ದ ರೈಲು ಬರುವ ವೇಳೆ ವಿಧಾನಸೌಧದಲ್ಲಿ ಡಿ ಗ್ರೂಪ್ ನಲ್ಲಿ ನೌಕರನಾಗಿದ್ದ ವೀರೇಶ್ ( 40 ) ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಟ್ರ್ಯಾಕಿಗೆ ಹಾರಿದ್ದ. ಆತನನ್ನು ರಕ್ಷಣೆ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

ಈಗಾಗಲೇ ದೆಹಲಿ, ಚೆನ್ನೈ ಮೆಟ್ರೋದಲ್ಲಿ ಪಿಎಸ್ಡಿ ಡೋರ್ ಅಳವಡಿಸಲಾಗಿದೆ. ಆದರೆ ನಮ್ಮ ಮೆಟ್ರೋದಲ್ಲಿ ಮಾತ್ರ ಇನ್ನೂ ಪಿಎಸ್ಡಿ ಅಳವಡಿಸಿಲ್ಲ. ಮೆಟ್ರೋ ಆರಂಭವಾಗಿ ಹದಿಮೂರು ವರ್ಷಗಳು ಕಳೆದಿವೆ ಆದರೂ ಟ್ರ್ಯಾಕ್​ಗೆ ಯಾವುದೇ ಭದ್ರತೆ ಇಲ್ಲ. ನಮ್ಮ ಮೆಟ್ರೋ ಸ್ಟೇಷನ್ ಸುಸೈಡ್ ಹಾಟ್ ಸ್ಪಾಟ್ ಆಗಿದೆಯೇ ಎನ್ನುತ್ತಿದ್ದಾರೆ ಪ್ರಯಾಣಿಕರು. ಕಳೆದ ವರ್ಷದ ಆರಂಭದಿಂದ ಮೆಟ್ರೋ ಜಿಗಿಯುವವರ ಸಂಖ್ಯೆ ಡಬಲ್ ಆಗಿದೆ. ಎಷ್ಟೇ ಜಾಗೃತಿ ವಹಿಸಿದರೂ ಸುಸೈಡ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

 

Published On - 8:52 am, Mon, 6 October 25