ಬೆಂಗಳೂರು: ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಕ್ಕೆ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ. ಕಾಲೇಜು ಆರಂಭಿಸುವ ಕುರಿತು ಸರ್ಕಾರದಿಂದ ಗೈಡ್ಲೈನ್ಸ್ ಬಿಡುಗಡೆ ಆಗಿದೆ. ಶೇಕಡಾ 2 ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಕಾಲೇಜು ತೆರೆಯಲು ಸೂಚಿಸಲಾಗಿದೆ. ಏಕಕಾಲದಲ್ಲಿ ಪ್ರಥಮ, ದ್ವಿತೀಯ ಪಿಯು ತರಗತಿ ನಡೆಸುವುದು ಎಂದು ಹೇಳಲಾಗಿದೆ. ವಾರದ ಮೊದಲ 3ದಿನ ಶೇಕಡಾ 50 ರಷ್ಟು ವಿದ್ಯಾರ್ಥಿಗಳಿಗೆ ಕ್ಲಾಸ್ ಮಾಡಬೇಕು. ಶೇಕಡಾ 50 ರಷ್ಟು ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರು ಆಗಬೇಕು. ಉಳಿದ ಶೇಕಡಾ 50 ರಷ್ಟು ವಿದ್ಯಾರ್ಥಿಗಳಿಗೆ ಮನೆಯಲ್ಲೇ ಆನ್ಲೈನ್ ತರಗತಿ ನಡೆಸುವುದು. ಗುರುವಾರ, ಶುಕ್ರವಾರ, ಶನಿವಾರ ಉಳಿದ ಮಕ್ಕಳಿಗೆ ಕ್ಲಾಸ್ ನಡೆಸುವ ಬಗ್ಗೆ ಸೂಚನೆ ಕೊಡಲಾಗಿದೆ.
ಆಗಸ್ಟ್ 23 ರಿಂದ ಪಿಯು ಕಾಲೇಜು ತರಗತಿಗಳು ಆರಂಭವಾಗಲಿದೆ. ಪ್ರಥಮ, ದ್ವಿತೀಯ ಪಿಯುಸಿ ತರಗತಿ ಏಕಕಾಲಕ್ಕೆ ಆರಂಭ ಆಗಲಿದೆ. ಪ್ರಥಮ, ದ್ವಿತೀಯ ಪಿಯುಸಿ ಆರಂಭಕ್ಕೆ ಮಾರ್ಗಸೂಚಿ ಪ್ರಕಟ ಆಗಿದೆ. ಕಾಲೇಜು ಆರಂಭಿಸುವ ಕುರಿತು ಸರ್ಕಾರದಿಂದ ಗೈಡ್ಲೈನ್ಸ್ ನೀಡಲಾಗಿದೆ. ಅದರಂತೆ, ಶೇಕಡಾ 2 ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಕಾಲೇಜು ಓಪನ್ ಆಗಲಿದೆ. ಏಕಕಾಲದಲ್ಲಿ ಪ್ರಥಮ, ದ್ವಿತೀಯ ಪಿಯುಸಿ ತರಗತಿ ನಡೆಸುವುದು ಎಂದು ಹೇಳಲಾಗಿದೆ. ವಾರದ ಮೊದಲ 3ದಿನ ಶೇಕಡಾ 50 ರಷ್ಟು ವಿದ್ಯಾರ್ಥಿಗಳಿಗೆ ಮತ್ತು ನಂತರ ಶೇಕಡಾ 50 ರಷ್ಟು ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರು ಆಗಬಹುದು.
ಕಾಲೇಜು ಆರಂಭಕ್ಕೆ ಸೂಚಿಸಿದ ಮಾರ್ಗಸೂಚಿಯ ಇತರೆ ಅಂಶಗಳು ಇಲ್ಲಿದೆ:
ಇದನ್ನೂ ಓದಿ: SSLC Exams: ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ; ವಿವರ ಇಲ್ಲಿದೆ
ಶೇಕಡಾ 2ಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ಕಂಡುಬಂದರೆ ಅಂತಹ ಶಾಲೆ ಮುಚ್ಚಲಾಗುವುದು: ಕೆ ಸುಧಾಕರ್
Published On - 8:13 pm, Wed, 18 August 21