Neha Murder Case: ಮೇ 1 ರಂದು ಹುಬ್ಬಳ್ಳಿಯ ನೇಹಾ ಮನೆಗೆ ಅಮಿತ್ ಶಾ ಭೇಟಿ: ಮುರಗೇಶ್ ನಿರಾಣಿ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 28, 2024 | 10:13 PM

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡುವ ಮೂಲಕ ನಿರಂಜನ ಹಾಗೂ ತಾಯಿ ಗೀತಾ ಹಿರೇಮಠ ಅವರಿಗೆ ಮಾಜಿ ಸಚಿವ ಮುರಗೇಶ್ ನಿರಾಣಿ ಇಂದು ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೇಹಾ ಹತ್ಯೆಯನ್ನು ನಾನು ಖಂಡಿಸಿಸುತ್ತೇನೆ. ಮೇ 1 ರಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ನಿರಂಜನ ಅವರ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

Neha Murder Case: ಮೇ 1 ರಂದು ಹುಬ್ಬಳ್ಳಿಯ ನೇಹಾ ಮನೆಗೆ ಅಮಿತ್ ಶಾ ಭೇಟಿ: ಮುರಗೇಶ್ ನಿರಾಣಿ
ಅಮಿತ್ ಶಾ, ಮುರಗೇಶ್ ನಿರಾಣಿ
Follow us on

ಹುಬ್ಬಳ್ಳಿ, ಏಪ್ರಿಲ್​ 28: ಮೇ 1 ರಂದು ನಮ್ಮ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ (Amit Shah) ಅವರು ನಿರಂಜನ ಅವರ ಮನೆಗೆ ಭೇಟಿ ನೀಡಲಿದ್ದಾರೆ. ನೇಹಾ (Neha Murder Case) ಕುಟುಂಬಸ್ಥರಿಗೆ ಸಾಂತ್ವನ ಮಾಡಲಿದ್ದಾರೆ ಎಂದು ಮಾಜಿ ಸಚಿವ ಮುರಗೇಶ್ ನಿರಾಣಿ ಹೇಳಿದ್ದಾರೆ. ನಗರದ ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡುವ ಮೂಲಕ ನಿರಂಜನ ಹಾಗೂ ತಾಯಿ ಗೀತಾ ಹಿರೇಮಠ ಅವರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೇಹಾ ಹತ್ಯೆಯನ್ನು ನಾನು ಖಂಡಿಸಿಸುತ್ತೇನೆ. ಅಮಿತ್ ಶಾ ಅವರು ಬಂದಾಗ ಈ ಬಗ್ಗೆ ಚರ್ಚೆ ಮಾಡಿ ಮುಂದಿನ ತನಿಖೆ ಬಗ್ಗೆ ಹೇಗೆ ಎನ್ನುವುದನ್ನು ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು: ಮುರಗೇಶ್ ನಿರಾಣಿ ಆಗ್ರಹ

ಹತ್ಯೆ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಈ ಕುಟುಂಬಕ್ಕೆ ನ್ಯಾಯ ಸಿಗಬೇಕು. ತಾಯಿ ಮುಂದೆಯೇ ಈ ರೀತಿ ಹತ್ಯೆ ಆಗುತ್ತೆ ಅಂದರೆ ಆ ಕುಟುಂಬಕ್ಕೆ ಎಷ್ಟು ನೋವು ಆಗಿರಬೇಕು. ಹತ್ಯೆ ಮಾಡಿರುವ ಯುವಕ ಬಗ್ಗೆ ತನಿಖೆ ಮಾಡುತ್ತಿರುವ ಅಧಿಕಾರಿಗಳು ಮಾಹಿತಿ ಕಲೆ ಹಾಕಬೇಕು. ಆತನ ಹಿಂದೆ ಯಾರು ಇದ್ದಾರೆ ಯಾರ ಕೈವಾಡವಿದೆ ಅನ್ನೋದನ್ನ ತನಿಖೆ ನಡೆಸಬೇಕು. ಹತ್ಯೆಗೆ ಯಾರು ಪ್ರೇರಣೆ ಕೊಟ್ಟಿದ್ದಾರೆ ಅವರಿಗೂ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಿಎಂಗೆ ಮನವಿ ಬೆನ್ನಲ್ಲೇ ನೇಹಾ ತಂದೆ ನಿರಂಜನ ನಿವಾಸಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆ

ಕಾಲೇಜ್ ಕ್ಯಾಂಪಸ್ ಒಳಗೆ ಇಂತಹ ಘಟನೆಗಳು ಮುಂದೆ ಆಗಬಾರದು ಅದಕ್ಕೆ ಸ್ಪೆಷಲ್ ಆ್ಯಕ್ಟ್ ತರಬೇಕು. ಆವಾಗ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು. ನಿರಂಜನ ಅವರು ಕಾಂಗ್ರೆಸ್ ಕಾರ್ಪೊರೇಟರ್​ ಇದ್ದಾರೆ. ಅವರಿಗೆ ನಾವು ಸಾಂತ್ವನ ಹೇಳೋದು ಹೇಗೆ ರಾಜಕಾರಣ ಆಗುತ್ತೆ. ಇಂತಹ ಘಟನೆಗಳು ನಡೆದಾಗ ಎಲ್ಲರೂ ಬಂದು ಸಾಂತ್ವನ ಹೇಳುತ್ತಾರೆ ಆದರೆ ಇದನ್ನ ಕಾಂಗ್ರೆಸ್ ರಾಜಕಾರಣ ಅಂತ ಶಬ್ದ ಬಳಸಬಾರದು. ನೇಹಾಗೆ ಆದಂತಹ ಘಟನೆ ಇನ್ನೊಬ್ಬರಿಗೆ ಆಗಬಾರದು ಅನ್ನೋದು ನಮ್ಮ ಬೇಡಿಕೆ ಎಂದಿದ್ದಾರೆ.

ಘಟನೆ ಆದ ನಂತರ ಹತ್ಯೆಯ ಸಾಧಕ ಬಾಧಕಗಳ ಬಗ್ಗೆ ವಿಚಾರ ಮಾಡಿ ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವರು ಹೇಳಿಕೆ ನೀಡಬೇಕಿತ್ತು. ನಂತರ ಅವರ ಮನೆಗೆ ಬಂದು ಸಾಂತ್ವನ ಹೇಳಿ ಕ್ಷಮೆಯಾಚಿಸಿದ್ದಾರೆ. ಸಿಐಡಿ ಅಧಿಕಾರಿಗಳು ಪಕ್ಷಾತೀತವಾಗಿರುತ್ತಾರೆ. ನ್ಯಾಯ ಕೊಡಿಸುವ ದೃಷ್ಟಿಯಿಂದಲೇ ಸಿಎಂ ಅವರು ಸಿಐಡಿಗೆ ವಹಿಸಿದ್ದಾರೆ. ಹಾಗಾಗಿ ಯಾರಿಗೂ ಇದರಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶವಿರೋದಿಲ್ಲ.

ಇದನ್ನೂ ಓದಿ: ಹತ್ಯೆಯಾದ ನೇಹಾ ಮನೆಗೆ ಸಿಎಂ ಭೇಟಿ, ನಿರಂಜನ್ ಮನವಿಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು?

ಸದ್ಯ ತನಿಖೆ ನಡೆಯುತ್ತಿದೆ ನಡೆಯಿಲಿ. ತನಿಖೆ ನಮಗೆ ಸಮರ್ಪಕವಾಗಿಲ್ಲ ಅನಿಸಿದರೆ ನಾವು ಮುಂದೆ ಹೋರಾಟ ಮಾಡುತ್ತೇವೆ. ಒಂದು ವೇಳೆ ತನಿಖೆಯ ದಾರಿ ಯಾರಾದರೂ ತಪ್ಪಿಸುವ ಕೆಲಸ ಮಾಡಿದರೂ ಕೂಡ ಉಗ್ರವಾದ ಹೋರಾಟ ಮಾಡಲು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.