World Refugee Day 2022: ಇದು ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾದದ್ದಲ್ಲ

Theme : ದಿ ಯುನೈಟೆಡ್ ನೇಶನ್ಸ್ ರೆಫ್ಯೂಜಿ ಏಜೆನ್ಸಿ 2021ರಲ್ಲಿ ಘೋಷಿಸಿದ ಥೀಮ್ ‘ನಾವು ಒಟ್ಟಾಗಿದ್ದರೆ ಏನನ್ನೂ ಸಾಧಿಸಬಹುದು.’ ಪ್ರಸ್ತುತ 2022ರ ಥೀಮ್, ‘ಸುರಕ್ಷತಾ ಹಕ್ಕು’ ಅದು ಯಾರಿಗೂ, ಎಲ್ಲಿಯೂ, ಯಾವಾಗ ಬೇಕಾದರೂ ದಕ್ಕುವಂತಾಗಲಿ.   

World Refugee Day 2022: ಇದು ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾದದ್ದಲ್ಲ
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 20, 2022 | 11:56 AM

World Refugee Day 2022: ಜಗತ್ತಿನಲ್ಲಿ ಅನೇಕ ಕಾರಣಗಳಿಂದ ಮೂಲಸೌಕರ್ಯಗಳಿಂದ ವಂಚಿತರಾಗಿ ನಿರಾಶ್ರಿತರಾದವರು ನಮ್ಮ ಸುತ್ತಲೂ ವಾಸಿಸುತ್ತಿದ್ದಾರೆ. ಅಂಥವರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪರಸ್ಪರ ಅರ್ಥ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ‘ವಿಶ್ವ ನಿರಾಶ್ರಿತರ ದಿನ’ವನ್ನು ಪ್ರತೀ ವರ್ಷ ಜೂನ್ 20ರಂದು  ಆಚರಿಸಲಾಗುತ್ತಿದೆ. ಯುನೈಟೆಡ್ ನೇಷನ್ಸ್​ ಜನರಲ್ ಅಸೆಂಬ್ಲಿಯು ಈ ದಿನವನ್ನು ಆಚರಿಸುವ ಬಗ್ಗೆ ನಿರ್ಣಯ ತೆಗೆದುಕೊಂಡಿತು. ಪ್ರಕೃತಿ ವಿಕೋಪಗಳಿಂದಾಗಿ ಜನರು ನಿರುಪಾಯವಾಗಿ ವಲಸೆಗೆ ಮುಖಮಾಡುವುದು ಒಂದೆಡೆಯಾದರೆ, ರಾಜಕೀಯ ಭಿನ್ನಾಭಿಪ್ರಾಯಗಳ ಪರಿಣಾಮ ಸಂಭವಿಸುವ ಯುದ್ಧ, ಹಿಂಸಾಚಾರ, ಜನಾಂಗೀಯ ಸಂಘರ್ಷ, ಧಾರ್ಮಿಕ ಭಿನ್ನಾಭಿಪ್ರಾಯದಿಂದ ಜನಸಾಮಾನ್ಯರು ಆ ಜಾಗದಿಂದ ಬಲವಂತವಾಗಿ ಕದಲಲೇಕಾಗುವುದು ಇನ್ನೊಂದೆಡೆ. ಹೀಗೆ ಶೋಷಣೆಗೆ ಒಳಗಾಗುವ ಜನರ ಆತಂಕವನ್ನು, ಅನಿಶ್ಚಿತತೆಯನ್ನು, ಭಯವನ್ನು ಹೋಗಲಾಡಿಸಿ ಅವರಲ್ಲಿ ಧೈರ್ಯ ತುಂಬುವ ಕೆಲಸ ಉಳಿದವರದು. ಇಂಥ ಮಾನವೀಯ ಮನೋಭಾವವನ್ನು ಬೆಂಬಲಿಸಲೆಂದೇ ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ.

ದಿ ಯುನೈಟೆಡ್ ನೇಶನ್ಸ್ ರೆಫ್ಯೂಜಿ ಏಜೆನ್ಸಿ 2021ರಲ್ಲಿ ಘೋಷಿಸಿದ ಥೀಮ್ ‘ನಾವು ಒಟ್ಟಾಗಿದ್ದರೆ ಏನನ್ನೂ ಸಾಧಿಸಬಹುದು.’ ಪ್ರಸ್ತುತ 2022ರ ಥೀಮ್, ‘ಸುರಕ್ಷತಾ ಹಕ್ಕು’ ಅದು ಯಾರಿಗೂ, ಎಲ್ಲಿಯೂ, ಯಾವಾಗ ಬೇಕಾದರೂ ದಕ್ಕುವಂತಾಗಲಿ.

ಜಗತ್ತಿನಾದ್ಯಂತ ಅನೇಕ ಕಾರಣಗಳಿಂದ ಲಕ್ಷಾಂತರ ಅಮಾಯಕರು ಆಹಾರ, ಬಟ್ಟೆಬರೆ, ವಸತಿ, ಕುಟುಂಬ, ಶಿಕ್ಷಣ, ಮತ್ತು ಬದುಕುವ ಹಕ್ಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿಯ ದುರ್ಲಾಭವನ್ನು ಪಡೆದುಕೊಳ್ಳುತ್ತಿರುವ ಆಳುವ ವರ್ಗಗಳು ಕಾನೂನು ಬಾಹಿರ ಚಟುವಟಿಕೆಯಲ್ಲಿ ಅವರನ್ನು ಬಳಸಿಕೊಳ್ಳುತ್ತ ಬಂದಿರುವ ಉದಾಹರಣೆಗಳು ನೂರಾರು ವರ್ಷಗಳಿಂದ ನಮ್ಮೆದುರೇ ಇವೆ.

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’
Image
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Image
Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

ಇದನ್ನೂ ಓದಿ : International Yoga Day 2022: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಈ ಯೋಗಾಸನಗಳು ಸಹಕಾರಿ

ಇಂಥ ನಿರಾಶ್ರಿತರ ಸುರಕ್ಷತೆಗಾಗಿ ಪುನರ್ವಸತಿಗಾಗಿ, ಸರ್ವರೀತಿಯ ಏಳ್ಗೆಗಾಗಿ ಅವರಿಗೆ ಸಹಾಯ ಮಾಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಇದು ಒಂದು ದಿನಕ್ಕಷ್ಟೇ ಸೀಮಿತವಾಗಿಲ್ಲ ಇಡೀವಾರಕ್ಕೆ ಇದು ಅನ್ವಯವಾಗುತ್ತದೆ.

ಇದನ್ನೂ ಓದಿ : International Yoga Day 2022: ಯಾವ ಸಮಯದಲ್ಲಿ ಯೋಗ ಮಾಡುವುದು ಹೆಚ್ಚು ಸೂಕ್ತ?

ಆದರೆ ಇದು ಯಾವುದೋ ಹಬ್ಬ, ಉತ್ಸವವಲ್ಲ ವಾರಕ್ಕೆ ಸೀಮಿತವಾಗಲು. ಕ್ಷಣಕ್ಷಣವೂ ಇಂಥ ಸಮಸ್ಯೆಗಳ ಬಗ್ಗೆ ನಾಗರಿಕರಾದ ನಾವು ಪ್ರಜ್ಞೆ ಮತ್ತು ಮಾನವೀಯತೆಯಿಂದ ಯೋಚಿಸಲೇಬೇಕು. ಶೋಷಣೆಗೆ ಒಳಗಾದವರನ್ನು ಮೇಲೆತ್ತಬೇಕು. ಎಲ್ಲರಿಗೂ ಸಮಾಜದಲ್ಲಿ ಬದುಕಲು ಸಮಾನ ಹಕ್ಕುಗಳಿವೆ. ಅದನ್ನು ಪರಸ್ಪರರು ಸಾಧ್ಯವಾಗಿಸಲು ಸಹಾಯ ಮಾಡಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಒಟ್ಟಾಗಿ ಕೆಲಸ ಮಾಡಿದಲ್ಲಿ ಖಂಡಿತ ಬೆಳಕು ಇದ್ದೇ ಇರುತ್ತದೆ.

Published On - 11:36 am, Mon, 20 June 22