AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಂಗ್ಯೂ ಜೊತೆ ಝೀಕಾ ವೈರಸ್ ಬಗ್ಗೆಯೂ ಎಚ್ಚರ ವಹಿಸಿ; ಜಿಲ್ಲಾಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

ಇಂದು (ಗುರುವಾರ) ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಡಿ.ಸಿ, ಸಿಇಒ ಹಾಗೂ ಸ್ಥಳೀಯ ಪಾಲಿಕೆಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಎಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡುಬರುತ್ತವೆಯೋ ಅಂತಹ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರಯಲು ಸಲಹೆ ನೀಡಿದರು.

ಡೆಂಗ್ಯೂ ಜೊತೆ ಝೀಕಾ ವೈರಸ್ ಬಗ್ಗೆಯೂ ಎಚ್ಚರ ವಹಿಸಿ; ಜಿಲ್ಲಾಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಕಿರಣ್ ಹನುಮಂತ್​ ಮಾದಾರ್
|

Updated on:Jul 04, 2024 | 7:37 PM

Share

ಬೆಂಗಳೂರು, ಜು.04: ಡೆಂಗ್ಯೂ ನಿಯಂತ್ರಣ ಕ್ರಮಗಳ ಜೊತೆಗೆ ಝೀಕಾ ವೈರಸ್ ಬಗ್ಗೆಯೂ ಅಲರ್ಟ್ ಆಗಿರುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಅವರಿಗೆ ಸೂಚನೆ ನೀಡಿದ್ದಾರೆ. ಇಂದು (ಗುರುವಾರ) ಬೆಂಗಳೂರಿನಲ್ಲಿ ಡಿ.ಸಿ, ಸಿಇಒ ಹಾಗೂ ಸ್ಥಳೀಯ ಪಾಲಿಕೆಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು, ಡೆಂಗ್ಯೂ ಹಾಟ್ ಸ್ಪಾಟ್​ಗಳನ್ನ ಪತ್ತೆ ಹಚ್ಚಿ ಮುಂಜಾಗೃತ ಕ್ರಮಗಳನ್ನ ಕೈಗೊಳ್ಳುವಂತೆ ಸೂಚಿಸಿದರು.‌

ಡೆಂಗಿ ಹೆಚ್ಚಿರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರೆಯಲು ಸೂಚನೆ

ಎಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡುಬರುತ್ತವೆಯೋ ಅಂತಹ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರಯಲು ಸಲಹೆ ನೀಡಿದರು. ಇಂಥಹ ಪ್ರದೇಶಗಳಲ್ಲಿ ಯಾರಿಗೆ ಜ್ವರ ಕಂಡುಬಂದರು, ಕಡ್ಡಾಯವಾಗಿ ಡೆಂಗ್ಯೂ ಟೆಸ್ಟಿಂಗ್ ಗೆ ಒಳಪಡಿಸಿ. ಆರಂಭದಲ್ಲೇ ಡೆಂಗ್ಯೂ ಪತ್ತೆ ಆದರೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ವಿಳಂಭವಾದಾಗ ಸಾವುಗಳು ಸಂಭವಿಸುತ್ತವೆ. ಡೆಂಗ್ಯೂಯಿಂದ ಇದರಿಂದ ಡೆಂಗ್ಯೂಯಿಂದಾಗುವ ಸಾವುಗಳಾಗಬಾರದು. ಸಾವುಗಳಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಆದ್ಯತೆಯಾಗಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಇದನ್ನೂ ಓದಿ:ಹಾಸನದಲ್ಲಿ ಹೆಚ್ಚಾದ ಡೆಂಗ್ಯೂ ಕೇಸ್; ಮೂರು ಮಕ್ಕಳ ಸಾವು, 8 ಮಕ್ಕಳ ಸ್ಥಿತಿ ಗಂಭೀರ

ಜನರಿಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಬೇಕು.‌ ಮನೆ ಮನೆಗೆ ಆಶಾ ಕಾರ್ಯಕರ್ತರ ಭೇಟಿ ಮಾಡಬೇಕು. ಮೆಡಿಕಲ್ ಆಫಿಸರ್ಸ್ ಸ್ಕೂಲ್​ಗಳಿಗೆ ಭೇಟಿ ನೀಡಿ ವಿಜ್ಞಾನ ಶಿಕ್ಷಕರ ಮೂಲಕ ಮಕ್ಕಳಲ್ಲಿ ಡೆಂಗ್ಯೂ ಕುರಿತು ತಿಳಿಹೇಳಬೇಕು. ಪ್ರಮುಖವಾಗಿ ಲಾರ್ವಾ ಉತ್ಪತ್ತಿ ಕಂಡುಬಂದಲ್ಲಿ, ಅದನ್ನ ನಾಶ ಪಡಿಸುವ ಕೆಲಸ ಆದ್ಯತೆಯ ಮೇಲೆ ಕೈಗೊಳ್ಳಿ ಎಂದು ಸಿಇಒ ಹಾಗೂ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಆರೋಗ್ಯ ಸಚಿವರು ಸೂಚನೆ ನೀಡಿದರು.‌

ಜಿಲ್ಲಾವಾರು ಡೆಂಗ್ಯೂ ಕೇಸ್​ಗಳನ್ನು ಪ್ರಕಟಿಸಲು ಹೇಳಿದ ಸಚಿವರು, ಶಿಕ್ಷಣ ಇಲಾಖೆ ಸೇರಿ ಎಲ್ಲಾ ಇಲಾಖೆಯವರು ಕೂಡ ವಾರಕ್ಕೆ ಒಂದು ದಿನ ಶುಕ್ರವಾರ ಫೀಲ್ಡ್ ಗಿಳಿದು ಕೆಲಸ ಮಾಡ್ಬೇಕು ಎಂದರು.‌ ಒಂದು‌ ಗಂಟೆಯ ಕಾಲವಾದರೂ ಡೆಂಗ್ಯೂ ನಿವಾರಣೆಗೆ ಮೀಸಲಿಡಲು ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಾಗಬೇಕು.‌ ಡೆಂಗ್ಯೂ ಟೆಸ್ಟ್​ಗೆ ನಿಗದಿ ಮಾಡಿರುವ ದರವನ್ನ ಕಡ್ಡಾಯವಾಗಿ ಪಾಲಿಸಲು ಕ್ರಮ‌ ವಹಿಸುವಂತೆಯೂ ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದರು.

ಈಡೀಸ್ ಸೊಳ್ಳೆಯಿಂದಲೇ ಝೀಕಾ ವೈರಸ್ ಕೂಡ ಕಂಡು ಬರುತ್ತದೆ. ಪಕ್ಕದ ರಾಜ್ಯದಲ್ಲಿ ಝೀಕಾ ವೈರಸ್ ಕಂಡು ಬಂದಿರುವುದರಿಂದ ರಾಜ್ಯದಲ್ಲೂ ಎಚ್ವರಿಕೆ ವಹಿಸುವುದು ಅಗತ್ಯವಾಗಿದೆ. ಶಿವಮೊಗ್ಗದಲ್ಲಿ ಒಂದು ಶಂಕಿತ ಝೀಕಾ ಕೇಸ್ ಪತ್ತೆಯಾಗಿದೆ.‌ ಆದರೆ, ಇನ್ನೂ ಕನ್ಪರ್ಮ್ ಆಗಿಲ್ಲ‌. ಝೀಕಾ ಅಷ್ಟೇನು ಅಪಾಯಕಾರಿ ಅಲ್ಲದಿದ್ದರೂ, ಅಲರ್ಟ್ ಆಗಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:36 pm, Thu, 4 July 24