ಶೇಕಡಾ 2ಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ಕಂಡುಬಂದರೆ ಅಂತಹ ಶಾಲೆ ಮುಚ್ಚಲಾಗುವುದು: ಕೆ ಸುಧಾಕರ್
Dr K Sudhakar: ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಿಗೆ ವಿಶೇಷವಾಗಿ ಗಮನಿಸಲಾಗುವುದು. ಮೂರನೇ ಅಲೆಯಲ್ಲಿ ಇಂತಹ ಮಕ್ಕಳನ್ನು ರಕ್ಷಿಸುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ತೆವೆ ಎಂದು ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚು ಜನ ಹೋಂ ಐಸೋಲೇಷನ್ನಲ್ಲಿ ಇದ್ದಾರೆ, ಸೋಂಕಿನ ಪರೀಕ್ಷೆಯ ಟಾರ್ಗೆಟ್ ಕಂಪ್ಲೀಟ್ ಮಾಡುವಂತೆ ಸೂಚನೆ ನೀಡಿದ್ದೇವೆ, ಮಕ್ಕಳಲ್ಲಿ ಮೂತ್ರ ಪಿಂಡ, ಶ್ವಾಸಕೋಶ, ಅಪೌಷ್ಟಿಕತೆ ಇನ್ನೂ ಮುಂತಾದ ಸಮಸ್ಯೆಗಳಿರುವುದನ್ನು ಗುರುತಿಸಲಾಗಿದೆ. ಸದ್ಯದಲ್ಲಿಯೇ ಇದ್ದಕ್ಕೆ ಬೇಕಾದ ಕ್ರಮವನ್ನು ವಹಿಸುತ್ತೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಸಲಹೆಯಂತೆ ಆರೋಗ್ಯ ನಂದನ ಕಾರ್ಯಕ್ರಮದ ರೂಪುರೇಷೆ ಹೇಳಿದ್ದೇನೆ. ಇನ್ನೊಂದು ವಾರದಲ್ಲಿ ಆ ಕಾರ್ಯಕ್ರಮದ ಉದ್ಘಾಟನೆ ಆಗಲಿದೆ. ಒಂದೂವರೆ ಕೋಟಿಗೂ ಹೆಚ್ವು ಮಕ್ಕಳು ರಾಜ್ಯದಲ್ಲಿ ಇದ್ದಾರೆ. ಅಷ್ಟೂ ಮಕ್ಕಳ ಸ್ಕ್ರೀನಿಂಗ್ ಮಾಡುತ್ತೆವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಿಗೆ ವಿಶೇಷವಾಗಿ ಗಮನಿಸಲಾಗುವುದು. ಮೂರನೇ ಅಲೆಯಲ್ಲಿ ಇಂತಹ ಮಕ್ಕಳನ್ನು ರಕ್ಷಿಸುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ತೆವೆ ಎಂದು ಸುಧಾಕರ್ ತಿಳಿಸಿದ್ದಾರೆ.
ಹಬ್ಬ ಹರಿದಿನಗಳಲ್ಲಿ ಜನರು ಬಹಳಷ್ಟು ಜಾಗೃತಿಯಿಂದ ನಡೆದುಕೊಳ್ಳಬೇಕು. ಹಬ್ಬ ಹರಿದಿನ ಮತ್ತು ಸಭೆಗಳಲ್ಲಿ ಹೆಚ್ಚು ಜನ ಸೇರಬಾರದು. ರಾಜ್ಯದಲ್ಲಿ ಎಲ್ಲರೂ ಸಂಪೂರ್ಣ ಲಸಿಕಾಕರಣ ಆಗುವವರೆಗೂ ಎಚ್ಚರಿಕೆ ವಹಿಸಬೇಕು. ಶಾಲೆ ಆರಂಭ ವಿಚಾರವಾಗಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಕೂಡ ಈಗಾಗಲೇ ಎಲ್ಲಾ ಸರ್ಕ್ಯುಲರ್ಗಳನ್ನು ಆಯಾ ಜಿಲ್ಲೆಗೆ ಕಳಿಸಿದ್ದಾರೆ. ಶಾಶ್ವತವಾಗಿ ಮಕ್ಕಳನ್ನು ಮನೆಯಲ್ಲಿಯೇ ಬಿಡಲು ಆಗುವುದಿಲ್ಲ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿ, ಅವರ ಭವಿಷ್ಯ, ರೂಪಿಸುವುದು ಸರಕಾರದ ಮುಂದಿರುವ ಜವಬ್ದಾರಿ. ಈಗಾಗಲೇ ಅನೇಕ ರಾಜ್ಯಗಳು ಶಾಲೆಗಳನ್ನು ಪ್ರಾರಂಭ ಮಾಡಿವೆ. ನಾವು ಪ್ರಾಯೋಗಿಕ ಶಾಲೆಗಳನ್ನು ಓಪನ್ ಮಾಡಬೇಕಿದೆ. ಶಾಲೆಗಳಲ್ಲಿ ಶೇಕಡಾ ಎರಡಕ್ಕಿಂತ ಹೆಚ್ಚು ಕೇಸ್ ಬಂದರೆ ಅಂತಹ ಶಾಲೆಗಳನ್ನು ಮುಚ್ಚಲಾಗುವುದು ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.
ಆರೋಗ್ಯ ಇಲಾಖೆ ವ್ಯಾಪ್ತಿಯ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗಾವಣೆಗೆ ಸೂಚನೆ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿರುವ ವೈದ್ಯಾಧಿಕಾರಿಗಳು, ಇತರೆ ಸಿಬ್ಬಂದಿಯನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಕಾಯ್ದೆ- 2011 ರಂತೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಆರೋಗ್ಯ ಇಲಾಖೆ ಎಸಿಎಸ್‌ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಕೊರೊನಾ 2ನೇ ಅಲೆಗೆ ತುತ್ತಾದ ಶೇ.95.6ರಷ್ಟು ರೋಗಿಗಳು ಗುಣಮುಖ: ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ
ಕರ್ನಾಟಕದ 9 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಲು ರಾಜ್ಯ ಸರ್ಕಾರ ನಿರ್ಧಾರ: ಆರೋಗ್ಯ ಸಚಿವ ಸುಧಾಕರ್