Viral Video: ಸೋರುತಿಹುದು ಚಿನ್ನಸ್ವಾಮಿ ಸ್ಟೇಡಿಯಂ ಛಾವಣಿ: ಬಿಸಿಸಿಐ ಫುಲ್ ಟ್ರೋಲ್

India vs SA 5th T20: ಬಿಸಿಸಿಐ ಐಪಿಎಲ್‌ನ ಮಾಧ್ಯಮ ಹಕ್ಕನ್ನು 48,000 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಿದೆ. ಈ ಬಾರಿ ಲಾಭದ ಮೊತ್ತವನ್ನು ಕ್ರೀಡಾಂಗಣ ಮತ್ತು ಸೌಲಭ್ಯಗಳನ್ನು ಸುಧಾರಿಸಲು ಬಳಸಲಾಗುವುದು.

Viral Video: ಸೋರುತಿಹುದು ಚಿನ್ನಸ್ವಾಮಿ ಸ್ಟೇಡಿಯಂ ಛಾವಣಿ: ಬಿಸಿಸಿಐ ಫುಲ್ ಟ್ರೋಲ್
M Chinnaswamy Stadium
Follow us
TV9 Web
| Updated By: Digi Tech Desk

Updated on:Jun 20, 2022 | 2:55 PM

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa t20) ನಡುವಿನ 5 ಟಿ20 ಪಂದ್ಯಗಳ ಸರಣಿಯು 2-2 ಅಂತರದೊಂದಿಗೆ ಅಂತ್ಯವಾಗಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸರಣಿಯ 5ನೇ ಹಾಗೂ ಅಂತಿಮ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದರೊಂದಿಗೆ 5 ಪಂದ್ಯಗಳ ಸರಣಿಯು ಸಮಬಲದೊಂದಿಗೆ ಅಂತ್ಯಗೊಂಡಿತು. ಆದರೆ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಇದೀಗ ಚಿನ್ನಸ್ವಾಮಿ ಸ್ಟೇಡಿಯಂನ ಅವ್ಯವಸ್ಥೆ ಕೂಡ ಬೆಳಕಿಗೆ ಬಂದಿದೆ. ಒಂದೆಡೆ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದ್ದರೆ, ಮತ್ತೊಂದೆಡೆ ಮಳೆ ನಿಂತ ಬಳಿಕ ಪಂದ್ಯ ಮುಂದುವರೆಯುವ ನಿರೀಕ್ಷೆಯಲ್ಲಿ ಕ್ರಿಕೆಟ್​ ಪ್ರೇಮಿಗಳು ಸ್ಟೇಡಿಯಂನಲ್ಲಿ ಕಾದು ಕುಳಿತಿದ್ದರು.

ವಾಸ್ತವವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆ ಆರಂಭವಾಗುವವರೆಗೂ ಎಲ್ಲವೂ ಸರಿಯಾಗಿತ್ತು. ಆದರೆ ಮಳೆ ಆರಂಭವಾದ ಕೂಡಲೇ ಪ್ರೇಕ್ಷಕರು ತಮ್ಮ ಆಸನಗಳನ್ನು ಬಿಟ್ಟು ಓಡಲು ಪ್ರಾರಂಭಿಸಿದರು. ಮಳೆಯಿಂದಾಗಿ ಕ್ರೀಡಾಂಗಣದ ಮೇಲ್ಛಾವಣಿ ಸೋರಲಾರಂಭಿಸಿತು. ಇದರಿಂದ ಪಂದ್ಯವನ್ನು ಎದುರು ನೋಡುವುದಿರಲಿ, ಮಳೆಯಿಂದಾಗಿ ಸ್ಟೇಡಿಯಂನಲ್ಲಿ ಕೂರುವುದು ಕೂಡ ಕಷ್ಟವಾಯಿತು. ಅಷ್ಟೇ ಅಲ್ಲದೆ ಟಿಕೆಟ್ ನೀಡಿ ಪಂದ್ಯವಿಲ್ಲದ ನೋವು ಒಂದೆಡೆಯಾದರೆ, ಸ್ಟೇಡಿಯಂನಲ್ಲಿ ಅವ್ಯವಸ್ಥೆಯಿಂದ ಮಳೆಯಿಂದ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಮತ್ತೊಂದೆಡೆ. ಇದೀಗ ಚಿನ್ನಸ್ವಾಮಿ ಸ್ಟೇಡಿಯಂ ಮೇಲ್ಛಾವಣಿ ಸೋರುತ್ತಿರುವ ವಿಡಿಯೋವನ್ನು ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
On This Day: ಏಕದಿನ ವಿಶ್ವಕಪ್​: ಕೇವಲ 45 ರನ್​ಗೆ ಆಲೌಟ್..!
Image
Heinrich Klaasen: ಬಡವರ ಧೋನಿ, RCB ಆಟಗಾರ…ಯಾರು ಈ ಹೆನ್ರಿಕ್ ಕ್ಲಾಸೆನ್..?
Image
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Image
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಸ್ಟೇಡಿಯಂನಲ್ಲಿನ ಅವ್ಯವಸ್ಥೆಯ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇಲ್ಲಿ ಪಂದ್ಯವನ್ನು ವೀಕ್ಷಿಸಲು ಬೋರ್ಡ್ ಪ್ರೇಕ್ಷಕರಿಂದ ಟಿಕೆಟ್‌ಗೆ 5 ರಿಂದ 25 ಸಾವಿರ ರೂಪಾಯಿ ತೆಗೆದುಕೊಳ್ಳಲಾಗುತ್ತದೆ. ಆದರೆ ಯಾವುದೇ ವ್ಯವಸ್ಥೆಯನ್ನೂ ಕೂಡ ಮಾಡುವುದಿಲ್ಲ. ಇದು ಕೇವಲ ಸ್ಯಾಂಪಲ್​ ಅಷ್ಟೇ ಎಂದು ವ್ಯಕ್ತಿಯೊಬ್ಬರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಸಮಸ್ಯೆಗಳ ಬಗ್ಗೆ ದೂರಿದ್ದಾರೆ. ಇನ್ನು ಕೆಲವರು ಶ್ರೀಮಂತ ಕ್ರಿಕೆಟ್​ ಸಂಸ್ಥೆಯ ಅವಸ್ಥೆ ಇದು ಎಂದು ಬಿಸಿಸಿಐ ಅನ್ನು ಗೇಲಿ ಮಾಡಿದ್ದಾರೆ.

ಇತ್ತೀಚೆಗೆ ಬಿಸಿಸಿಐ ಐಪಿಎಲ್‌ನ ಮಾಧ್ಯಮ ಹಕ್ಕನ್ನು 48,000 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಿದೆ. ಈ ಬಾರಿ ಲಾಭದ ಮೊತ್ತವನ್ನು ಕ್ರೀಡಾಂಗಣ ಮತ್ತು ಸೌಲಭ್ಯಗಳನ್ನು ಸುಧಾರಿಸಲು ಬಳಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅವ್ಯವಸ್ಥೆಯು ಮಳೆಯಿಂದಾಗಿ ಬಹಿರಂಗವಾಗಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:28 pm, Mon, 20 June 22