ಡಿಕೆಶಿಗೆ ಟಾಂಗ್- ಸಿದ್ದರಾಮಯ್ಯ ಇಮೇಜ್​ ಬಿಲ್ಡಿಂಗ್​: ಯತೀಂದ್ರ ಸಾರಥ್ಯದಲ್ಲಿ ಹೊಸ ಸೋಷಿಯಲ್ ಮೀಡಿಯಾ ತಂಡ ಅಖಾಡಕ್ಕೆ

| Updated By: ಸಾಧು ಶ್ರೀನಾಥ್​

Updated on: Aug 09, 2021 | 9:39 AM

ಇನ್ನೇನು ವಿಧಾನಸಭೆ ಸಾರ್ವತ್ರಿಕ ಚುನಾವಣೆ ಎದುರಿಗೇ ಬಂದಿರುವಾಗ ಸಿದ್ದರಾಮಯ್ಯ ಇಮೇಜ್ ವೃದ್ಧಿಗೆ ಪ್ರತ್ಯೇಕ ತಂಡ ಕಟ್ಟಲಾಗಿದೆ. ಸಿದ್ದರಾಮಯ್ಯ ಅವರ ಪುತ್ರ, ವರುಣ ಕ್ಷೇತ್ರದ ಶಾಸಕ ಡಾ. ಯತೀಂದ್ರ ಅವರ ಸಾರಥ್ಯದಲ್ಲಿಯೇ ಸೋಷಿಯಲ್ ಮೀಡಿಯಾ ತಂಡ ಇದೀಗ ಅಖಾಡಕ್ಕೆ ಇಳಿದಿದೆ.

ಡಿಕೆಶಿಗೆ ಟಾಂಗ್- ಸಿದ್ದರಾಮಯ್ಯ ಇಮೇಜ್​ ಬಿಲ್ಡಿಂಗ್​: ಯತೀಂದ್ರ ಸಾರಥ್ಯದಲ್ಲಿ ಹೊಸ ಸೋಷಿಯಲ್ ಮೀಡಿಯಾ ತಂಡ ಅಖಾಡಕ್ಕೆ
ಡಿಕೆಶಿಗೆ ಟಾಂಗ್: ಸಿದ್ದರಾಮಯ್ಯ ಇಮೇಜ್​ ಬಿಲ್ಡಿಂಗ್​, ಯತೀಂದ್ರ ಸಾರಥ್ಯದಲ್ಲಿ ಹೊಸ ಸೋಷಿಯಲ್ ಮೀಡಿಯಾ ತಂಡ ಅಖಾಡಕ್ಕೆ
Follow us on

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನಂಬರ್ 1 ಮತ್ತು ನಂಬರ್​ 2 ನಾಯಕರು ಎಂದು ಗುರುತಿಸಿಕೊಂಡಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ​ಡಿಕೆ ಶಿವಕುಮಾರ್ ಅವರ ಮಧ್ಯೆ ಮತ್ತೆ ಸೋಷಿಯಲ್ ಮೀಡಿಯಾ ಕದನ ಶುರುವಾಗಿದೆ. ಕಾಂಗ್ರೆಸ್‌ನಲ್ಲಿ ಮತ್ತೆ ಸೋಷಿಯಲ್ ಮೀಡಿಯಾ ಕದನದ ಕದ ತೆಗೆದಿದ್ದು ಡಿಕೆಶಿಗೆ ಟಾಂಗ್ ಕೊಡಲು ಸಿದ್ದರಾಮಯ್ಯ ಟೀಂ ಮುಂದಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಮೇಜ್ ಮತ್ತು ಬ್ರ್ಯಾಂಡಿಂಗ್ ಬಲಪಡಿಸಲು ಸೋಷಿಯಲ್ ಮೀಡಿಯಾಗೆ ಪ್ರತ್ಯೇಕ ತಂಡ ರಚಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ​ಡಿಕೆ ಶಿವಕುಮಾರ್ ಈ ಹಿಂದೆ ಡಿಸೈನ್ ಬಾಕ್ಸ್ ಸಂಸ್ಥೆಗೆ ಸೋಷಿಯಲ್ ಮೀಡಿಯಾ ಜವಾಬ್ದಾರಿ ನೀಡಿದ್ದರು. ಆದರೆ ಡಿಸೈನ್ ಬಾಕ್ಸ್ ತಂಡ ಕೇವಲ ಡಿಕೆಶಿ ಅವರನ್ನು ಬಿಂಬಿಸುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು. ಪಕ್ಷದ ವೇದಿಕೆಯಲ್ಲಿಯೂ ಇದನ್ನು ಕೆಲ ನಾಯಕರು ಪ್ರಸ್ತಾಪಿಸಿದ್ದರು.

ವಿಧಾನಸಭೆ ಸಾರ್ವತ್ರಿಕ ಚುನಾವಣೆ ಎದುರಿಗೇ ಬಂದಿರುವಾಗ…
ಈ ಹಿನ್ನೆಲೆಯಲ್ಲಿ ಇನ್ನೇನು ವಿಧಾನಸಭೆ ಸಾರ್ವತ್ರಿಕ ಚುನಾವಣೆ ಎದುರಿಗೇ ಬಂದಿರುವಾಗ ಸಿದ್ದರಾಮಯ್ಯ ಇಮೇಜ್ ವೃದ್ಧಿಗೆ ಪ್ರತ್ಯೇಕ ತಂಡ ಕಟ್ಟಲಾಗಿದೆ. ಸಿದ್ದರಾಮಯ್ಯ ಅವರ ಪುತ್ರ, ವರುಣ ಕ್ಷೇತ್ರದ ಶಾಸಕ ಡಾ. ಯತೀಂದ್ರ ಅವರ ಸಾರಥ್ಯದಲ್ಲಿಯೇ ಸೋಷಿಯಲ್ ಮೀಡಿಯಾ ತಂಡ ಇದೀಗ ಅಖಾಡಕ್ಕೆ ಇಳಿದಿದೆ.

ಡಿಸೈನ್ ಬಾಕ್ಸ್ ತಂಡ ಕೇವಲ ಡಿಕೆಶಿ ಅವರನ್ನು ಬಿಂಬಿಸುತ್ತಿದೆ ಎಂಬ ಆರೋಪ

‘ಅವಾ ಯಾವನೊ ಡಿಕೆ ಪಾಕೆ ಅಂತೆಲ್ಲ ಹೇಳ್ತಾನೆ, ನನ್ ಹಾಳ್ ಮಾಡೋಕೆ ಈ ಕೆಲಸ ಮಾಡ್ತಿದ್ದೀರಾ’: ಅಭಿಮಾನಿಗಳ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ
(New team headed by Dr Yathindra Siddaramaiah to build siddaramaiah image in social media)

Published On - 9:29 am, Mon, 9 August 21