Modi Mysuru Visit: ಇಂದು ಸಂಜೆ ನರೇಂದ್ರ ಮೋದಿ ಮೈಸೂರಿಗೆ ಪ್ರಯಾಣ; ಪ್ರಧಾನಿಯ ಊಟ-ತಿಂಡಿಗೆ ಏನೆಲ್ಲ ಸ್ಪೆಷಲ್ ಗೊತ್ತಾ?
ಇಂದು ಸಂಜೆ ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷವಾದ ಊಟ-ಉಪಚಾರದ ಮೆನು ರೆಡಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಗಾಗಿ ಶುದ್ಧ ಸಸ್ಯಾಹಾರಿ ಊಟ ತಯಾರಿಸಲಾಗಿದೆ.
ಮೈಸೂರು: ಕರ್ನಾಟಕದ ಪ್ರವಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಬೆಂಗಳೂರಿನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇಂದು ಸಂಜೆ ಪ್ರಧಾನಿ ಮೋದಿ ಸಾಂಸ್ಕೃತಿಕ ನಗರಿ ಮೈಸೂರಿಗೆ (Mysore) ಪ್ರಯಾಣಿಸಲಿದ್ದಾರೆ. ಪ್ರಧಾನಮಂತ್ರಿಯಾದ ಬಳಿಕ 3 ಬಾರಿ ಕರ್ನಾಟಕಕ್ಕೆ ಭೇಟಿ ನೀಡಿರುವ ನರೇಂದ್ರ ಮೋದಿ ಕಳೆದ ಬಾರಿಯೂ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಈ ಬಾರಿಯೂ ಅವರು ಮೈಸೂರಿನಲ್ಲೇ ಉಳಿದುಕೊಳ್ಳಲಿದ್ದಾರೆ.
ಇಂದು ಸಂಜೆ ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷವಾದ ಊಟ-ಉಪಚಾರದ ಮೆನು ರೆಡಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಗಾಗಿ ಶುದ್ಧ ಸಸ್ಯಾಹಾರಿ ಊಟ ತಯಾರಿಸಲಾಗಿದೆ. ಆಹಾರದಲ್ಲಿ ಮಿತವಾದ ಸಕ್ಕರೆ, ಕಡಿಮೆ ಮಸಾಲೆ ಪದಾರ್ಥಗಳ ಬಳಕೆಗೆ ಸೂಚನೆ ನೀಡಲಾಗಿದೆ. ಬೆಳಗ್ಗಿನ ಉಪಾಹಾರಕ್ಕೆ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ-ಸಾಂಬಾರ್, ಬ್ರೆಡ್ ಬಟರ್, ಮಿಕ್ಸ್ ಫ್ರೂಟ್ ವ್ಯವಸ್ಥೆ ಮಾಡಲಾಗಿದೆ.
ನಾಳೆ ಮಧ್ಯಾಹ್ನದ ಊಟಕ್ಕೆ ವೆಜಿಟೇಬಲ್ ಸೂಪ್, ಮಸಾಲ ಮಜ್ಜಿಗೆ, ರೋಟಿ, ಜೀರಾ ರೈಸ್, ದಾಲ್ ಹಾಗೂ ಮಿಕ್ಸ್ ಫ್ರೂಟ್ ವ್ಯವಸ್ಥೆ ಮಾಡಲಾಗಿದೆ. ಹಾಗೇ, ಪ್ರಧಾನಿ ಮೋದಿಗೆ ಟೀ ಹಾಗೂ ಮಾರಿ ಬಿಸ್ಕಟ್ ನೀಡಲಾಗುವುದು. ರಾತ್ರಿಯ ಊಟಕ್ಕೆ ಕಿಚಡಿ/ ಗುಜರಾತಿ ಕರಿ, ರೋಟಿ, ದಾಲ್, ರೈಸ್, ಎರಡು ರೀತಿಯ ಸಬ್ಜಿ, ಮೊಸರು, ಮಿಕ್ಸ್ ಫ್ರೂಟ್ ಒಳಗೊಂಡ ಮೆನು ಸಿದ್ಧಪಡಿಸಲಾಗಿದೆ. ಅಲ್ಲದೆ, ಮೈಸೂರು ಅರಸರ ಕಾಲದಲ್ಲಿ ಮೈಸೂರು ಪಾಕ್ ತಯಾರಿಸುತ್ತಿದ್ದ ಮನೆತನದವರಿಂದ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಸ್ಪೆಷಲ್ ಮೈಸೂರು ಪಾಕ್ ತಯಾರಿಸಲಾಗುವುದು.
ಇದನ್ನೂ ಓದಿ: Live: ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ; ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಮಂಗಳವಾರ ಬೆಳಗ್ಗೆ 8.30ಕ್ಕೆ ಅರಮನೆಯ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಅರಮನೆ ನಿವಾಸದಲ್ಲಿ ಪ್ರಧಾನಿ ಮೋದಿಗೆ ಪ್ರಮೋದಾದೇವಿ ಒಡೆಯರ್ ಸ್ವಾಗತ ಕೋರಲಿದ್ದಾರೆ. ನಂತರ ರಾಜರ ನಿವಾಸದಲ್ಲಿ ಪ್ರಮೋದದೇವಿ ಒಡೆಯರ್ ಜೊತೆ ನರೇಂದ್ರ ಮೋದಿ ಉಪಹಾರ ಸವಿಯಲಿದ್ದಾರೆ. ಈ ವೇಳೆ ರಾಜ ಮನೆತನದವರು ಭಾಗಿಯಾಗಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೂಡ ಉಪಸ್ಥಿತರಿರಲಿದ್ದಾರೆ. ತಿಂಡಿಯ ಜೊತೆಗೆ ಮೈಸೂರಿನ ಬ್ರ್ಯಾಂಡ್ ಮೈಸೂರು ಪಾಕ್ ಸಿಹಿ ತಿನಿಸನ್ನು ತಯಾರಿಸಲಾಗುತ್ತಿದೆ. ಮೈಸೂರು ಅರಮನೆಯಲ್ಲೇ ಮೊದಲ ಬಾರಿಗೆ ತಯಾರಾಗಿದ್ದ ಮೈಸೂರು ಪಾಕ್ ಅನ್ನು ಬಾಣಸಿಗ ಕಾಕಾಸುರ ಮಾದಪ್ಪ ತಯಾರಿಸಲಿದ್ದಾರೆ.
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಭದ್ರತೆಗೆ ಡ್ರೋನ್ ವ್ಯವಸ್ಥೆ ಮಾಡಲಾಗಿದೆ. ಮೂರು ಡ್ರೋನ್ಗಳ ಮೂಲಕ ಪರಿಶೀಲನೆ ನಡೆಸಲಾಗುವುದು. ಮೂರು ತಂಡಗಳಿಂದ ಡ್ರೋನ್ಗಳ ನಿರ್ವಹಣೆ ಮಾಡಲಾಗುವುದು. ಮೈಸೂರು ಅರಮನೆ, ಮಹಾರಾಜ ಕಾಲೇಜು ಮೈದಾನ, ಚಾಮುಂಡಿ ಬೆಟ್ಟದಲ್ಲಿ ಡ್ರೋನ್ ಬಳಕೆ ಮಾಡಿ, ಏರಿಯಲ್ ವ್ಯೂ ಮೂಲಕ ಭದ್ರತೆಯ ಪರಿಶೀಲನೆ ನಡೆಸಲಾಗುವುದು.
ಅನುಮಾನಸ್ಪದ ವ್ಯಕ್ಯಿಗಳು, ಅನುಮಾನಸ್ಪದ ವಸ್ತುಗಳ ಮೇಲೆ ನಿಗಾ ಇಡಲು ಡ್ರೋನ್ಗಳನ್ನು ಬಳಸಿಕೊಳ್ಳಲಾಗುವುದು. ಸಾಕಷ್ಟು ಪರಿಣಾಮಕಾರಿ ಹಾಗೂ ಸಹಕಾರಿಯಾಗಿರುವ ಡ್ರೋನ್ ಕಣ್ಗಾವಲು ವಹಿಸಲಾಗುವುದು. ಮೋದಿ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ. ವಿಮಾನ ನಿಲ್ದಾಣದಿಂದ ಅರಮನೆ, ಅರಮನೆಯ ಸುತ್ತಮುತ್ತಲಿನ ರಸ್ತೆಗಳು, ಸುತ್ತೂರು ಶಾಖಾ ಮಠ, ಚಾಮುಂಡಿಬೆಟ್ಟಕ್ಕೆ ಹೋಗುವ ರಸ್ತೆಗಳು, ಅರಮನೆಯಿಂದ ಚಾಮರಾಜ ಜೋಡಿ ರಸ್ತೆ. ರಾಮಸ್ವಾಮಿ ವೃತ್ತ, ಎಂಡಿಎ ವೃತ್ತದ ಮೂಲಕ ಮಹಾರಾಜ ಕಾಲೇಜು ಮೈದಾನಕ್ಕೆ ಹೋಗುವ ರಸ್ತೆಗಳನ್ನು ಹೊಸದಾಗಿ ಡಾಂಬರೀಕರಣ ಮಾಡಲಾಗಿದೆ. ವೃತ್ತಗಳನ್ನು ಸಿಂಗರಿಸಿ, ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:04 pm, Mon, 20 June 22