AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿಯ ಹಿಂದಿನ ಹಿಸ್ಟರಿ ಭಯಾನಕ!

ಮನೆಯಲ್ಲಿ ಮಲಗಿದ್ದ ಯುವತಿಯ ಬರ್ಬರ ಕೊಲೆ ಮಾಡಿರುವಂತಹ ಘಟನೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಅಂಜಲಿ ಅಂಬಿಗೇರ ಬರ್ಬರ ಹತ್ಯೆ ಮಾಡಲಾಗಿದೆ. ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ. ಅಂಜಲಿ ಕೊಲೆ ಮಾಡಿದ ಹಂತಕ ವಿಶ್ವ ಅಲಿಯಾಸ್ ಗಿರೀಶ್​ನ‌ ಹಿನ್ನಲೆ ಭಯಾನಕವಾಗಿದೆ. ವಿಶ್ವ ಮತ್ತು ಆತನ ಸ್ನೇಹಿತ ಶೇಷ್ಯಾ ಒಟ್ಟಿಗೆ ಬುಲೆಟ್ ಬೈಕ್ ಕಳ್ಳತನ ಮಾಡುತ್ತಿದ್ದರು.

ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿಯ ಹಿಂದಿನ ಹಿಸ್ಟರಿ ಭಯಾನಕ!
ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿಯ ಹಿಂದಿನ ಹಿಸ್ಟರಿ ಭಯಾನಕ!
ಶಿವಕುಮಾರ್ ಪತ್ತಾರ್
| Edited By: |

Updated on: May 15, 2024 | 5:29 PM

Share

ಹುಬ್ಬಳ್ಳಿ, ಮೇ 15: ಹುಬ್ಬಳ್ಳಿ ವೀರಾಪುರ ಓಣಿಯ 21 ವರ್ಷ ಅಂಜಲಿ (Anjali) ಎಂಬ ಯುವತಿಯನ್ನು ವಿಶ್ವ ಅಲಿಯಾಸ್ ಗೀರಿಶ್ ಎಂಬ ಯುವಕ ಭೀಕರವಾಗಿ ಹತ್ಯೆ (Murder) ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಅಂಜಲಿ ಹತ್ಯೆ ಆರೋಪಿ ವಿಶ್ವ ಹಿನ್ನಲೆ ಭಯಾನಕವಾಗಿದೆ. ಅಷ್ಟೇ ಅಲ್ಲದೆ ಆತನ ಸ್ನೇಹಿತ ಶೇಷ್ಯಾ ಕೂಡ ಆರೋಪಿ. ಕೊಲೆ ಆರೋಪಿ ವಿಶ್ವ ಮತ್ತು ಶೇಷ್ಯಾ ಕಳ್ಳತನದ ಆರೋಪಿಗಳಾಗಿದ್ದು, ಒಟ್ಟಿಗೆ ಬುಲೆಟ್ ಬೈಕ್ ಕಳ್ಳತನ ಮಾಡುತ್ತಿದ್ದರು. ಹಲವು ವರ್ಷಗಳಿಂದ ಕಳ್ಳತನವನ್ನೇ ವೃತ್ತಿಮಾಡಿಕೊಂಡಿದ್ದರು.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬಿಡನಾಳ ಬಳಿ ಯುವಕ ಸದ್ದಾಂ ಕೊಲೆ ಪ್ರಕರಣದಲ್ಲಿ 3 ದಿನದ ಹಿಂದೆ ಶೇಷ್ಯಾ ಬಂಧನವಾಗಿದ್ದ. ಸದ್ದಾಂನನ್ನು ಶೇಷ್ಯಾ ಕೊಂದ ನಂತರ ಅಂಜಲಿ ಕೊಲೆಗೆ ತನ್ನ ಸ್ನೇಹಿತನಂತೆಯೇ ಕೊಲೆ ಮಾಡಬೇಕೆಂದು ವಿಶ್ವನಿಂದ ಸಂಚು ರೂಪಿಸಲಾಗಿತ್ತು. ಇಂದು ಅಂಜಲಿಯನ್ನು ಕೊಂದು ವಿಶ್ವ ಅಲಿಯಾಸ್ ಗಿರೀಶ್​ ಪರಾರಿ ಆಗಿದ್ದಾನೆ.

ಇದನ್ನೂ ಓದಿ: ತನ್ನ ಮಗಳಂತೆ ಮತ್ತೋರ್ವ ಯುವತಿ ಹತ್ಯೆ: ಗೃಹ ಸಚಿವರ ವಿರುದ್ಧ ನೇಹಾ ತಂದೆ ನಿರಂಜನ ಕೆಂಡಾಮಂಡಲ

ಹತ್ಯೆಯಾದ ಅಂಜಲಿ ಮತ್ತು ಆರೋಪಿ ವಿಶ್ವ ಸಹಪಾಠಿಗಳಾಗಿದ್ದು, ಅಂಜಲಿ ಜೊತೆಗೆ ಒಡನಾಟ ಹೊಂದಿದ್ದ ಎನ್ನಲಾಗಿದೆ. ಇಂದು ಬೆಳಗಿನ ಜಾವಾ ಏಕಾಏಕಿ ಅಂಜಲಿ ಮನೆಯ ಬಾಗಿಲು ಬಡಿದ್ದಾನೆ. ಅಂಜಲಿಯೇ ಬಾಗಿಲು ತೆರಿದ್ದಾಳೆ. ಮೊದಲಿಗೆ ಅಂಜಲಿ ಅಜ್ಜಿ ಮತ್ತು ಸಹೋದರಿಯರ ಜೊತೆಗೆ ಮಾತನಾಡಿದ ವಿಶ್ವ, ಬಳಿಕ ಸ್ವಲ್ಪ ಪರ್ಸನಲ್ ಮಾತನಾಡಬೇಕು ಅಂತ ಅಂಜಲಿಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಏಕಾಏಕಿ ಚಾಕು ಹಾಕಲು ಶುರು ಮಾಡಿದ್ದಾನೆ.

ಇದನ್ನು ಅಂಜಲಿ ಕುಟುಂಬಸ್ಥರು ತಡೆಯಲು ಮುಂದಾದರು ಮನೆಯ ತುಂಬೆಲ್ಲಾ ಅಂಜಲಿ ಎಳೆದಾಡಿ ಚಾಕುವಿನಿಂದ ಮನಬಂದಂತೆ ಚುಚ್ಚಿದ ವಿಶ್ವ, ಅಂಜಲಿ ಸತ್ತ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇನ್ನೂ ಆರೋಪಿ ವಿಶ್ವ ಒಂದು ವಾರದ ಹಿಂದೆಯೆ ಅಂಜಲಿಗೆ ಜೀವ ಬೆದರಿಕೆ ಹಾಕಿದ್ದು, ನನ್ನ ಜೊತೆಗೆ ಬಾರದಿದ್ದ್ರೆ ನೇಹಾ ತರ ಕೊಲೆ ಮಾಡುವೆ ಅಂತ ವಾರ್ನಿಂಗ್ ಮಾಡಿದ್ದ ಎನ್ನಲಾಗಿದೆ. ಕೂಡಲೇ ಅಂಜಲಿ ಕುಟುಂಬಸ್ಥರು ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಆದರೆ ಪೊಲೀಸರು ಅಂಜಲಿ ಕುಟುಂಬಸ್ಥರಿಗೆ ಬೈದು ನಿಮ್ಮದು ಮೂಢನಂಬಿಕೆ ಆಗೇನು ಆಗಲ್ಲ ಹೋಗಿ ಅಂತ ನಿರ್ಲಕ್ಷ್ಯ ತೋರಿದ್ದಾರೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರು.

ಇದನ್ನೂ ಓದಿ: ಅವತ್ತು ಬೆಂಡಿಗೇರಿ ಪೊಲೀಸ್ರು ಕರೆದು ವಿಚಾರಣೆ ಮಾಡಿದ್ರೆ ಅಂಜಲಿ ಹತ್ಯೆಯಾಗ್ತಿರಲಿಲ್ಲ: ಮಹೇಶ್ ಟೆಂಗಿನಕಾಯಿ

ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ನಿವಾಸದ ಬಳಿ ಸ್ಥಳೀಯರಿಂದ ಪ್ರತಿಭಟನೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ‌ ಶಾಸಕ ಮಹೇಶ್ ಟೆಂಗಿನಕಾಯಿ ಭಾಗಿಯಾಗಿದ್ದಾರೆ. ನೇಹಾ ತಂದೆ ನಿರಂಜನ ಹಿರೇಮಠ ಸಾಥ್ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.