ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ.. ಧೂಳು ತಿನ್ನುತ್ತಾ, ಗೋದಾಮಿನಲ್ಲೇ ಬಿದ್ದಿವೆ ಅಂಗವಿಕಲರಿಗೆ ಸೇರಬೇಕಾದ ಬೈಕ್‌ಗಳು

|

Updated on: Jan 11, 2021 | 8:54 AM

ಸರ್ಕಾರ ಅಲ್ಲಿನ ಅಂಗವಿಕಲರಿಗೆ ನೆರವಾಗಲು ತ್ರಿಚಕ್ರ ವಾಹನ ಖರೀದಿಗೆ ಕೋಟಿಗಟ್ಟಲೇ ಹಣ ನೀಡಿತ್ತು. ಅಲ್ಲಿನ ಅಧಿಕಾರಿಗಳು ವಿಕಲಚೇತನರಿಗೆ ನೀಡಲು ನೂರಾರು ಬೈಕ್‌ಗಳನ್ನು ಖರೀದಿಸಿದ್ದಾರೆ. ಆದ್ರೆ ಅಂಗವಿಕಲರಿಗೆ ಸೇರಬೇಕಿದ್ದ ಬೈಕ್‌ಗಳು ಈಗ ಯಾವ ಸ್ಥಿತಿಯಲ್ಲಿವೆ ಗೊತ್ತಾ?

ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ.. ಧೂಳು ತಿನ್ನುತ್ತಾ, ಗೋದಾಮಿನಲ್ಲೇ ಬಿದ್ದಿವೆ ಅಂಗವಿಕಲರಿಗೆ ಸೇರಬೇಕಾದ ಬೈಕ್‌ಗಳು
ಧೂಳು ತಿನ್ನುತ್ತಾ, ಗೋದಾಮಿನಲ್ಲೇ ಬಿದ್ದಿರುವ ಬೈಕ್‌ಗಳು
Follow us on

ರಾಯಚೂರು: ಜಿಲ್ಲಾ ಪಂಚಾಯತ್ ಕಚೇರಿಯ ಗೋದಾಮಿನಲ್ಲಿ ಅಂಗವಿಕಲರಿಗಾಗಿ ಖರೀದಿಸಿರುವ ಬೈಕ್‌ಗಳನ್ನೆಲ್ಲಾ ಇರಿಸಲಾಗಿದೆ. ಸುಮಾರು 2 ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಬೈಕ್ ಖರೀದಿಸಿ 8 ತಿಂಗಳಾಗಿದೆ. ಆದ್ರೆ ಇದುವರೆಗೂ ರಾಯಚೂರು ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯತಿ ಕಚೇರಿಗಳಿಗೆ ಸರಬರಾಜು ಆಗಿಲ್ಲ.

ಸುಮಾರು 179 ಗ್ರಾಮ ಪಂಚಾಯತಿ ಕಚೇರಿಗಳ ವ್ಯಾಪ್ತಿಯಲ್ಲಿರುವ ವಿಕಲಚೇತನರು ತ್ರಿಚಕ್ರವಾಹನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ನಿತ್ಯವೂ ಕಚೇರಿಗೆ ಅಲೆದಾಡ್ತಿದ್ದಾರೆ. ಆದ್ರೆ ಯಾರಿಗೂ ತ್ರಿಚಕ್ರವಾಹನ ನೀಡಿಲ್ಲ. ಜಿಲ್ಲಾ ಪಂಚಾಯತ್ ಗೋದಾಮಿನಲ್ಲೆ ಆ ಬೈಕ್​ಗಳು ಅನಾಥವಾಗಿ ಬಿದ್ದಿವೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಅವನರನ್ನ ಕೇಳಿದ್ರೆ, ಗ್ರಾಮ ಪಂಚಾಯತ್ ಚುನಾವಣೆ ನೀತಿ ಸಂಹಿತೆ ಜಾರಿ ಇದ್ದಿದ್ದರಿಂದ ಬೈಕಗಳನ್ನ ವಿತರಣೆ ಮಾಡಲಾಗಿಲ್ಲ ಅಂತೆಲ್ಲಾ ಸಬೂಬು ಹೇಳ್ತಾರೆ.

ಒಟ್ನಲ್ಲಿ ತ್ರಿಚಕ್ರವಾಹನಕ್ಕಾಗಿ ಅರ್ಜಿ ಸಲ್ಲಿಸಿದ ಅಂಗವಿಕಲರಿಗೆ ಬೈಕಗಳನ್ನ ವಿತರಣೆ ಮಾಡದೇ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಬೇಜವಾಬ್ದಾರಿ ತೋರಿಸ್ತಿರೋದು ವಿಕಲಚೇತನರಲ್ಲಿ ಆಕ್ರೊಶ ಮೂಡಿಸಿದೆ. ಇನ್ನಾದ್ರೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಂಡು ಗೋದಾಮಿನಲ್ಲಿ ತುಕ್ಕು ಹಿಡಿಯುತ್ತಿರುವ ಬೈಕಗಳನ್ನ ಅಂಗವಿಕಲರಿಗೆ ವಿತರಣೆ ಮಾಡಲು ಅಗತ್ಯ ಕ್ರಮಕೈಗೊಳ್ತಾರಾ ಕಾದು ನೋಡಬೇಕಷ್ಟೆ.

Published On - 8:51 am, Mon, 11 January 21