1 ಕೋಟಿ ರೂ. ಆರೋಗ್ಯ ವಿಮಾ ಯೋಜನೆ ಪ್ರಾರಂಭಿಸಿದ ನಾರಾಯಣ ಹೆಲ್ತ್ ಸಂಸ್ಥೆ

|

Updated on: Jul 04, 2024 | 9:56 PM

ನಾರಾಯಣ ಹೆಲ್ತ್‌ ಹೊಸ ಅದಿತಿ ಆರೋಗ್ಯ ವಿಮಾ ಯೋಜನೆಯನ್ನು ಜುಲೈ 1ರಿಂದ ಪರಿಚಯಿಸಿದೆ. ವಿಮಾದಾರರಿಗೆ ಚಿಕಿತ್ಸೆಯಲ್ಲಿ ರೂ 5 ಲಕ್ಷ ಮತ್ತು ಶಸ್ತ್ರಚಿಕಿತ್ಸೆಗಳಿಗೆ ರೂ 1 ಕೋಟಿ ವರೆಗೆ ವಿಮೆ ಒಗೊಂಡಿದೆ. ನಾಲ್ಕು ಜನರು ಇರುವ ಕುಟುಂಬಕ್ಕೆ ವರ್ಷಕ್ಕೆ ಹತ್ತು ಸಾವಿರ ಪ್ರೀಮಿಯಂ ಅನ್ನು ನಿಗದಿಪಡಿಸಲಾಗಿದೆ.

1 ಕೋಟಿ ರೂ. ಆರೋಗ್ಯ ವಿಮಾ ಯೋಜನೆ ಪ್ರಾರಂಭಿಸಿದ ನಾರಾಯಣ ಹೆಲ್ತ್ ಸಂಸ್ಥೆ
1 ಕೋಟಿ ರೂ. ಆರೋಗ್ಯ ವಿಮಾ ಯೋಜನೆ ಪ್ರಾರಂಭಿಸಿದ ನಾರಾಯಣ ಹೆಲ್ತ್ ಸಂಸ್ಥೆ
Follow us on

ಬೆಂಗಳೂರು, ಜುಲೈ 04: ಆರೋಗ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಾರಾಯಣ ಹೆಲ್ತ್ (Narayana Health)​​ ಮೊಟ್ಟಮೊದಲ ಬಾರಿಗೆ ಅದಿತಿ (Aditi) ಎಂಬ ಆರೋಗ್ಯ ವಿಮಾ ಯೋಜನೆ ಒಂದನ್ನು ಜುಲೈ 1ರಿಂದ ಪರಿಚಯಿಸಲಾಗಿದೆ. ಆ ಮೂಲಕ 1 ಕೋಟಿ ರೂ. ಮೌಲ್ಯದ ಶಸ್ತ್ರಚಿಕಿತ್ಸೆ ಹಾಗೂ 5 ಲಕ್ಷ ರೂ. ಚಿಕಿತ್ಸಾ ವೆಚ್ಚವನ್ನು ವಿಮೆ ಒಳಗೊಂಡಿದೆ. ಅದಿತಿ ವಿಮಾ ಯೋಜನೆಯಲ್ಲಿ ನಾಲ್ಕು ಜನರು ಇರುವ ಕುಟುಂಬಕ್ಕೆ ವರ್ಷಕ್ಕೆ ಹತ್ತು ಸಾವಿರ ಪ್ರೀಮಿಯಂ ಅನ್ನು ನಿಗದಿಪಡಿಸಲಾಗಿದೆ.

ಈ ಕುರಿತಾಗಿ ನಾರಾಯಣ ಹೆಲ್ತ್ ಅಧ್ಯಕ್ಷ ಡಾ. ದೇವಿ ಶೆಟ್ಟಿ ಮಾತನಾಡಿ, ಭಾರತದಲ್ಲಿ 70 ಮಿಲಿಯನ್ ಶಸ್ತ್ರಚಿಕಿತ್ಸೆಗಳ ಅಗತ್ಯವಿದೆ. ಆದರೆ ಬೆಲ್ವೆದರ್ ಪ್ರಕ್ರಿಯೆಗಳಿಗೆ (ಸಿಸೇರಿಯನ್ ಹೆರಿಗೆ, ಲ್ಯಾಪರೊಟಮಿ ಮತ್ತು ತೆರೆದ ಮೂಳೆ ಮುರಿತ) ಚಿಕಿತ್ಸೆ ಜನರಿಗೆ ಸಾಧ್ಯವಾಗದ ಕಾರಣ ಕೇವಲ 20 ಮಿಲಿಯನ್ ಮಾತ್ರ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಆರ್ಯ ವೈಶ್ಯ ನಿಗಮ ಕ್ರಿಯಾ ಯೋಜನೆಗೆ ಅನುಮೋದನೆ; ಸಣ್ಣ ಉದ್ಯಮಿಗಳು ಸದುಪಯೋಗ ಪಡೆದುಕೊಳ್ಳಿ- ಕೃಷ್ಣ ಬೈರೇಗೌಡ ಮನವಿ

ಮುಂದಿನ ದಿನಗಳಲ್ಲಿ ಭಾರತವು ಕಾರ್ಯತಂತ್ರದ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ಅಭಿಪ್ರಾಯಪಟ್ಟರು. ಗುಣಮಟ್ಟದ ಆರೋಗ್ಯ ಸೇವೆಯು ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ಮಲೇರಿಯಾ, ಟಿಬಿ ಮತ್ತು ಎಚ್‌ಐವಿ ಮಾತ್ರವಲ್ಲದೆ ಶಸ್ತ್ರಚಿಕಿತ್ಸಾ ವಿಧಾನಗಳನ್ನೂ ಸಹ ಬಲಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ ಪೈಲಟ್ ಪ್ರಾಜೆಕ್ಟ್ ಆಗಿ ಪರಿಚಯಿಸಲಾದ ಅದಿತಿ, ಒಂದೆರಡು ವಾರಗಳಲ್ಲಿ ಬೆಂಗಳೂರಿನಲ್ಲೂ ಪ್ರಾರಂಭವಾಗುವ ನಿರೀಕ್ಷೆಯಿದೆ. ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ನೀಡುವ ಆಲೋಚನೆ ಇದೆ. ವಿಮೆಯನ್ನು ಬಯಸುವ ಯಾರಿಗಾದರೂ ಅವರ ವೈದ್ಯಕೀಯ ಪರಿಸ್ಥಿತಿಗಳನ್ನು ಲೆಕ್ಕಿಸದೆ ನಾವು ಇಲ್ಲ ಎಂದು ಹೇಳುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಡೆಂಗ್ಯೂ ಜೊತೆ ಝೀಕಾ ವೈರಸ್ ಬಗ್ಗೆಯೂ ಎಚ್ಚರ ವಹಿಸಿ; ಜಿಲ್ಲಾಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

ಭಾರತದಾದ್ಯಂತ ಈ ಯೋಜನೆಯನ್ನು ಪರಿಚಯಿಸುವ ಗುರಿಯಿದ್ದು, ಮೊದಲು ಇಲ್ಲಿ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ಪರೀಕ್ಷಿಸುತ್ತಿದ್ದೇವೆ. ಅದಿತಿ ಮೂಲಭೂತ ಮಟ್ಟದ ಯೋಜನೆಯಾಗಿದೆ. ನಾವು ಶೀಘ್ರದಲ್ಲೇ ಪರಿಚಯಿಸಲಿರುವ ಮೂರು ಯೋಜನೆಗಳಲ್ಲಿ ಮೊದಲನೆಯದು. ಅದಿತಿಯ ಪ್ರೀಮಿಯಂ ಅನ್ನು ವರ್ಷಕ್ಕೆ 10,000 ರೂ.ಗೆ ನಿಗದಿಪಡಿಸಲಾಗಿದೆ ಎಂದು ನಾರಾಯಣ ಹೃದಯಾಲಯ ಲಿಮಿಟೆಡ್‌ನ ಉಪಾಧ್ಯಕ್ಷ ವೀರೇನ್ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್‌ ನಿರ್ದೇಶಕ ರವಿ ವಿಶ್ವನಾಥ್ ಪ್ರಕಾರ, ರೋಗಿಗಳ  ವಯಸ್ಸಿಗೆ ಅನುಗುಣವಾಗಿ ಪ್ರೀಮಿಯಂ ಬದಲಾಗುತ್ತದೆ. ವಿಮಾದಾರರು ಚಿಕಿತ್ಸೆಯಲ್ಲಿ 5 ಲಕ್ಷ ರೂ. ಮತ್ತು ಶಸ್ತ್ರಚಿಕಿತ್ಸೆಗಳಲ್ಲಿ 1 ಕೋಟಿ ರೂ. ವ್ಯಾಪ್ತಿಗೆ ಒಳಪಡುತ್ತಾರೆ. ಸಾಂಪ್ರದಾಯಿಕ ವಿಮಾ ಕಂಪನಿಗಳು ರೂ. 20,000 ರಿಂದ ರೂ. 48,000 ವರೆಗೆ ಶುಲ್ಕ ವಿಧಿಸುತ್ತವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.