ಹುಬ್ಬಳ್ಳಿ, ಮೇ 16: ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದ್ದು, ನಿನ್ನೆ ಬೆಳಗಿನ ಜಾವ ಅಂಜಲಿ (Anjali) ಎಂಬ ಯುವತಿಯನ್ನು ಕುಟುಂಬಸ್ಥರ ಮುಂದೆಯೇ ಭೀಕರವಾಗಿ ಯುವಕನೋರ್ವ ಹತ್ಯೆ ಮಾಡಿದ್ದಾನೆ. ನೇಹಾ ಹತ್ಯೆ ಇನ್ನು ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಕೊಲೆ (Murder) ಆಗಿರುವುದು ಹುಬ್ಬಳ್ಳಿ ಧಾರವಾಡ ನಗರ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಲಾಗುತ್ತಿದೆ. ಇದೆಲ್ಲದರ ಮಧ್ಯೆ ಸರ್ಕಾರದ ವಿರುದ್ದ ಸ್ವ ಪಕ್ಷದ ಮುಖಂಡರಿಂದಲೇ ಅಸಮಾಧಾನ ವ್ಯಕ್ತವಾಗಿದ್ದು, ಹು-ಧಾ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ಅಧಿಕಾರಿಗಳ ಬದಲಾವಣೆಗೆ ಪಟ್ಟು ಹಿಡಿಯಲಾಗಿದೆ.
ಈ ಕುರಿತಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ಮಠ ಅವರು ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ. ನೇಹಾ ಹಿರೇಮಠ ಕೊಲೆಯ ನಂತರ ಪೋಷಕರು ಭಯದ ವಾತಾವರಣದಲ್ಲಿದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಅವಳಿ ನಗರಕ್ಕೆ ಖಡಕ್ ಅಧಿಕಾರಿಗಳ ನೇಮಕ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಲಾಗಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹುಬ್ಬಳ್ಳಿಯಲ್ಲಿ ಅಪರಾಧ ಸಂಖ್ಯೆ ಹೆಚ್ಚುತ್ತಿದ್ದು, ಅವಳಿನಗರದ ಪೊಲೀಸ್ ವೈಫಲ್ಯದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಕಾರಣ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಿಂದ ವರ್ಗಾವಣೆ ಮಾಡಿ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸಬೇಕು ಎಂದು ಕೇಳಿಕೊಳ್ಳಲಾಗಿದೆ.
ಇದನ್ನೂ ಓದಿ: ಅಂಜಲಿ ಹತ್ಯೆ: ದೂರು ಬಂದಿದ್ರೂ ನಿರ್ಲಕ್ಷ್ಯ, ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್-ಪೇದೆ ಸಸ್ಪೆಂಡ್
ಕುಮಾರಿ ನೇಹಾ ಹಿರೇಮಠ ಸಾವಿನ ನಂತರ ವಿದ್ಯಾಭ್ಯಾಸ, ಉದ್ಯೋಗಗಳಿಗೆ ಹೆಣ್ಣು ಮಕ್ಕಳನ್ನು ಕಳುಹಿಸಲು ಪಾಲಕರು ಹಾಗೂ ಕುಟುಂಬಸ್ಥರು ಹಿಂಜರಿಯುವ ಸಮಯ ಇಲ್ಲಿ ನಿರ್ಮಾಣವಾಗಿದ್ದು, ಪದೇ ಪದೇ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಯುವತಿಯರ ಕೊಲೆ ಪ್ರಕರಣಗಳಿಂದ ಮಹಿಳೆಯರು ಮತ್ತು ಮಕ್ಕಳು ಮತ್ತಷ್ಟು ಭಯಭೀತರಾಗಿ ಜೀವನ ನಡೆಸುವ ಸಂದರ್ಭ ನಿರ್ಮಾಣವಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಅಂಜಲಿ ಹಂತಕನ ಪತ್ತೆಗೆ ಎರಡು ವಿಶೇಷ ತಂಡ ರಚನೆ, ಪೊಲೀಸ್ ಆಯುಕ್ತೆ ಹೇಳಿದ್ದೇನು?
ಮುಖ್ಯವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ರೌಡಿಗಳನ್ನು ಮಟ್ಟ ಹಾಕುವಲ್ಲಿ, ಪುಂಡು ಪೊಕರಿಗಳನ್ನು ನಿಯಂತ್ರಣ ಮಾಡುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದು ಶೀಘ್ರವೇ ಅವಳಿನಗರಕ್ಕೆ ಖಡಕ್ ಅಧಿಕಾರಿಗಳನ್ನು ನೇಮಕ ಮಾಡಿ ಕಾನೂನು ಸುವವ್ಯಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:46 am, Thu, 16 May 24