Modi in Karnataka: ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕ ಪ್ರವಾಸ: ಕನ್ನಡದಲ್ಲಿ ಸಾಲುಸಾಲು ಟ್ವೀಟ್
ಕರ್ನಾಟಕಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಈ ಕುರಿತಾಗಿ ಅವರು ಕನ್ನಡದಲ್ಲಿ ಸಾಲು ಸಾಲು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜೂನ್ 20) ರಾಜ್ಯಕ್ಕೆ ಆಗಮಿಸುತ್ತಿದ್ದು, ಬೆಳಿಗ್ಗೆ 11.55ಕ್ಕೆ ಸರಿಯಾಗಿ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಬಂದು ಇಳಿಯಲಿದ್ದಾರೆ. ನಾಳೆ (ಜೂನ್ 21) ಮೈಸೂರಿನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಕಾರ್ಯಕ್ರಮಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಮೋದಿ ಕನ್ನಡಲ್ಲಿಯೇ ಟ್ವೀಟ್ ಮಾಡಿದ್ದಾರೆ. ಒಟ್ಟು ತಮ್ಮ ಎರಡು ದಿನಗಳ ರಾಜ್ಯ ಪ್ರವಾಸದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ‘ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ. ಅಲ್ಲಿ ಬೆಂಗಳೂರು ಮತ್ತು ಮೈಸೂರಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ. ಮೊದಲ ಕಾರ್ಯಕ್ರಮ @iiscbangalore, ಅಲ್ಲಿ ಮಿದುಳು ಸಂಶೋಧನಾ ಕೇಂದ್ರ ಉದ್ಘಾಟಿಸಲಾಗುವುದು. ಬಾಗ್ಚಿ- ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿಲಾನ್ಯಾಸ ನೆರವೇರಿಸಲಾಗುವುದು’ ಎಂದು ಮೋದಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ. ಅಲ್ಲಿ ಬೆಂಗಳೂರು ಮತ್ತು ಮೈಸೂರಿನ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವೆ. ಮೊದಲ ಕಾರ್ಯಕ್ರಮ @iiscbangalore, ಅಲ್ಲಿ ಮಿದುಳು ಸಂಶೋಧನಾ ಕೇಂದ್ರ ಉದ್ಘಾಟಿಸಲಾಗುವುದು. ಬಾಗ್ಚಿ- ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿಲಾನ್ಯಾಸ ನೆರವೇರಿಸಲಾಗುವುದು.
— Narendra Modi (@narendramodi) June 20, 2022
ಇಂದು ಅಪರಾಹ್ನ, ನಾನು ಡಾ. ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್), ಬೆಂಗಳೂರು ಇಲ್ಲಿ ಬೇಸ್ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟನೆ ಮತ್ತು ಡಾ ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ಅನಾವರಣ.150 ಟೆಕ್ ಹಬ್ ಗಳ ಲೋಕಾರ್ಪಣೆ ಕೂಡ ಮಾಡುವೆ. ಇವನ್ನು ಐಟಿಐಗಳನ್ನು ಉನ್ನತೀಕರಿಸಿ ಅಭಿವೃದ್ಧಿಗೊಳಿಸಲಾಗಿದೆ.
ಇಂದು ಅಪರಾಹ್ನ, ನಾನು ಡಾ. ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್), ಬೆಂಗಳೂರು ಇಲ್ಲಿ ಬೇಸ್ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟನೆ ಮತ್ತು ಡಾ ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ಅನಾವರಣ.150 ಟೆಕ್ ಹಬ್ ಗಳ ಲೋಕಾರ್ಪಣೆ ಕೂಡ ಮಾಡುವೆ . ಇವನ್ನು ಐಟಿಐಗಳನ್ನು ಉನ್ನತೀಕರಿಸಿ ಅಭಿವೃದ್ಧಿಗೊಳಿಸಲಾಗಿದೆ.
— Narendra Modi (@narendramodi) June 20, 2022
ಬೆಂಗಳೂರಿನ ಕಾರ್ಯಕ್ರಮದಲ್ಲಿ, 27,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಇಲ್ಲವೆ ಶಂಕುಸ್ಥಾಪನೆ. ಈ ಕಾಮಗಾರಿಗಳು ವಿವಿಧ ಕ್ಷೇತ್ರಗಳಿಗೆ ಸೇರಿದ್ದು ಬೆಂಗಳೂರಿನ ಹಾಗು ಸುತ್ತಮುತ್ತಲಿನ ಜನರ ‘ಸುಗಮ ಜೀವನ’ಕ್ಕೆ ನೆರವಾಗಲಿದೆ.
ಬೆಂಗಳೂರಿನ ಕಾರ್ಯಕ್ರಮದಲ್ಲಿ, 27,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಇಲ್ಲವೆ ಶಂಕುಸ್ಥಾಪನೆ. ಈ ಕಾಮಗಾರಿಗಳು ವಿವಿಧ ಕ್ಷೇತ್ರಗಳಿಗೆ ಸೇರಿದ್ದು ಬೆಂಗಳೂರಿನ ಹಾಗು ಸುತ್ತಮುತ್ತಲಿನ ಜನರ ‘ಸುಗಮ ಜೀವನ’ಕ್ಕೆ ನೆರವಾಗಲಿದೆ.
— Narendra Modi (@narendramodi) June 20, 2022
ಸಂಜೆ 5.30ರ ವೇಳೆಗೆ ಮೈಸೂರು ತಲುಪುವೆ. ಅಲ್ಲಿಯೂ ಪ್ರಮುಖ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಇಲ್ಲವೆ ಶಿಲಾನ್ಯಾಸ ನೆರವೇರಿಸುವೆ. ಸುತ್ತೂರು ಮಠದ ಕಾರ್ಯಕ್ರಮದಲ್ಲಿಯೂ ಭಾಗಿಯಾಗುವೆ. ನಾಳೆ ಬೆಳಗ್ಗೆ, ಮೈಸೂರಿನಲ್ಲಿ ಯೋಗ ದಿನದ ಕಾರ್ಯಕ್ರಮವೂ ನೆರವೇರಲಿದೆ ಎಂದು ಮೋದಿ ಹೇಳಿದ್ದಾರೆ.
ಸಂಜೆ 5.30ರ ವೇಳೆಗೆ ಮೈಸೂರು ತಲುಪುವೆ. ಅಲ್ಲಿಯೂ ಪ್ರಮುಖ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಇಲ್ಲವೆ ಶಿಲಾನ್ಯಾಸ ನೆರವೇರಿಸುವೆ. ಸುತ್ತೂರು ಮಠದ ಕಾರ್ಯಕ್ರಮದಲ್ಲಿಯೂ ಭಾಗಿಯಾಗುವೆ. ನಾಳೆ ಬೆಳಗ್ಗೆ, ಮೈಸೂರಿನಲ್ಲಿ ಯೋಗ ದಿನದ ಕಾರ್ಯಕ್ರಮವೂ ನೆರವೇರಲಿದೆ.
— Narendra Modi (@narendramodi) June 20, 2022
ದೇಶದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.