Theatre: ಅಂಕಪರದೆ; ರಂಗಶಂಕರದಲ್ಲಿ ‘ರಂಗರಥ’ವೇರಿ ಬರುತ್ತಿದೆ ‘ಮಾಳವಿಕಾಗ್ನಿಮಿತ್ರ’

Malavikagnimitra : ಶೃಂಗಾರ, ಹಾಸ್ಯದ ಲೇಪನವಿರುವ ಈ ನಾಟಕದ ವಸ್ತು ಮತ್ತು ವಿನ್ಯಾಸ, ಸಾಕಷ್ಟು ರಂಗಾಸಕ್ತರ ಗಮನ ಸೆಳೆಯುತ್ತಲೇ, 39 ಯಶಸ್ವೀ ಪ್ರದರ್ಶನಗಳನ್ನು ಮುಗಿಸಿ ಈಗ 40ನೇ ಪ್ರದರ್ಶನಕ್ಕೆ ಸಜ್ಜಾಗಿದೆ.

Theatre: ಅಂಕಪರದೆ; ರಂಗಶಂಕರದಲ್ಲಿ ‘ರಂಗರಥ’ವೇರಿ ಬರುತ್ತಿದೆ ‘ಮಾಳವಿಕಾಗ್ನಿಮಿತ್ರ’
ಮಾಳವಿಕಾಗ್ನಿಮಿತ್ರದ ದೃಶ್ಯ
Follow us
ಶ್ರೀದೇವಿ ಕಳಸದ
|

Updated on: Jun 21, 2022 | 9:29 AM

Malavikagnimitra : ಮೌರ್ಯ ವಂಶದ ಪತನಕ್ಕೆ ಕಾರಣನಾದ ಪುಷ್ಯಮಿತ್ರ ಶುಂಗನ ಮಗ ಅಗ್ನಿಮಿತ್ರನು, ಸುಮಾರು 2000 ಸಾವಿರ ವರ್ಷಗಳ ಹಿಂದೆ, ಶುಂಗ ಸಾಮ್ರಾಜ್ಯವನ್ನು ಸ್ಥಾಪಿಸಿ ಒಳ್ಳೆಯ ಆಡಳಿತ ನೀಡಿದ್ದಕ್ಕೆ ಶಾಸನಗಳ ಆಧಾರವಿದೆ. ಕಾಳಿದಾಸನ ‘ಮಾಳವಿಕಾಗ್ನಿಮಿತ್ರ’ ನಾಟಕದಲ್ಲಿ, ಅಗ್ನಿಮಿತ್ರನ ಸಮರ್ಥ ಆಡಳಿತದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅವನು ಸ್ತ್ರೀಲೋಲ ಎನ್ನುವ ಹಾಗೆ ಬಿಂಬಿತವಾಗಿದೆ. ಇದರ ಜಾಡನ್ನು ಹಿಡಿದು, ‘ರಂಗರಥ’ ತಂಡದ ರೂವಾರಿಗಳಾದ ಆಸಿಫ್ ಕ್ಷತ್ರಿಯ ಮತ್ತು ಶ್ವೇತ ಶ್ರೀನಿವಾಸ್ ಹೊರಟಾಗ, ಮೂಲ ‘ಮಾಳವಿಕಾಗ್ನಿಮಿತ್ರ’ ನಾಟಕದಲ್ಲಿ, ಐತಿಹಾಸಿಕ ಪುರಾವೆಗಳ ಆಧಾರದ ಮೇಲೆ ಸ್ವಲ್ಪ ಬದಲಾವಣೆಗಳ ಅಗತ್ಯತೆ ಕಂಡುಬಂದಿತು. ಶಾಸನಗಳನ್ನು ತಕ್ಕಮಟ್ಟಿಗೆ ಓದಲು ಬಲ್ಲ ಆಸಿಫ್ ಮತ್ತು ಶ್ವೇತ ಅವರು, ಅಗ್ನಿಮಿತ್ರನ ಆಡಳಿತ ವೈಖರಿಯ ಕೆಲ ಅಂಶಗಳನ್ನು ಸಂಶೋಧಿಸಿ, ಅವುಗಳನ್ನು ಮೂಲನಾಟಕದಲ್ಲಿ ಅಳವಡಿಸಿ, ಒಂದು ನೂತನ ರಂಗಪಠ್ಯವನ್ನು ರಚಿಸಿದರು. ಇದರ ಪರಿಣಾಮವೇ ಸರಳ ಕನ್ನಡದಲ್ಲಿ ಮೂಡಿಬಂದ ಪ್ರಸ್ತುತ ನಾಟಕ ಮಾಳವಿಕಾಗ್ನಿಮಿತ್ರ. 

‘ಈ ‘ನವೀನ’ ಮಾಳವಿಕಾಗ್ನಿಮಿತ್ರ ನಾಟಕ ರೂಪುಗೊಂಡ ಪ್ರಕ್ರಿಯೆಯ ಹಿಂದೆ ಹಲವಾರು ರೋಚಕ ಸಂಗತಿ, ವಿಚಾರಗಳಿವೆ. ಇದು ಕಾಳಿದಾಸನ ಮೊಟ್ಟಮೊದಲ ನಾಟಕ. ಇದರ ಮೂಲರಚನೆ, ಕಾಳಿದಾಸನ ಬೇರೆ ನಾಟಕಗಳಾದ ‘ಋತುಸಂಹಾರ’, ‘ಮೇಘದೂತ’ ಮತ್ತು ‘ಅಭಿಜ್ಞಾನ ಶಾಕುಂತಲ’ ನಾಟಕಗಳ ತುಲನೆಯಲ್ಲಿ ಕೊಂಚ ಕ್ಲೀಷೆಯೇ. ಬಹುಶಃ, ಕಾಳಿದಾಸನಿಗೆ ಈ ಮೊದಲ ನಾಟಕ ಬರೆಯುವಾಗ, ನಾಟಕ ರಚನೆಯಲ್ಲಿ ಅನುಭವ ಅಪಕ್ವವಾಗಿತ್ತೊ ಏನೋ? ಅದಕ್ಕಾಗಿಯೇ ಇರಬೇಕು, ಮಾಳವಿಕಾಗ್ನಿಮಿತ್ರ ನಾಟಕವನ್ನು ಪ್ರದರ್ಶನಗಳಿಗಾಗಿ ಆಯ್ದುಕೊಳ್ಳುವುದು ಸ್ವಲ್ಪ ವಿರಳ.’ ಎನ್ನುತ್ತಾರೆ ನಿರ್ದೇಶಕ ಆಸೀಫ್ ಕ್ಷತ್ರಿಯ.

‘ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ’ ಯ ಉದ್ದೇಶವೇ ಹೊಸಹೊಸ ಪ್ರೇಕ್ಷಕರನ್ನು ರಂಗಸ್ಥಳಕ್ಕೆ ಕರೆತರುವುದು. ಹಾಗಾಗಿ, ಈ ಸಂಸ್ಥೆ ಈಗಿನ ಪೀಳಿಗೆಯ ಮನಸ್ಥಿತಿಗೆ ಒಪ್ಪುವ ಹಾಗೆ, ನಮ್ಮಲ್ಲಿರುವ ಉತ್ಕೃಷ್ಟ ನಾಟಕಗಳನ್ನು, ಮೇರು ಕೃತಿಗಳನ್ನು, ಕಥೆಗಳನ್ನು ಪರಿಷ್ಕರಿಸಿ, ನೂತನ ರಂಗಪಠ್ಯವನ್ನು ರೂಪಿಸಿ ಪ್ರದರ್ಶಿಸುತ್ತಾ ಬಂದಿದೆ. ಇದಲ್ಲದೇ, ಜಗತ್ತಿನ ಅನ್ಯ ಸಂಪ್ರದಾಯಗಳಲ್ಲಿರುವ ನಾಟಕಗಳನ್ನೂ ಕನ್ನಡಕ್ಕೆ ಅನುವಾದಿಸಿ ಪ್ರದರ್ಶಿಸುತ್ತಿದೆ.

ಇದನ್ನೂ ಓದಿ
Image
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
Image
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Image
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Image
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ಇದನ್ನೂ ಓದಿ : Theatre: ಅಂಕಪರದೆ: ‘ನಡುರಾತ್ರಿಯ ಪುಳಕ’ ನೋಡಲು ಜೂನ್ 1ಕ್ಕೆ ರಂಗಶಂಕರಕ್ಕೆ ಬನ್ನಿ

ಈಗೀಗ ಹೆಚ್ಚುತ್ತಿರುವ ರಾಜಕೀಯ ತಲ್ಲಣಗಳು, ಸಾಮಾಜಿಕ ಗೊಂದಲಗಳು, ಆರ್ಥಿಕ ಮುಗ್ಗಟ್ಟು, ಕಲುಷಿತ ಆಹಾರ, ಜಾಲತಾಣಗಳ ಚಟ, ಇಂತಹ ಅನೇಕ ಸಮಸ್ಯೆಗಳ ನಡುವೆ, ನಮ್ಮ ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾಗಿ ಸ್ವಸ್ಥರನ್ನಾಗಿಸುವುದು ಬಹುದೊಡ್ಡ ಸವಾಲು. ‘ರಂಗರಥ’ ಸಂಸ್ಥೆಯ ಯಾವುದೇ ನಾಟಕವಿರಲಿ, ತರಬೇತಿ ಶಿಬಿರವಿರಲಿ, ಸಿನಿಮಾ ನಿರ್ಮಾಣವಿರಲಿ, ಸಾಕ್ಷಚಿತ್ರವಿರಲಿ, ಈ ಎಲ್ಲದರ ಉದ್ದೇಶ, ಕೇವಲ ವ್ಯವಹಾರ ಅಥವಾ ಮನರಂಜನೆ ಇರದೇ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪೂರಕವಾದ ವಿಚಾರಗಳು ಮತ್ತು ಪ್ರೇರಕ ಸಂಗತಿಗಳನ್ನು ಈಗಿನ ಪೀಳಿಗೆಯ ಯುವಕ ಯುವತಿಯರಿಗೆ ಮನನ ಮಾಡಿಕೊಡುವುದೇ ಆಗಿದೆ.

ಈ ನಿಟ್ಟಿನಲ್ಲಿ ‘ರಂಗರಥ’ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆಯ, ಎರಡು ತಿಂಗಳಿಗೊಮ್ಮೆ ಆಯೋಜಿಸಲ್ಪಡುತ್ತಿರುವ ‘ಥಿಯೇಟರ್ ಇಂಟರ್ನಶಿಪ್’ ಎಂಬ ‘ಒಂದು’ ತಿಂಗಳಿನ ರಂಗತರಬೇತಿ ಶಿಬಿರಗಳು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿವೆ. ಪ್ರತಿ ‘ಥಿಯೇಟರ್ ಇಂಟರ್ನ್​ಶಿಪ್’ ಶಿಬಿರದಲ್ಲಿ ನಿರ್ಮಾಣಗೊಳ್ಳುವ ಗುಣಮಟ್ಟದ ನಾಟಕಗಳು, ರಂಗಪ್ರಪಂಚಕ್ಕೆ ಹೊಸದಾಗಿ ಕಾಲಿಡುತ್ತಿರುವ ಯುವಕ ಯುವತಿಯರಲ್ಲಿ, ತಾವು ಭರವಸೆಯ ನಟ, ನಟಿ, ರಂಗಕರ್ಮಿ ಮತ್ತು ತಂತ್ರಜ್ಞರಾಗಬಹುದು ಎಂಬ ಆತ್ಮವಿಶ್ವಾಸ ತುಂಬುತ್ತಿವೆ.

ಇದನ್ನೂ ಓದಿ : Theatre: ಅಂಕಪರದೆ; ‘ವ್ಯೋಮ 360 ನಾಟಕೋತ್ಸವ’ದಲ್ಲಿ ರಂಗರಥದಿಂದ ‘ಆ್ಯಬ್​ಸಿಂತ್’ ನಾಟಕ

ಇಂತಹ, ಪುರೋಗಾಮಿ ಉದ್ದೇಶಗಳನ್ನು ಇಟ್ಟುಕೊಂಡೇ, ರಂಗಾಸಕ್ತರ ಗಮನ ಸೆಳೆಯುತ್ತಾ ಸಾಗುತ್ತಿರುವ ಈ ‘ರಂಗರಥ’, ಹವ್ಯಾಸಿ ರಂಗಭೂಮಿಯ ಅನೇಕ ಸಮಸ್ಯೆಗಳನ್ನು, ವಿಶೇಷವಾಗಿ, ಕಲಾವಿದರಿಗೆ ಸಾಮಾನ್ಯವಾಗಿ ಕಾಡುವ ಭ್ರಮೆ ಮತ್ತು ಅಭದ್ರತೆಗಳನ್ನು ನಿಭಾಯಿಸಿಕೊಂಡೇ, ಪ್ರಸ್ತುತ ನಾಟಕ ‘ಮಾಳವಿಕಾಗ್ನಿಮಿತ್ರ’ ದ ೪೦ನೇ ಪ್ರದರ್ಶನಕ್ಕೆ ಸಜ್ಜಾಗಿದೆ.

ನಾಟಕ : ಮಾಳವಿಕಾಗ್ನಿಮಿತ್ರ ನಿರ್ದೇಶನ : ಆಸೀಫ್​ ಕ್ಷತ್ರಿಯ, ಶ್ವೇತಾ ಶ್ರೀನಿವಾಸ್ ಅವಧಿ : 90 ನಿಮಿಷ ದಿನಾಂಕ : ಜೂನ್ 22 ಸಮಯ : 7.30 ಸ್ಥಳ : ರಂಗಶಂಕರ, ಜೆ.ಪಿ. ನಗರ ಟಿಕೆಟ್​ : BookMyShow