AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಸಂದೇಶ; ಮುರುಗೇಶ್ ನಿರಾಣಿ ವಿರುದ್ಧ ಎಫ್​ಐಆರ್ ಸಾಧ್ಯತೆ

ಗೋವಿಂದರಾಮ್ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. ಇದೀಗ, ಜನಪ್ರತಿನಿಧಿಗಳ ಕೋರ್ಟ್ ಆದೇಶ ಹಿನ್ನೆಲೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ತನಿಖೆ ನಡೆಯಲಿದೆ. ಹಾಗೂ ಎಫ್ಐಆರ್ ಆಗುವ ಸಾಧ್ಯತೆ ಇದೆ ಎಂದೂ ಅಂದಾಜಿಸಲಾಗಿದೆ.

ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಸಂದೇಶ; ಮುರುಗೇಶ್ ನಿರಾಣಿ ವಿರುದ್ಧ ಎಫ್​ಐಆರ್ ಸಾಧ್ಯತೆ
ಸಚಿವ ಮುರುಗೇಶ್​ ನಿರಾಣಿ
TV9 Web
| Edited By: |

Updated on: Aug 18, 2021 | 10:24 PM

Share

ಬೆಂಗಳೂರು: ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಸಂದೇಶ ವಿಚಾರಕ್ಕೆ ಸಂಬಂಧಿಸಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ತನಿಖೆಗೆ ಕೋರ್ಟ್ ಆದೇಶ ನೀಡಿದೆ. ಸಚಿವ ಮುರುಗೇಶ್ ನಿರಾಣಿ ಮೇಲಿರುವ ಈ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಬೇಕು ಎಂದು ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ ಕೋರ್ಟ್ ಸೂಚನೆ ಕೊಟ್ಟಿದೆ. ಸಪ್ಟೆಂಬರ್ 13 ರ ಒಳಗೆ ತನಿಖಾ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಕಳೆದ ವರ್ಷ ವಾಟ್ಸಾಪ್ ಗ್ರೂಪ್‌ನಲ್ಲಿ ನಿರಾಣಿ ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಸಂದೇಶ ಹಂಚಿದ್ದರು. ಈ ಸಂಬಂಧ, ಐಪಿಸಿ ಸೆಕ್ಷನ್ 153 A, 295, 295-A ಅಡಿ ಕ್ರಮ ಕೋರಿ ದೂರು ಸಲ್ಲಿಸಲಾಗಿತ್ತು. ಗೋವಿಂದರಾಮ್ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. ಇದೀಗ, ಜನಪ್ರತಿನಿಧಿಗಳ ಕೋರ್ಟ್ ಆದೇಶ ಹಿನ್ನೆಲೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ತನಿಖೆ ನಡೆಯಲಿದೆ. ಹಾಗೂ ಎಫ್ಐಆರ್ ಆಗುವ ಸಾಧ್ಯತೆ ಇದೆ ಎಂದೂ ಅಂದಾಜಿಸಲಾಗಿದೆ.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಝೀರೋ ಟ್ರಾಫಿಕ್ ಬಳಸಿ ಆಗಮಿಸಿದ ಹಿನ್ನೆಲೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಪಿಐಎಲ್ ವಿಚಾರಣೆಯನ್ನು ಇಂದು (ಆಗಸ್ಟ್ 18) ನಡೆಸಲಾಗಿದೆ. ವಕೀಲ ಬಾಲಾಜಿ ನಾಯ್ಡು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಲಾಗಿದೆ. ಶಶಿಕಲಾ ಜೊಲ್ಲೆಗೆ ಏರ್​ಪೋರ್ಟ್​ನಿಂದ ರಾಜಭವನದವರೆಗೂ ಝೀರೋ ಟ್ರಾಫಿಕ್ ನೀಡಲಾಗಿತ್ತು. ಹೀಗೆ ಝೀರೋ ಟ್ರಾಫಿಕ್ ಒದಗಿಸಲು ಮಾನದಂಡವೇನು? ಝೀರೋ ಟ್ರಾಫಿಕ್​ಗೆ ಹೇಗೆ ಅನುಮತಿ ನೀಡಿದ್ದೀರಿ ಎಂದು ಕೇಳಿ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ನೋಟಿಸ್ ಜಾರಿಗೊಳಿಸಿದೆ. ಈ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ಕೊಡಲಾಗಿದೆ.

ಮಕ್ಕಳ ಮೇಲೆ ಸುಡುವ ಎಣ್ಣೆ ಸುರಿದಿದ್ದ ಮಹಿಳೆಗೆ ಶಿಕ್ಷೆ ಮಕ್ಕಳ ಮೇಲೆ ಸುಡುವ ಎಣ್ಣೆ ಸುರಿದಿದ್ದ ಮಹಿಳೆಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ರೂಪಾಯಿ ದಂಡ ವಿಧಿಸಿ ಕಲಬುರಗಿ ಜಿಲ್ಲಾ ಒಂದನೇ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಶ್ರಿದೇವಿ ಕೊರವಾರ (57) ಎಂಬಾಕೆ ಶಿಕ್ಷೆಗೆ ಗುರಿಯಾದ ಮಹಿಳೆ ಆಗಿದ್ದಾಳೆ. 2019 ರ ಮಾರ್ಚ್ 25 ರಂದು ನಡೆದಿದ್ದ ಘಟನೆಯಲ್ಲಿ, ಅಹನಾ, ಪಾರ್ವತಿ ಎಂಬ ಇಬ್ಬರು ಮಕ್ಕಳ ಮೇಲೆ ಈ ಮಹಿಳೆ ಸುಡುವ ಎಣ್ಣೆ ಸುರಿದಿದ್ದಳು. ಈ ಬಗ್ಗೆ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ತೃತೀಯ ಲಿಂಗಿಗಳಿಗೆ ಸರ್ಕಾರಿ ನಿಗಮಗಳಲ್ಲೂ ಶೇಕಡಾ 1ರಷ್ಟು ಮೀಸಲಾತಿ ಸೂಕ್ತ: ಕರ್ನಾಟಕ ಹೈಕೋರ್ಟ್

Covishield: ಎರಡು ಡೋಸ್ ಕೊವಿಡ್ ಲಸಿಕೆ ಪಡೆದರೂ ಮತ್ತೆ ವ್ಯಾಕ್ಸಿನ್ ಬೇಕೆಂದು ಕೋರ್ಟ್ ಮೊರೆ ಹೋದ ಕೇರಳಿಗ!