ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ದ್ರೋಹ ಎಲ್ಲರಿಗೂ ಗೊತ್ತಿದೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ಧರಾಮಯ್ಯ ಕಿಡಿ
ಮಧು ಮಾದೇಗೌಡ್ರು ದಕ್ಷಿಣ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಕ್ಟರಿ ಸಾಧಿಸಿದ್ದಾರೆ. ಬಿಜೆಪಿನವರು ಹಾಗೂ ಜೆಡಿಎಸ್ನವರು ತಮ್ಮ ಭದ್ರಕೋಟೆ ಅಂದುಕೊಂಡಿದ್ದರು. 12 ಸಾವಿರ ಮತಗಳಿಂದ ಬಿಜೆಪಿಯನ್ನ ಸೋಲಿಸಿದ್ದಾರೆ.
ಬೆಂಗಳೂರು: 2019-20ರಲ್ಲಿ ಕರ್ನಾಟಕದಲ್ಲಿ ಹಿಂದೆಂದೂ ಕಂಡಿರದ ಪ್ರವಾಹ (Flood) ಬಂದಿತ್ತು. ಆಗ ಪ್ರಧಾನಿ ಬರಲಿಲ್ಲ. ಕರ್ನಾಟಕಕ್ಕೆ ಬಂದು ಪ್ರವಾಹದಲ್ಲಿದ್ದ ಜನರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಪರಿಹಾರ ನೀಡುವ ಕೆಲಸ ಮಾಡಿಲ್ಲ. ಕರ್ನಾಟಕಕ್ಕೆ ಇವರಿಂದ ಆಗಿರುವ ದ್ರೋಹ ಎಲ್ಲರಿಗೂ ಗೊತ್ತಿದೆ ಎಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಿರುವ ಕುರಿತಾಗಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕುಮಾರಕೃಪಾ ರಸ್ತೆಯಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದರು. ಮೈಸೂರು ಬ್ಯಾಂಕ್ ಎಂಬ ಹೆಸರನ್ನೇ ತೆಗೆದು ಹಾಕಿದರು. ಇದನ್ನ ಮಾಡಿದ್ದು ಮಿಸ್ಟರ್ ಮೋದಿಯವರು. ಸಿಂಡಿಕೇಟ್ ಬ್ಯಾಂಕ್ ಇದೀಯಾ ಈಗ. ವಿಜಯ ಬ್ಯಾಂಕ್ ಇದೆಯಾ ಈಗ. ನಾಲ್ಕು ಬ್ಯಾಂಕ್ಗಳನ್ನ ಬೇರೆ ಬ್ಯಾಂಕ್ಗಳ ಜೊತೆ ಮರ್ಜ್ ಮಾಡಿದ್ದು ಯಾರು ಎಂದು ಪ್ರಧಾನಿ ಮೋದಿ ವಿರುದ್ಧ ಗುಡುಗಿದರು. 317 ಲಕ್ಷ ಕೋಟಿ ಈ ಬ್ಯಾಂಕ್ಗಳಿಲ್ಲಿ ಇತ್ತು. 70 ಸಾವಿರ ಸಿಬ್ಬಂದಿಗಳಿದ್ದರು. ಈ ಬ್ಯಾಂಕ್ಗಳು ಕನ್ನಡಿಗರಿಗೆ ಕೆಲಸ ಕೊಡುತ್ತಿದ್ದವು. ಆದರೆ ಮರ್ಜ್ ಮಾಡಿದ್ಮೇಲೆ ಕನ್ನಡಿಗರಿಗೆ ಕೆಲಸ ಕೊಡ್ತಾಯಿದ್ದಾರಾ? ಇದು ಕನ್ನಡಿಗರಿಗೆ ಮಾಡಿದ ಮೋಸ ಅಲ್ವಾ? ಇದು ಕನ್ನಡಿಗರಿಗೆ ಮಾಡಿದ ಅವಮಾನ. ಇದನ್ನ ಮಾಡಿದ್ದವರುವ ಯಾರು, ಮಿಸ್ಟರ್ ನರೇಂದ್ರ ಮೋದಿ.
ಕೊರೊನಾ ಟೈಮ್‌ನಲ್ಲಿ ಆಕ್ಸಿಜನ್ ಕೇಳಿದ್ರೆ ಕೊಟ್ರಾ? ಹೈಕೋರ್ಟ್ ಹೇಳಿದಕ್ಕೆ, ಹೈಕೋರ್ಟ್ ಕೇಳಿದಷ್ಟು ಕೊಡೊಕ್ಕೆ ಆಗಲ್ಲ ಅಂತಾ ಸುಪ್ರೀಂ ಕೋರ್ಟ್ ನಲ್ಲಿ ಅಪೀಲು ಹೋದರು ಕೇಂದ್ರ ಸರ್ಕಾರದವರು. ಚಾಮರಾಜಪೇಟೆಯಲ್ಲಿ ಜನ ಸತ್ತು ಹೋದರು. ಇವರು ಪ್ರಧಾನ ಮಂತ್ರಿ ಆದ್ಮೆಲೆ ನಮ್ಮ ತೆರಿಗೆ ಪಾಲು ಕಡಿಮೆ ಆಯಿತಾ. ಕರ್ನಾಟಕ ಒಂದರಿಂದಲೇ ಎಂಟು ವರ್ಷದಲ್ಲಿ ಎಲ್ಲ ತೆರಿಗೆ ಸೇರಿ ಸಂಗ್ರಹವಾಗಿದ್ದು 19 ಲಕ್ಷ ಕೋಟಿ. ಶೇ.42 ರಷ್ಟು ತೆರಿಗೆ ಪಾಲು ಬರಬೇಕಿತ್ತು. 14 ನೇ ಹಣಕಾಸು ಆಯೋಗದಿಂದ 15 ನೇ ಹಣಕಾಸು ಆಯೋಗಕ್ಕೆ 1.07 ಪಾಲು ಕಡಿಮೆ ಆಯಿತು. 5,495 ಕೋಟಿ ವಿಶೇಷ ಅನುದಾನ ಕೊಡಬೇಕು ಅಂತಾ 15 ನೇ ಹಣಕಾಸು ಆಯೋಗ ಬರೆದಿದೆ. ಫೈನಲ್ ರಿಪೋರ್ಟ್ ಮಾಡುವಾಗ ನಿರ್ಮಲಾ ಸೀತಾರಾಮನ್, ಕೊಡಿಸಬೇಕಿತ್ತು. ಅದನ್ನ ಕೊಡಲಿಲ್ಲ. ಯಾರು ತಪ್ಪಿಸಿದ್ದು ನರೇಂದ್ರ ಮೋದಿ.
ಇದನ್ನೂ ಓದಿ: ಪ್ರಧಾನಿ ಮೋದಿ ಉದ್ಘಾಟಿಸಿದ ಐಐಎಸ್ಸಿ ಸಂಶೋಧನಾ ಕೇಂದ್ರಕ್ಕೆ ಹಣ ಕೊಟ್ಟವರಾರು?
ಆಕ್ಸಿಜನ್ ಕೊಡೊಕ್ಕೆ ಆಗ್ದೆ ಇರೋರು ಈಗ ಯೋಗ ಮಾಡುತ್ತಿದ್ದಾರೆ. ಮೈಸೂರಿನಲ್ಲಿ 40% ಪರ್ಸೇಂಟೇಜ್ ಬಗ್ಗೆ ಗುತ್ತಿಗೆದಾರರು ಪತ್ರ ಬರೆದಿದ್ರು ಈ ಬಗ್ಗೆ ಉತ್ತರ ನೀಡಲಿ. ಮೈ ನಹೀ ಖಾವುಂಗಾ, ಖಾನೆ ಭೀ ನಹೀ ದೂಂಗಾ ಎಂದಿದ್ರು. ಇವತ್ತು ಸಬ್ ಅರ್ಬನ್ ಬಗ್ಗೆ ಅನಂತ್ ಕುಮಾರ್ ಇದ್ದಾಗಿನಿಂದ ಹೇಳಿಕೊಂಡು ಬರ್ತಿದ್ದಾರೆ. ನಾವು ಸಿಎಂ ಆಗಿದ್ದಾಗಿನಿಂದ ಹೇಳಿಕೊಂಡೇ ಬರ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಲೂಟಿ ಮಾಡಿತ್ತಿದೆ. ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಮೋದಿಯವರು ಪರವಾನಿಗೆ ನೀಡುವ ಹಾಗೆ ಸುಮ್ಮನೆ ಇದ್ದಾರೆ. ನರೇಂದ್ರ ಮೋದಿಯವರು ಪಾಪ ಪ್ರಧಾನಿಯವರು. ನಮ್ಮ ನಾಡಿಗೆ ಬರಲಿ, ಆದರೆ ಇದಕ್ಕೆಲ್ಲ ಉತ್ತರ ನೀಡಲಿ. ಅಗ್ನಿಪಥ್ ಇದೆಯಲ್ಲ, ನಾಲ್ಕು ವರ್ಷಕ್ಕೆ ಮಾತ್ರ ನೇಮಕ ಮಾಡಿಕೊಳುತ್ತೇವೆ ಎಂದು ಹೇಳುತ್ತಿದ್ದಾರೆ. ನಾಲ್ಕು ವರ್ಷ ಆದ್ಮೇಲೆ ಅವರಿಗೆ ಪೆಂಶ್ನನ್ ನೀಡಲ್ಲ ಎಂದು ಹರಿ ಹಾಯ್ದಿರು.
ದಕ್ಷಿಣ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ್ರು ವಿಕ್ಟರಿ
ಮಧು ಮಾದೇಗೌಡ್ರು ದಕ್ಷಿಣ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಕ್ಟರಿ ಸಾಧಿಸಿದ್ದಾರೆ. ಬಿಜೆಪಿನವರು ಹಾಗೂ ಜೆಡಿಎಸ್ನವರು ತಮ್ಮ ಭದ್ರಕೋಟೆ ಅಂದುಕೊಂಡಿದ್ದರು. 12 ಸಾವಿರ ಮತಗಳಿಂದ ಬಿಜೆಪಿಯನ್ನ ಸೋಲಿಸಿದ್ದಾರೆ. ಜೆಡಿಎಸ್ ಪಕ್ಷವನ್ನ 20 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಮಂಡ್ಯದಲ್ಲಿ ಏಳು ಕ್ಷೇತ್ರದಲ್ಲೂ ಜೆಡಿಎಸ್ಎಂಎಲ್ ಗಳಿದ್ದಾರೆ. ಹಾಸನದಲ್ಲಿ ಆರು ಜೆಡಿಎಸ್ ಶಾಸಕರು ಇದ್ದಾರೆ. ನಮ್ಮಗೆ ಎಂಎಲ್ಎಗಳು ಇಲ್ಲದೆ ಇದ್ದರು ಸಹ, ಈ ಜಯ ನಮ್ಮ ಕಾರ್ಯಕರ್ತರಿಗೆ ಹೆಚ್ಚು ಉತ್ಸಾಹ ತಂದುಕೊಟ್ಟಿದೆ. ಚುನಾವಣೆಗೆ ಅಭ್ಯರ್ಥಿಯನ್ನ ಮುಂಚಿತವಾಗಿ ಘೋಷಣೆ ಮಾಡಿದ್ದಕ್ಕೆ ಸಹಾಯವಾಗಿದೆ. ಮುಂದಿನ ಚುನಾವಣೆಗೂ ಮುಂಚೆಯೇ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:38 pm, Mon, 20 June 22