ಬೆಂಗಳೂರು ಉಪನಗರ ರೈಲು ಯೋಜನೆಗೆ ನಮೋ ಶಂಕುಸ್ಥಾಪನೆ, ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

| Updated By: Rakesh Nayak Manchi

Updated on: Jun 20, 2022 | 2:19 PM

ಬೆಂಗಳೂರು ಉಪನಗರ ರೈಲು ಯೋಜನೆಗೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರು ಉಪನಗರ ರೈಲು ಯೋಜನೆಗೆ ನಮೋ ಶಂಕುಸ್ಥಾಪನೆ, ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಬೆಂಗಳೂರು ಉಪನಗರ ರೈಲು ಯೋಜನೆ
Follow us on

ಬೆಂಗಳೂರು ಉಪನಗರ ರೈಲು ಯೋಜನೆ (BSRP)ಗೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜೂ.20) ಶಂಕುಸ್ಥಾಪನೆ ನೆರವೇರಿಸಿದರು. 64 ನಿಲ್ದಾಣಗಳೊಂದಿಗೆ ಅನುಮೋದಿತ 149.348 ಕಿಮೀ ಉದ್ದದ ಉಪನಗರ ರೈಲು ಯೋಜನೆಯ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು 2020ರ ಅಕ್ಟೋಬರ್​ನಲ್ಲಿ ಅಂದಾಜು 15,767 ಕೋಟಿ ರೂ.ಗೆ ಅನುಮೋದನೆ ನೀಡಿತ್ತು. ಯೋಜನೆಯನ್ನು ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ಅನುಷ್ಠಾನಗೊಳಿಸುತ್ತಿದ್ದು, ಯೋಜನೆ ಪೂರ್ಣಗೊಳಿಸಲು 2026ರ ಗಡುವು ನೀಡಲಾಗಿದೆ.

ಪ್ರಮುಖ ಅಂಕಿಅಂಶಗಳು

ಕಾರ್ಯಾಚರಣೆ: ಒಟ್ಟು ಅನುಮೋದನೆ- 149.348 ಕಿ.ಮೀ, ನಿರ್ಮಾಣ ಹಂತ- 0 ಕಿ.ಮೀ

ಮೇಲ್ಸೇತುವೆ ಮಾರ್ಗಗಳು: 45.392 ಕಿಮೀ, At-Grade Routes: 103.856 ಕಿ.ಮೀ

ವ್ಯವಸ್ಥೆಯ ವಿಶೇಷಣಗಳು

ಗರಿಷ್ಠ ವೇಗ: 90 kmph

ಕಾರ್ಯಾಚರಣೆಯ ವೇಗ: 35 kmph

ಟ್ರ್ಯಾಕ್ ಗೇಜ್: ಬ್ರಾಡ್ ಗೇಜ್

ಇದನ್ನೂ ಓದಿ: PM Modi in Karnataka: ಸರಿಯಾಗಿ 11:55 ಕ್ಕೆ ಯಲಹಂಕದ ವಾಯುನೆಲೆ ನಿಲ್ದಾಣದಲ್ಲಿ ಲ್ಯಾಂಡ್ ಆದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು ಉಪನಗರ ರೈಲು ಮಾರ್ಗ ಮಾಹಿತಿ

ಕಾರಿಡಾರ್ 1 : ಸಂಪಿಗೆ ಲೈನ್

ಮಾರ್ಗ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು – ಯಲಹಂಕ – ದೇವನಹಳ್ಳಿ

ಉದ್ದ: 41.478 ಕಿ.ಮೀ

ಪ್ರಕಾರಗಳು: ಮೇಲ್ಸೇತುವೆ (19.22 ಕಿಮೀ) ಮತ್ತು ರೈಲು ಕ್ರಾಸಿಂಗ್ ಮಾರ್ಗಗಳು (22.278 ಕಿಮೀ)

ಡಿಪೋ: ಅಕ್ಕುಪೇಟೆ ಡಿಪೋ

ನಿಲ್ದಾಣಗಳ ಸಂಖ್ಯೆ: 15 (8 ಮೇಲ್ಸೇತುವೆ ಮತ್ತು 7 ರೈಲು ಕ್ರಾಸಿಂಗ್ ಮಾರ್ಗಗಳು)

ನಿಲ್ದಾಣಗಳ ಹೆಸರುಗಳು: ಕೆಎಸ್‌ಆರ್ ಬೆಂಗಳೂರು ನಗರ (ಇಂಟರ್‌ಚೇಂಜ್), ಶ್ರೀರಾಂಪುರ, ಮಲ್ಲೇಶ್ವರಂ, ಯಶವಂತಪುರ (ಇಂಟರ್‌ಚೇಂಜ್), ಮುತ್ಯಾಲ್ ನಗರ, ಲೊಟ್ಟೆಗೊಲ್ಲಹಳ್ಳಿ (ಇಂಟರ್‌ಚೇಂಜ್), ಕೊಡಿಗೇಹಳ್ಳಿ, ಜುಡಿಶಿಯಲ್ ಲೇಔಟ್, ಯಲಹಂಕ, ನಿಟ್ಟೆ ಮೀನಾಕ್ಷಿ, ಬೆಟ್ಟಹಲಸೂರು, ದೊಡ್ಡಾಜಾಲ, ಏರ್ಪೋರ್ಟ್ ಟ್ರಂಪೆಟ್, ವಿಮಾನ ನಿಲ್ದಾಣದ ಟರ್ಮಿನಲ್, ವಿಮಾನ ನಿಲ್ದಾಣ ಕೆಐಎಡಿ, ದೇವನಹಳ್ಳಿ.

ಗಮನಿಸಬೇಕಾದ ಅಂಶ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕವನ್ನು ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: Modi in Karnataka: ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕ ಪ್ರವಾಸ: ಕನ್ನಡದಲ್ಲಿ ಸಾಲುಸಾಲು ಟ್ವೀಟ್​

ಕಾರಿಡಾರ್ 2: ಮಲ್ಲಿಗೆ ಲೈನ್

ಮಾರ್ಗ: ಬೈಯ್ಯಪ್ಪನಹಳ್ಳಿ ಟರ್ಮಿನಲ್ – ಚಿಕ್ಕಬಾಣಾವರ

ಉದ್ದ: 24.866 ಕಿ.ಮೀ

ಪ್ರಕಾರಗಳು: ಮೇಲ್ಸೇತುವೆ (7.723 ಕಿಮೀ) ಮತ್ತು ರೈಲು ಕ್ರಾಸಿಂಗ್ ಮಾರ್ಗಗಳು (17.143 ಕಿಮೀ)

ಡಿಪೋ: ಜಾಲಹಳ್ಳಿ ಡಿಪೋ

ನಿಲ್ದಾಣಗಳ ಸಂಖ್ಯೆ: 14 (6 ಮೇಲ್ಸೇತುವೆ ಮತ್ತು 8 ರೈಲು ಕ್ರಾಸಿಂಗ್ ಮಾರ್ಗಗಳು)

ನಿಲ್ದಾಣಗಳ ಹೆಸರುಗಳು: ಚಿಕ್ಕ ಬಾಣಾವರ, ಮ್ಯಾದರಹಳ್ಳಿ, ಶೆಟ್ಟಿಹಳ್ಳಿ, ಜಾಲಹಳ್ಳಿ, ಯಶವಂತಪುರ (ಇಂಟರ್‌ಚೇಂಜ್), ಲೊಟ್ಟೆಗೊಲ್ಲಹಳ್ಳಿ (ಇಂಟರ್‌ಚೇಂಜ್), ಹೆಬ್ಬಾಳ, ಕನಕ ನಗರ, ನಾಗವಾರ, ಕಾವೇರಿ ನಗರ, ಬಾಣಸವಾಡಿ, ಸೇವಾ ನಗರ, ಕಸ್ತೂರಿ ನಗರ, ಬೈಯಪನಹಳ್ಳಿ (ಇಂಟರ್‌ಚೇಂಜ್).

ಇದನ್ನೂ ಓದಿ: PM Modi in Karnataka: ಪ್ರಧಾನಿ ಮೋದಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿರುವ ಭಾರತದ ಮೊದಲ ಪ್ರಧಾನಿಯಾಗಲಿದ್ದಾರೆ

ಕಾರಿಡಾರ್ 3: ಪಾರಿಜಾತ ಲೈನ್

ಮಾರ್ಗ: ಕೆಂಗೇರಿ – ವೈಟ್‌ಫೀಲ್ಡ್

ಉದ್ದ: 35.52 ಕಿ.ಮೀ

ಪ್ರಕಾರಗಳು: ಮೇಲ್ಸೇತುವೆ (10.40 ಕಿಮೀ) ಮತ್ತು ರೈಲು ಕ್ರಾಸಿಂಗ್ ಮಾರ್ಗಗಳು (25.12 ಕಿಮೀ)

ನಿಲ್ದಾಣಗಳ ಸಂಖ್ಯೆ: 14 (4 ಮೇಲ್ಸೇತುವೆ ಮತ್ತು 10 ಕ್ರಾಸಿಂಗ್ ರೂಟ್ಸ್)

ನಿಲ್ದಾಣಗಳ ಹೆಸರುಗಳು: ಕೆಂಗೇರಿ, ಆರ್‌ವಿ ಕಾಲೇಜು, ಜ್ಞಾನಭಾರತಿ, ನಾಯಂಡಹಳ್ಳಿ, ಕೃಷ್ಣದೇವರಾಯ, ಜಗಜೀವನರಾಮ್ ನಗರ, ಕೆಎಸ್‌ಆರ್ ಬೆಂಗಳೂರು ನಗರ (ಇಂಟರ್‌ಚೇಂಜ್), ಕುಮಾರ ಪಾರ್ಕ್, ಬೆಂಗಳೂರು ಕ್ಯಾಂಟ್, ಬೆಂಗಳೂರು ಪೂರ್ವ, ಬೈಯಪನಹಳ್ಳಿ, ಕೃಷ್ಣರಾಜಪುರ, ಹೂಡಿ, ವೈಟ್‌ಫೀಲ್ಡ್

ಇದನ್ನೂ ಓದಿ: Narendra Modi: ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಪ್ರವಾಸದ ಡಿಟೈಲ್ಸ್ ಇಲ್ಲಿದೆ

ಕಾರಿಡಾರ್ 4: ಕನಕ ಲೈನ್

ಮಾರ್ಗ: ಹೀಲಳಿಗೆ – ರಾಜನಕೂಟೆ

ಉದ್ದ: 46.285 ಕಿ.ಮೀ

ಪ್ರಕಾರಗಳು: ಮೇಲ್ಸೇತುವೆ (8.049 ಕಿಮೀ) ಮತ್ತು ಕ್ರಾಸಿಂಗ್ ಮಾರ್ಗಗಳು (39.716 ಕಿಮೀ)

ಡಿಪೋ: ಸಿಲ್ಕ್​ಬೋರ್ಡ್​ ಡಿಪೋ

ನಿಲ್ದಾಣಗಳ ಸಂಖ್ಯೆ: 21 (2 ಮೇಲ್ಸೇತುವೆ ಮತ್ತು 19 ಕ್ರಾಸಿಂಗ್ ಮಾರ್ಗಗಳು)

ನಿಲ್ದಾಣದ ಹೆಸರುಗಳು: ರಾಜಕುಂಟೆ, ಮುದ್ದನ ಹಳ್ಳಿ, ಯಲಹಂಕ (ಇಂಟರ್‌ಚೇಂಜ್), ಜಕ್ಕೂರು, ಹೆಗಡೆ ನಗರ, ಥಣಿಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗನಹಳ್ಳಿ (ಇಂಟರ್‌ಚೇಂಜ್), ಕಗಡಸ್‌ಪುರ, ದೊಡ್ಡನೆಕುಂದಿ, ಮಾರತ್ತಹಳ್ಳಿ, ಬೆಳಂದೂರು ರಸ್ತೆ, ಕಾರ್ಮೆಲರಾಮ, ಅಂಬೇಡ್ಕರ್ ನಗರ, ಹುಸುಕೂರು, ಸಿಂಗೇನ ಅಗ್ರಹಾರ, ಬೊಮ್ಮಸಂದ್ರ, ಹೀಲಳಿಗೆ.

ಗಮನಿಸಬೇಕಾದ ಅಂಶ: ಬೆಂಗಳೂರು ನಗರ (1 ಮತ್ತು 3), ಯಶವಂತಪುರ (1 & 2), ಲೊಟ್ಟೆಗೊಲ್ಲಹಳ್ಳಿ (1 ಮತ್ತು 2), ಯಲಹಂಕ (1 ಮತ್ತು 4) ಮತ್ತು ಬೆನ್ನಿಗಾನಹಳ್ಳಿ (2 ಮತ್ತು 4) ನಿಲ್ದಾಣಗಳು ಇಂಟರ್‌ಚೇಂಜ್ ನಿಲ್ದಾಣಗಳಾಗಿ ಕಾರ್ಯನಿರ್ವಹಿಸುತ್ತವೆ.

ಮಾರ್ಗ ನಕ್ಷೆ ವೀಕ್ಷಿಸಿ:

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Mon, 20 June 22