ನೇಹಾ ಹತ್ಯೆ ಖಂಡಿಸಿ ಸದ್ಭಾವ ವೇದಿಕೆಯಿಂದ ಹುಬ್ಬಳ್ಳಿಯಲ್ಲಿ ಬೃಹತ್​ ಪಂಜಿನ ಮೆರವಣಿಗೆ

ಗುರುವಾರ (ಏ.18) ರಂದು ಮಧ್ಯಾಹ್ನ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಕೊಲೆಯಾಗಿತ್ತು. ಕರಣದ ತನಿಖೆಯನ್ನು ರಾಜ್ಯ ಸರ್ಕಾರ ಅಪರಾಧ ತನಿಖಾ ಇಲಾಖೆಗೆ ನೀಡಿದೆ. ಈ ಮಧ್ಯೆ ಹುಬ್ಬಳ್ಳಿಯ ಸದ್ಭಾವ ವೇದಕೆ ಬೃಹತ ಪಂಜಿನ ಮೆರವಣಿಗೆ ನಡೆಸಲು ನಿರ್ಧರಿಸಿದೆ.

ನೇಹಾ ಹತ್ಯೆ ಖಂಡಿಸಿ ಸದ್ಭಾವ ವೇದಿಕೆಯಿಂದ ಹುಬ್ಬಳ್ಳಿಯಲ್ಲಿ ಬೃಹತ್​ ಪಂಜಿನ ಮೆರವಣಿಗೆ
ನೇಹಾ ಹಿರೇಮಠ ಹತ್ಯೆ ಖಂಡಿಸಿ ಪ್ರತಿಭಟನೆ
Follow us
ವಿವೇಕ ಬಿರಾದಾರ
|

Updated on:Apr 26, 2024 | 2:55 PM

ಹುಬ್ಬಳ್ಳಿ, ಏಪ್ರಿಲ್​ 26: ನಗರದ ಬಿವಿಬಿ ಕಾಲೇಜು (BVB College) ಆವರಣದಲ್ಲಿ ಕಳೆದ ಗುರುವಾರ (ಏ.18) ರಂದು ಹಾಡುಹಗಲೆ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ (Niranjan Hiremath) ಅವರ ಪುತ್ರಿ, ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಕೊಲೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ನೇಹಾ ಕೊಲೆ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆ (CID) ತನಿಖೆ ನಡೆಸುತ್ತಿದ್ದು, ಆರೋಪಿ ಫಯಾಜ್​ನನ್ನು ವಶಕ್ಕೆ ಪಡೆದುಕೊಂಡಿದೆ. ಈ ಮಧ್ಯೆ ಹುಬ್ಬಳ್ಳಿಯ ಸದ್ಭಾವ ವೇದಿಕೆ ನೇಹಾ ಹತ್ಯೆ ಖಂಡಿಸಿ ನಾಳೆ (ಏ.27) ರಂದು ನಗರದಲ್ಲಿ ಮೌನವಾಗಿ ಪಂಜಿನ ಮೆರವಣಿಗೆ ಮಾಡಲು ನಿರ್ಧರಿಸಿದೆ.

ರಾಷ್ಟ್ರವಿರೋಧಿ ಹಾಗೂ ಜಿಹಾದಿ ಮಾನಸಿಕತೆ ವಿರೋಧಿಸಿ, ಅಮಾಯಕ ನೇಹಾ ಹಿರೇಮಠ ಬರ್ಬರ ಹತ್ಯೆ ಖಂಡಿಸಿ ಹಾಗೂ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಮತ್ತು ಸರ್ಕಾರದ ತುಷ್ಠೀಕರಣದ ನೀತಿಯನ್ನು ವಿರೋಧಿಸಿ ಬೃಹತ ಪ್ರತಿಭಟನಾ ಮೆರವಣಿಗೆಗೆ ಸದ್ಭಾವ ವೇದಿಕೆ ಕರೆ ನೀಡಿದೆ. “ಲವ್​ ಜಿಹಾದ್​ಗೆ ಬಲಿಯಾಗುತ್ತಿದ್ದಾರೆ ಮನೆಯ ಹೆಣ್ಣುಮಕ್ಕಳು ನಿನ್ನೆ ನೇಹಾ ನಾಳೆ ನಮ್ಮ ಮಗಳು!” ಎಂಬ ಘೋಷ ವಾಕ್ಯದೊಂದಿಗೆ ಸದ್ಭಾವ ವೇದಿಕೆ ಮೌನಯುತವಾಗಿ ಪಂಜಿನ ಮೆರವಣಿಗೆ ನಡೆಸಲಿದೆ.

ಮೆರವಣಿಗೆ, ಮೂರುಸಾವಿರ ಮಠದ ಮೈದಾನದಿಂದ ಆರಂಭವಾಗಿ ಮಹಾವೀರ ಓಣಿ – ತುಳಜಾ ಭವಾನಿ ವೃತ್ತ – ದಾಜಿಬಾನ್​ ಪೇಟೆ ಮುಖಾಂತರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಅಂತ್ಯಗೊಳ್ಳಲಿದೆ.

ಇದನ್ನೂ ಓದಿ: ನೇಹಾ ಹಿರೇಮಠಳನ್ನು 14 ಬಾರಿ ಕೊಚ್ಚಿ ಕೊಂದ ಫಯಾಜ್​

ಈ ಬೃಹತ್​ ಪ್ರತಿಭಟನಾ ಮೆರವಣಿಗೆ ಕುರಿತಾಗಿ ಸದ್ಭವ ವೇದಿಕೆ ಸದಸ್ಯ, ಕಾರ್ಯಕ್ರಮ ಸಂಯೋಜಕ ಸುಭಾಷ್​ ಸಿಂಗ್​ ಜಮಾದಾರ ಮಾತನಾಡಿ, “ನೇಹಾ ಹತ್ಯೆ ಪ್ರಕರಣ ಮುನ್ನಲೆ ಮಾಡಿಕೊಂಡು, ಇದುವರೆಗೆ ಲವ್​ ಜಿಹಾದ್​ಗೆ ಬಲಿಯಾದ ಹೆಣ್ಣಮಕ್ಕಳಿಗೆ ನ್ಯಾಯಕೊಡಿಸುವ ನಿಟ್ಟಿನಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ಮುಸ್ಲಿಂ ದಬ್ಬಾಳಿಕೆ, ಸರ್ಕಾರದ ಮುಸ್ಲಿಂ ತುಷ್ಟಿಕರಣ ಮತ್ತು ದೇಶ ವಿರೋಧಿ ಚಟುವಟಿಕೆಗಳನ್ನು ವಿರೋಧಿಸಿ ಪಂಜಿನ ಮೆರವಣಿಗೆ ಮಾಡುತ್ತಿದ್ದೇವೆ. ಅಲ್ಲದೆ ಹಿಂದೂ ಸಾಮಾಜದ ಒಗ್ಗಟ್ಟು ಮತ್ತು ಶಕ್ತಿ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ಹಿಂದೂಗಳು ಒಗ್ಗಟ್ಟಾಗಿದ್ದು, ಜಿಹಾದಿ ಮಾನಸಿಕತೆ ಇರುವವರಿಗೆ ದಿಟ್ಟ ಸಂದೇಶ ನೀಡಲಿದ್ದೇವೆ” ಎಂದು ಹೇಳಿದರು.

ಪ್ರತಿಭಟನಾ ಮೆರಣಿಗೆಗೂ ಮುನ್ನ ಸಭೆ ನಡೆಯಲಿದೆ. ಸಭೆಯ ಸಾನಿಧ್ಯವನ್ನು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗಿಂದ್ರ ಮಹಾ ಸ್ವಾಮಿಗಳು ವಹಿಸಲಿದ್ದಾರೆ. ವಾಗ್ಮಿ, ಯುವಾ ಬ್ರಿಗೇಡ್​ ಸ್ಥಾಪಕ ಚಕ್ರವರ್ತಿ ಸೂಲೆಬೆಲೆ ಮುಖ್ಯ ಭಾಷಣ ಮಾಡಲಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ನ ಶಿವಾನಿ ಶೆಟ್ಟಿ, ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಭಾಗ್ಯಶ್ರೀ ಬೆಳ್ಳೆ ಉಪಸ್ಥಿತಿ ಇರಲಿದ್ದಾರೆ.

ಕಾರ್ಯಕ್ರಮವು ಶನಿವಾರ (ಏ.27) ಸಾಯಂಕಲ 6 ಗಂಟೆಗೆ ಮೂರುಸಾವಿರ ಮಠ ಶಾಲೆಯ ಮೈದಾನದಲ್ಲಿ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:54 pm, Fri, 26 April 24

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ